ನವದೆಹಲಿ: ಸಂವಿಧಾನವನ್ನು ಅಂಗೀಕರಿಸಿ ಇಂದಿಗೆ 75 ವರ್ಷ ಪೂರೈಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರದಿಂದ (ನವೆಂಬರ್ 28) ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆರಂಭಿಸಿದೆ. ದೇಶದ ಸಂವಿಧಾನವನ್ನು ಅಂಗೀಕರಿಸಿದ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ 75 ರೂಪಾಯಿ ನಾಣ್ಯ ಮತ್ತು ಅಂಚೆ ಚೀಟಿಯನ್ನ ಬಿಡುಗಡೆ ಮಾಡಿದರು.
‘ನಮ್ಮ ಸಂವಿಧಾನ, ನಮ್ಮ ಆತ್ಮಗೌರವ’ ಅಭಿಯಾನದ ಅಡಿಯಲ್ಲಿ, ಇದು ಹಳೆಯ ಸಂಗನ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು.ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಸಂಸತ್ತಿನಲ್ಲಿ ದೇಶದ ಸಂವಿಧಾನವನ್ನು ಅಂಗೀಕರಿಸಿದ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ 75 ರೂಪಾಯಿ ನಾಣ್ಯ ಮತ್ತು ಅಂಚೆ ಚೀಟಿಯನ್ನ ಬಿಡುಗಡೆ ಮಾಡಿದರು. ನವದೆಹಲಿಯ ಸಂವಿಧಾನ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಈ ಐತಿಹಾಸಿಕ ನಾಣ್ಯವನ್ನು ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ಸಂವಿಧಾನ – ಓದು ಅಧ್ಯಯನ- ಅರಿವಿನ ಹಾದಿ; ಗ್ರಾಂಥಿಕ ಸಂವಿಧಾನ – ಸಾಂವಿಧಾನಿಕ ಆಶಯಗಳನ್ನು ಮೌಖಿಕವಾಗಿ ತಳಸಮಾಜಕ್ಕೆ ತಲುಪಿಸಬೇಕಿದೆ
ಸಂವಿಧಾನ ದಿನದಂದು ಸಂಸತ್ತಿನ ಉಭಯ ಸದನಗಳ ಜಂಟಿ ಸಭೆಯಮ್ಮ ಉದ್ದೇಶಿಸಿ ಮಾಪನಾಡಿದ ರಾಷ್ಟ್ರಪತಿ ಮುರ್ಮು ಅವರು, ಸಂವಿಧಾನವು ಜೀವಂತ ಮತ್ತು ಪ್ರಗತಿಪರ ದಾಖಲೆಯಾಗಿದೆ ಎಂದು ಹೇಳಿದರು. 75 ವರ್ಷಗಳ ಹಿಂದೆ ಸಂವಿಧಾನದ ಅಂಗೀಕಾರ ಒಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು. ದೇಶದ ಅಡಿವಾಯದ ಪಠ್ಯವನ್ನು ರೂಪಿಸುವಲ್ಲಿ ಸಂವಿಧಾನ ಸಭೆಯ 15 ಮಹಿಳಾ ಸದಸ್ಯರ ಕೊಡುಗೆಯನ್ನು ಒತ್ತಿ ಹೇಳಿದರು.
ಎಲ್ಲಾ ಭಾರತೀಯರು ತಮ್ಮ ನಡವಳಿಕೆಯಲ್ಲಿ ಸಾಂವಿಧಾನಿಕ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ತಮ್ಮ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಬೇಕು. 2047ದ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ರಾಷ್ಟ್ರೀಯ ಗುರಿಯನ್ನು ಸಾಧಿಸಲು ಕೆಲಸ ಮಾಡಬೇಕು ಎಂದು ರಾಷ್ಟ್ರಪತಿ ಮುರ್ಮು ತಿಳಿಸಿದರು.
ಸಂವಿಧಾನ ದಿನಾಚರಣೆಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರ ನಡುವ ಇರಲು ನನಗೆ ತುಂಬಾ ಸಂತೋಷವಾಗುತ್ತಿದೆ, ಸಂವಿಧಾನವು ನಮ್ಮ ದೇಶದ ಅತ್ಯಂತ ಪವಿತ್ರ ಗ್ರಂಥವಾಗಿದೆ. ನಮ್ಮ ಸಂವಿಧಾನವು ನಮ್ಮ ಪ್ರಜಾಪ್ರಭುತ್ನ ಗಣರಾಜ್ಯದ ಬಲವಾದ ಅಡಿಪಾಯವಾಗಿದೆ. ನಮ್ಮ ಸಂವಿಧಾನವು ನಮ್ಮ ಸಾಮೂಹಿಕ ಮತ್ತು ವೈಯಕ್ತಿಕ ಸ್ವಾಭಿಮಾನವನ್ನು ಖಾತ್ರಿಪಡಿಸುತ್ತದೆ. ನಮ್ಮ ದೇಶದ ವೈವಿಧ್ಯತೆಯು ನಮ್ಮ ಸಂವಿಧಾನ ಸಭೆಯಲ್ಲಿ ಅಭಿವ್ಯಕ್ತಿ ಪಡೆಯಿತು. ಸಂವಿಧಾನ ಸಭೆಯಲ್ಲಿ ಎಲ್ಲಾ ಪ್ರಾಂಗಳು ಮತ್ತು ಪ್ರಾಂತ್ಯಗಳ ಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ಅಖಿಲ ಭಾರತ ಪ್ರಜ್ಞೆಗೆ ಧ್ವನಿ ಸಿಕ್ಕಿತು ಎಂದು ಹೇಳಿದರು.
ಇದನ್ನೂ ನೋಡಿ : ನವೆಂಬರ್ 26 ಭಾರತದ ಸಂವಿಧಾನ ದಿನ | ಈ ದಿನದ ಮಹತ್ವ, ಇತಿಹಾಸದ ಬಗ್ಗೆ ತಿಳಿಯಿರಿ Janashakthi Media