ಉಪಚುನಾವಣೆ : ಬಿಜೆಪಿಗೆ ಆರಂಭಿಕ ಮುನ್ನಡೆ

ಬೆಂಗಳೂರು : ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ಶಿರಾ ಮತ್ತು ಆರ್, ಆರ್, ನಗರದ  ಮತ ಎಣಿಕೆ ಆರಂಭವಾಗಿದ್ದು ಆರ್. ಆರ್. ನಗರದಲ್ಲಿ ಮುನಿರತ್ನರವರು ಮುನ್ನಡೆ ಕಾಯ್ದುಕೊಂಡಿದ್ದರೆ, ಶಿರಾ ದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲದ ಪೈಪೋಟಿ ನಡೆಸುತ್ತಿವೆ.

ಬೆಂಗಳೂರಿನ ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರ ಮತ್ತು ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದ ಜಿದ್ದಾಜಿದ್ದಿನ ಕಣದಲ್ಲಿ ಮೂರೂ ಪಕ್ಷಗಳಿಂದ ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆರ್‌ಆರ್‌ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್‌ನಿಂದ ಕುಸುಮಾ ಮತ್ತು ಜೆಡಿಎಸ್‌ನಿಂದ ವಿ ಕೃಷ್ಣಮೂರ್ತಿ ಕಣದಲ್ಲಿದ್ದಾರೆ.  ಶಿರಾದಲ್ಲಿ ಕಾಂಗ್ರೆಸ್‌ನಿಂದ ಟಿಬಿ ಜಯಚಂದ್ರ, ಬಿಜೆಪಿಯಿಂದ ಡಾ.ಎಂ ಆರ್‌ ರಾಜೇಶ್ ಮತ್ತು ಜೆಡಿಎಸ್‌ನಿಂದ ಅಮ್ಮಜಮ್ಮಾ ತಮ್ಮ ಗೆಲುವಿಗಾಗಿ ಪ್ರಯತ್ನ ನಡೆಸಿದ್ದರು. ಆದರೆ ಮತ ಏಣಿಕಿಯೆ ಕಾರ್ಯ ಆರಂಬವಾಗಿದ್ದು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆರ್.ಆರ್. ನಗರದಲ್ಲಿ  7 ಸುತ್ತಿನ ಮತ ಎಣಿಕೆ ಮುಗಿದಿದ್ದರು ಜೆಡಿಎಸ್ 1000 ಮತಗಳನ್ನು ಪಡೆಯಲು ಪರದಾಡುತ್ತಿತ್ತು.

ಆರ್. ಆರ್ ನಗರದಲ್ಲಿ 12ನೇ ಸುತ್ತಿನ ಮತ ಎಣಿಕೆ ಮುಗದಿದ್ದು  31235 ಮತಗಳ ಭರ್ಜರಿ ಮುನ್ನಡೆಯನ್ನು ಮುನಿರತ್ನರವರು  ಕಾಯ್ದುಕೊಂಡಿದ್ದಾರೆ.  ಕಾಂಗ್ರೆಸ್‌ನ ಕುಸುಮಾ 33625 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಮುನಿರತ್ನ 64852 ಮತಗಳನ್ನು ಪಡೆದಿದ್ದಾರೆ.

ಶಿರಾದಲ್ಲಿ 9ನೇ ಹಂತದ ಮತ ಎಣಿಕೆ ಮುಗಿದಿದ್ದು  ಬಿಜೆಪಿಗೆ 4777 ಮತಗಳ ಅಲ್ಪ ಮುನ್ನಡೆ ಸಿಕ್ಕಿದೆ. ಬಿಜೆಪಿಯ ರಾಜೇಶಗೌಡ  24,207, ಕಾಂಗ್ರೆಸ್ ನ ಜಯಚಂದ್ರ  22,430, ಜೆಡಿಎಸ್ ಅಮ್ಮಾಜಮ್ಮ 15051 ಮತಗಳನ್ನು ಪಡೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *