ಕಲಬುರಗಿ: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತರ ಕೈವಾಡ ಇದೆ, ಇದರಲ್ಲಿ ಪರೋಕ್ಷವಾಗಿ ಪ್ರಿಯಾಂಕ್ ಕೈವಾಡ ಇದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಇದೀಗ ಆವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ನಿಜಾಮ
ಈ ವೇಳೆ ಮಾತನಾಡಿದ ಆರ್ ಅಶೋಕ್, ಈ ಸಂಬಂಧ ಬಿಜೆಪಿ ನಾಯಕರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿಜಾಮನ ನರ ಕಿತ್ತಿದ್ದ ಜನ ನಾವು, ಇವಾಗ ಕಾಂಗ್ರೆಸ್ ಕಿತ್ತು ಒಗೆಯಬೇಕಿದೆ. ಅವರು, ನಿಜಾಮನ ನರ ಕಿತ್ತಿದ್ದ ಜನ ನಾವು, ಈಗ ಎಲ್ಲಿ ಇದ್ದೇವೆ? ಇವಾಗ ನಾವು ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಒಗೆಯಬೇಕಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ರೈತ ನಾಯಕ, KPRS ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ ನಿಧನ -KPRS ಶ್ರದ್ಧಾಂಜಲಿ
ರಾಜ್ಯದಲ್ಲಿ ಎಸ್ ಎಸ್ ಸರ್ಕಾರ ಇದೆ. ಎಸ್ ಅಂದ್ರೆ ಸುಪಾರಿ ಎಸ್ ಅಂದ್ರೆ ಸುಸೈಡ್ ಸರ್ಕಾರ. ಕಳಪೆ ಮೆಡಿಸಿನ್ ತಂದು ಆಸ್ಪತ್ರೆಗೆ ಕೊಟ್ಟು ಬಾಣಂತಿಯರು ಸಾವಿಗೆ ಕಾರಣವಾಯಿತು ಈ ಸರ್ಕಾರ. ಮಗು ಜನ್ಮ ಪಡೆದ್ರೆ ತಾಯಿ ಸವನ್ನಪಿದ್ರು. ಪೊಲೀಸರು ಕಬ್ಬಿನ ಗದ್ದೆಗಳು ಸೇಫ್ಟಿ ಅಂತ ಅಲ್ಲಿ ಇಡ್ತಾರೆ. ರವಿ ಅವರನ್ನು ಕಬ್ಬಿನ ಗದ್ದೆಗೆ ಕರ್ಕೊಂಡು ಹೋದರು. ಯಾಕ್ ಅವರನ್ನು ಕರ್ಕೊಂಡು ಹೋದ್ರು? ಎಂದು ಪ್ರಶ್ನೆ ಮಾಡಿದರು.
ಅಂಬೇಡ್ಕರ ಶವ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ಮಾಡ್ಲಿಲ್ಲ, ಅದೇ ಇಂದಿರಾ ಗಾಂಧಿ ರಾಜೀವ್ ಗಾಂಧಿಗೆ 5 ಎಕರೆ ಭೂಮಿ ಕೊಟ್ಟುರು. 15 ದಿನ ಆದ್ರೂ ಯಾರನ್ನು ಬಂಧನ ಮಾಡಿಲ್ಲ ಯಾಕೆ? ನಿಮಗೆ ನಾಚಿಕೆ ಆಗಬೇಕು. ಅಂಬೇಡ್ಕರ್ ಹೆಸರು ಹೇಳೀರಿ ಅವರಿದ್ದಾಗ ಅವರನ್ನು ಇದೇ ಕಾಂಗ್ರೆಸ್ ನವರು ಸೋಲಿಸಿದ್ರು. ಅವರನ್ನು 2 ಬಾರಿ ಸೋಲಿಸಿ ಇವಾಗ ಅವರ ಬರೆದ ಪುಸ್ತಕ ಕೊಡ್ಕೊಂಡು ಓಡಾಡುತ್ತಾರೆ . ನಿಮಗೆ ನಾಚಿಕೆ ಆಗಲ್ವಾ, ಸಂವಿಧಾನ ಹಿಡ್ಕೊಂಡು ಓಡಾಡಲು .. ಅಂಬೇಡ್ಕರ ಅವರನ್ನು ಶವ ಸಂಸ್ಕಾರ ಮಾಡಲು ದೆಹಲಿಯಲ್ಲಿ ಜಾಗ ಮಾಡ್ತಿಲ್ಲ. ಇಂದಿರಾ ಗಾಂಧಿ ರಾಜೀವ್ ಗಾಂಧಿ ಅವರಿಗೆ 5 ಎಕರೆ ಭೂಮಿ ಕೊಟ್ರು. ಕಾಂಗ್ರೆಸ್ ನವರಿಗೆ ನಾಚಿಗೆ ಆಗಬೇಕು ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ನೋಡಿ : ನಡುರಸ್ತೇಲಿ ಶರ್ಟ್ ಬಿಚ್ಚಿ ಚಾಟಿಯಿಂದ ಬಾರಿಸಿಕೊಂಡು ಹುಚ್ಚಾಟ ಮೆರೆದ ಅಣ್ಣಾಮಲೈ Janashakthi Media