ಲಕ್ನೋ : 32 ವರ್ಷದ ವಿಶೇಷ ಪ್ರಕರಣ ಒಂದರ ವಿಚಾರಣೆ ನಡೆಸುತ್ತಿದ್ದ ಲಖನೌ ಸಿಬಿಐ ಕೋರ್ಟ್ ನಿನ್ನೆ ತೀರ್ಪು ಪ್ರಕಟಿಸಿದೆ. 100 ರೂಪಾಯಿ ಲಂಚ ಪಡೆದ ಕಾರಣಕ್ಕೆ ರೈಲ್ವೇ ಇಲಾಖೆಯ ನಿವೃತ್ತ ಕ್ಲರ್ಕ್ಗೆ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ರಾಮ್ ನಾರಾಯಣ ವರ್ಮಾ (82) ಶಿಕ್ಷೆಗೆ ಒಳಗಾದವರು.
ಸಿಬಿಐನ ವಿಶೇಷ ನ್ಯಾಯಾಧೀಶ ಅಜೈ ವಿಕ್ರಂ ಸಿಂಗ್ ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿಗೆ 82 ವರ್ಷವಾಗಿದ್ದರೂ, ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಲು ನ್ಯಾಯಾಧೀಶರು ನಿರಾಕರಿಸಿದ್ದಾರೆ. ಲಂಚ ಸ್ವೀಕಾರ ತಪ್ಪು ಮತ್ತು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಲಿದೆ ಎಂಬ ಕಾರಣಕ್ಕೆ ಅಪರಾಧಿಗೆ ಪೂರ್ಣ ಪ್ರಮಾಣದ ಶಿಕ್ಷೆಯನ್ನು ನೀಡಿದ್ದಾರೆ.
ಒಂದು ವರ್ಷ ಜೈಲು ಶಿಕ್ಷೆಯ ಜೊತೆಗೆ 15 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ. 32 ವರ್ಷದ ಹಿಂದಿನ ಪ್ರಕರಣ ಇದಾಗಿದ್ದು, ವರ್ಮಾ ಈಗಾಗಲೇ ಎರಡು ದಿನ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. 1991ರಲ್ಲಿ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದರು. ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಸಿಬಿಐ ಅಧಿಕಾರಿಗಳು ನವೆಂಬರ್ 30, 2022ರಂದು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು.