ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯ ಕಣ ರಂಗೇರತೊಡಗಿದೆ, ಗೆಲುವಿಗಾಗಿ ಅಭ್ಯರ್ಥಿಗಳು ಕಸರತ್ತು ನಡೆಸಿದ್ದು, ಹಣ, ಸೀರೆ ಹಂಚಿ ಮತದಾರರನ್ನು ಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕೆಲವೆಡೆ ಸೆಟಾಪ್ಸ್ ಬಾಕ್ಸ್ ವಿತರಣೆ ಮಾಡವ ಮೂಲಕ ಮತದಾರನಿಗೆ ಆಮೀಷ ಒಡ್ಡಲಾಗುತ್ತಿದೆ. ಮೂರು ಪಕ್ಷಗಳು ನಾ ಮುಂದು, ತಾ ಮುಂದೆ ಎಂದು ಹಣ ಹಂಚುವ ಪೈಪೋಟಿಗೆ ಇಳಿದಿದ್ದಾರೆ.
ಹಣ ಹಂಚಾತಾ ಇರೋದು ಕಣ್ಣಿಗೆ ಕಾಣ್ತಾ ಇದ್ರೂ ಚುನಾವಣಾ ಆಯೋಗ ಯಾಕೆ ಕಣ್ಮುಚ್ಚಿ ಕುಳತಿದೆ? ಜಣ ಜಣ ಕಾಂಚಾಣದ ಆಮೀಷೆಗೆ ಒಳಗಾದ್ನಾ ಮತದಾರ? ಈ ಉಪ ಚುನಾವಣೆಯಲ್ಲಿ ಹಣಬಲ ಮತ್ತು ಜಾತಿ ಬಲ ಹೆಚ್ಚಾಗಿ ಸದ್ದು ಮಾಡಲು ಕಾರಣ ಏನು?
ರಾಜರಾಜೇಶ್ವರಿ ಮತ್ತು ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಮನೆ ಮನೆಗೆ ದುಡ್ಡು ಹಂಚಲಾಗುತ್ತಿದೆ. ಒಂದು ಮತಕ್ಕೆ ಇಂತಿಷ್ಟು ಹಣ ಎಂದು ಫಿಕ್ಸ್ ಮಾಡಿ ಹಂಚಲಾಗುತ್ತಿದೆ. ಕೆಲವು ಕಡೆ ಸೀರಿ ಹಂಚಲಾಗುತ್ತಿದೆ, ಹೆಂಡವನ್ನು ಹಂಚಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹಣ ಹಂಚುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಈ ಉಪ ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಕಾರಣಕ್ಕಾಗಿ ಆಡಳಿತ ಪಕ್ಷ ನೀರಿನಂತೆ ಹಣವನ್ನು ಖರ್ಚು ಮಾಡಲಾಗುತ್ತಿದೆ. ರಾಜರಾಜೇಶ್ವರಿ ನಗರದ ಅಭ್ಯರ್ಥಿ ಮುನಿರತ್ನರವರು ಸೆಟಪ್ ಬಾಕ್ಸ್ ನ್ನು ಹಂಚುವ ಮೂಲಕ ಮತದಾರರಿಗೆ ಆಮೀಷ ಒಡ್ಡುತ್ತಿದ್ದಾರೆ. ಮತದಾರರಿಗೆ ಸೆಟೆಪ್ ಬಾಕ್ಸ್ ಹಂಚುತ್ತಿರುವುದಾಗಿ ಸ್ವತ: ಮುನಿರತ್ನರವರೇ ಒಪ್ಪಿಕೊಂಡಿದ್ದಾರೆ. ‘ಸೆಟಾಪ್ ಬಾಕ್ಸ್ ನನ್ನ ಬಿಸನೆಸ್ ಹಿಂದೆಯೂ ಕೊಟ್ಟಿದ್ದೇನೆ, ಈಗಲೂ ಕೊಡುತ್ತಿದ್ದೇನೆ’ ಎಂದು ಮಾಧ್ಯಮದವರ ಮುಂದೆ ಒಪ್ಪಿಕೊಂಡಿದ್ದಾರೆ. ಮುನಿರತ್ನರವರು ಸೆಟೆಪ್ ಬಾಕ್ಸ್ ವಿತರಣೆ ಮಾಡಿದ್ದು ತಪ್ಪಲ್ಲ ಎಂದು ಮುಖ್ಯಮಂತ್ರಿ ಸೇರಿದಂತೆ ಇಡೀ ಸಚಿವ ಸಂಪುಟ ಮುನಿರತ್ನರವರ ಕ್ರಮವನ್ನು ಸಮರ್ತಿಸಿಕೊಳ್ಳುತ್ತಿದೆ.
ಸರಕಾರದ ಈ ನಡೆಯನ್ನು ಪ್ರಜಾಪ್ರಭುತ್ವದ ಕೊಲೆ ಹಾಗೂ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿರುವುದನ್ನು ತೋರಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನು ನೋಡಿಯೂ ಚುನಾವಣಾ ಆಯೋಗ ಮೌನ ವಹಿಸಿರುವುದನ್ನು ನೋಡಿದರೆ, ಈ ಉಪಚುನಾವಣೆಯಲ್ಲಿ ನಾವು ಏನೇ ಮಾಡಿದರೂ ಮೂಗು ತೂರಿಸಬೇಡಿ ಎಂದು ಚುನಾವಣಾ ಆಯೋಗಕ್ಕೆ ಸರಕಾರ ಶಿಫಾರಸ್ಸು ಹೊರಡಿಸಿದಂತೆ ಕಾಣುತ್ತದೆ. ಉಪಚುನಾವಣೆಯಲ್ಲಿ ಬಿಜೆಪಿ ಹಣ ಹಂಚುತ್ತಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಡಿ.ಕೆ.ಶಿವಕುಮಾರ್ ದೂರು ನೀಡಿದ್ದಾರೆ. ಅಕ್ರಮಗಳನ್ನು ತಡೆಯುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ಇದನ್ನು ಓದಲು ಲಿಂಕ್ ಒತ್ತಿ : ಪಶ್ಚಿಮ ಪದವೀದರ ವಿಧಾನ ಪರಿಷತ್ ಗೆಲ್ಲುವವರು ಯಾರು?
ಮೂರು ಪಕ್ಷಗಳು ಜಾತಿಯ ಬಲವನ್ನು ಬಳಸಿ ಗೆಲ್ಲುವುದಕ್ಕಾಗಿ ಪೂಪೋಟಿ ನಡೆಸಿವೆ. ಎರಡು ಕ್ಷೇತ್ರಗಳಲ್ಲೂ ಒಕ್ಕಲಿಗರ ಮತಗಳು ನಿರ್ಣಾಯಕವಾಗಿದ್ದು ಜಾತಿ ಕಾರ್ಡನ್ನು ಬಳಸಲಾಗುತ್ತಿದೆ. ಇತ್ತ ಜಾತ ಬಲ ಇನ್ನೊಂದೆಡೆ ಹಣ ಬಲ ಬಳಿಸಿ ಮತದಾರರನ್ನು ಕೊಂಡುಕೊಳ್ಳುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ. ಹಣ ಹಂಚುತ್ತಿರುವ ಅಭ್ಯರ್ಥಿಗಳಿಗೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತೇವೆ ಎಂದು ಶಿರಾ ಮತ್ತು ಆರ್. ಆರ್. ನಗರದ ಮತದಾರರು ಹೇಳುತ್ತಿದ್ದಾರೆ.
ಇಷ್ಟೆಲ್ಲ ನಡೆಯುತ್ತಿದ್ದರೂ ಮೂರು ಪಕ್ಷಗಳ ಮೇಲೆ ದೂರು ದಾಖಲಾಗುತ್ತಿಲ್ಲ, ಎನ್.ಸಿ.ಆರ್ (ಗಂಭಿರವಲ್ಲದ ಪ್ರಕರಣದಲ್ಲಿ) ಕೆಲವಡೆ ದೂರು ದಾಖಲಿಸಿದ್ದು ಬಿಟ್ಟರೆ ಚುನಾವಣಾ ಆಯೋಗ ಸಂಪೂರ್ಣವಾಗಿ ಕಣ್ಮುಚ್ಚಿ ಕುಳಿತಂತದೆ ಕಾಣುತ್ತದೆ. ಬಹಿರಂಗ ಪ್ರಚಾರ ಭಾನುವಾರ ಕೊನೆಗೊಂಡಿದ್ದು, ಮತದಾನಕ್ಕೆ ಕೇವಲ ಒಂದುದಿನ ಮಾತ್ರ ಬಾಕಿ ಇದೆ. ಈ ಒಂದು ದಿನದಲ್ಲಿ ಇನ್ನಷ್ಟು ಹಣ, ಹೆಂಡ, ಸೀರೆಯನ್ನು ಹಂಚಬಹುದು ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಇದಕ್ಕೆ ಬ್ರೆಕ್ ಹಾಕುತ್ತಾ? ಮತದಾರ ತನ್ನ ಮತವನ್ನು ಮಾರದೆ ಮತದಾನ ತನ್ನ ಹಕ್ಕು ಎಂದು ಶಿಸ್ತಿನಿಂದ ಮತ ಚಲಾಯಿಸುತ್ತಾನಾ? ಕಾದು ನೋಡಬೇಕಿದೆ.