ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಜಲಮಂಡಳಿ ಬಿಸಿ ಮುಟ್ಟಿಸಿದೆ. ಕುಡಿಯುವ ನೀರನ್ನು ಅನ್ಯಬಳಕೆ ಮಾಡಿ ನಿಯಮ ಉಲ್ಲಂಘಿಸಿದವರಿಗೆ ದಂಡದ ಬರೆ ಎಳೆದಿದೆ.
ಕುಡಿಯುವ ನೀರನ್ನ ಅನ್ಯ ಕೆಲಸಗಳಿಗೆ ಬಳಸಬಾರದು. ಹಾಗೆ ಮಾಡಿದರೆ ದಂಡ ಹಾಕುತ್ತೇವೆ ಎಂದು ಆದೇಶ ಮಾಡಿತ್ತು. ಆದೇಶವನ್ನೂ ಲೆಕ್ಕಿಸದೇ ಕುಡಿಯುವ ನೀರನ್ನ ಅನ್ಯ ಕಾರ್ಯಗಳಿಗೆ ಬಳಿಸಿದವರಿಗೆ ದಂಡ ಹಾಕಲಾಗಿದೆ.
ಇದನ್ನು ಓದಿ :ಅರಳುವ ಮುನ್ನವೇ ಅನಾಥವಾದ ಹಾಸನ ವಿಶ್ವ ವಿದ್ಯಾಲಯ
ಬೆಂಗಳೂರಿನ 417 ಜನರಿಗೆ ನೋಟಿಸ್ ನೀಡಿ ಜಲಮಂಡಳಿ ದಂಡ ಹಾಕಿದೆ. 417 ಜನರಿಗೆ 20.85 ಲಕ್ಷ ದಂಡ ಹಾಕಲಾಗಿದೆ. ಬೆಂಗಳೂರು ಪೂರ್ವ ಭಾಗದ ಜನರು ಹೆಚ್ಚು ನಿಯಮ ಉಲ್ಲಂಘನೆ ಮಾಡಿದ್ದಾರೆ.
ಎಲ್ಲೆಲ್ಲಿ ಎಷ್ಟು ಕೇಸ್?
1. ಬೆಂಗಳೂರು ಪೂರ್ವ ವಲಯ – 105 ಕೇಸ್
ದಂಡ – 4.25 ಲಕ್ಷ ರೂ.
2. ಬೆಂಗಳೂರು ಪಶ್ಚಿಮ ವಲಯ – 111 ಕೇಸ್
ದಂಡ – 5.55 ಲಕ್ಷ ರೂ.
3. ಬೆಂಗಳೂರು ಉತ್ತರ ವಲಯ – 84 ಕೇಸ್
ದಂಡ – 3.20 ಲಕ್ಷ ರೂ.
4. ಬೆಂಗಳೂರು ದಕ್ಷಿಣ ವಲಯ – 115 ಕೇಸ್
ದಂಡ – 5.70 ಲಕ್ಷ ರೂ.
ಇದನ್ನು ಓದಿ :ದುಡಿಯುವ ಬಡಜನರ ಬಗ್ಗೆ ನಾಚಿಕೆಗೆಟ್ಟ ಸಿನಿಕತನದ ಬಜೆಟ್