ಬೆಳಗಾವಿ: ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವ ವರೆಗೆ ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ನ್ಯಾಯ
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿಲ್ಲ. ದಕ್ಷಿಣ ಕರ್ನಾಟಕದವರ ಗುಲಾಮರು ನಾವಲ್ಲ ಎಂದು ಬಿಜೆಪಿ ಅಧ್ಯಕ್ಷ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಶಾಸಕರ ಕೊರತೆ| ತೆಲಂಗಾಣದಲ್ಲಿ ಡಿಕೆಶಿ, ಜಮೀರ್!
ನರೇಂದ್ರ ಮೋದಿ ನಾಯಕತ್ವ ಇಡೀ ದೇಶದ ಜನರು ಒಪ್ಪಿಕೊಂಡಿದ್ದಾರೆ. ನರೇಂದ್ರ ಮೋದಿ ದೇಶಕ್ಕೆ ಗ್ಯಾರಂಟಿ ಇರುವುದಿಂದ ಗೆಲುವುವಾಗಿದೆ. ಹೊಂದಾಣಿಕೆ ಇಲ್ಲದ ರಾಜಕಾರಣ, ಹಿಂದುತ್ವ ಅಭಿವೃದ್ಧಿ ಕಾರಣವಾಗಿದೆ ಎಂದರು. ಕುಟುಂಬ ರಾಜಕಾರಣ ಕಿತ್ತು ಹಾಕಬೇಕು. ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗುತ್ತದೆ. ವಂಶವಾದವನ್ನು ನಿರ್ಮೂಲನೆ ಮಾಡುವುದೇ ನನ್ನ ಗುರಿ. ಇನ್ನು ಮೇಲೆ ಬದಲಾವಣೆ ಆಗುತ್ತದೆ ಎಂದರು.
ಲೋಕಸಭೆ ಚುನಾವಣೆ ಬಳಿಕ ಬದಲಾವಣೆ!
ಇನ್ನು ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಬಳಿಕ ಬದಲಾವಣೆ ಆಗಲಿದೆ ಎಂದು ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ಪ್ರಾಮಾಣಿಕರು ಹಾಗೂ ಹಿಂದೂ ವಿಚಾರಧಾರೆ ಹೊಂದಿರುವವರು ಆಡಳಿತ ನಡೆಸಬೇಕು ಎಂದರು.ಇನ್ನು ಸೋಮವಾರವಷ್ಟೇ “ಕರ್ನಾಟಕದಲ್ಲಿ ಸರ್ಕಾರ ಬೇಗ ಬೀಳುತ್ತೋ,,? ಗ್ಯಾರಂಟಿಗಳು ಬೇಗ ಬೀಳುತ್ತವೋ? ಎಲ್ಲಾ ಮೋಟಾ ಬಾಯ್ ಕೈಯಲ್ಲಿದೆ” ಒಬ್ಬರು ಮಾಡಿದ್ದ ಟ್ವೀಟನ್ನು ರೀಟ್ವೀಟ್ ಮಾಡಿದ್ದ ಯತ್ನಾಳ್ “ಎರಡೂ ಒಟ್ಟಿಗೇ ಆಗಬಹುದು” ಎಂದು ಟಾಂಗ್ ನೀಡಿದ್ದರು.
ಇದನ್ನೂ ಓದಿ:ಬೆಳಗಾವಿ ಅಧಿವೇಶನ| ಇಂದಿನಿಂದ 10 ದಿನಗಳ ಚಳಿಗಾಲ ಅಧಿವೇಶನ
ಪ್ರತಿಕ್ರಿಯೆ ನೀಡದ ಬಿವೈ ವಿಜಯೇಂದ್ರ
ಯತ್ನಾಳ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿಲ್ಲ. ಬೆಳಗಾವಿಯಲ್ಲಿ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದಾಗ “ಈ ಪ್ರಶ್ನೆ ಬಿಟ್ಟು ಬೇರೆ ಕೇಳಿ ಎಂದು ಉತ್ತರಿಸಲು ನಿರಾಕರಣೆ ಮಾಡಿದರು. ನನ್ನ ಆಯ್ಕೆ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ನಾನು ಮಾತನಾಡಲ್ಲ, ಬದಲಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಉತ್ತರ ಕೊಡುತ್ತಾರೆ.” ಎಂದು ಮಾರ್ಮಿಕವಾಗಿ ತಿಳಿಸಿದರು.
ಆಳಂದದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಅವರು ಸಹ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಧಿವೇಶನದಲ್ಲಿ ಭಾಗಿ ಆಗಲಾರೆ ಎಂದು ತಿಳಿಸಿದ್ದರು. ಜೊತೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ರಾಜ್ಯದಲ್ಲಿ ಭಾರೀ ಸಂಚಲನವನ್ನು ಉಂಟುಮಾಡಿತ್ತು. ಸಚಿವ ಕೃಷ್ಣಬೈರೇಗೌಡರು ಕಳೆದ ವಿಧಾನಸಭೆಯ ಕಲಾಪದಲ್ಲಿ ಕೆಆರ್‌ಐಡಿಎಲ್ ಕಡೆಯಿಂದ ನಾನು ಹಣಪಡೆದು ಭೂಸೇನೆಗೆ ಕಾಮಗಾರಿ ಕೊಟ್ಟಿದ್ದೇನೆ ಎಂದು ಅನುಮಾನ ಬರುವಂತೆ ಮಾತನಾಡಿದ್ದರು. ನನ್ನ ಮೇಲಿರುವ ಈ ಆರೋಪದ ಬಗ್ಗೆ ಸರ್ಕಾರ ತನಿಖೆಗೆ ಆದೇಶ ಮಾಡಲಿ. ಅಲ್ಲಿವರೆಗೂ ನಾನು ಅಧಿವೇಶನಕ್ಕೆ ತೆರಳುವುದಿಲ್ಲ ” ಎಂದು ಖಡಕ್ ಆಗಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ ಅವರು, ನಾನು ಈ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಕಲಾಪದಲ್ಲಿ ಮಾತನಾಡಿದ್ದರ ಕಾಪಿ ನಿಮಗೆ ನೀಡುತ್ತೇನೆ. ಓದಿ ನೀವೇ ನಿರ್ಧರಿಸಿ ಎಂದು ತಿರುಗೇಟು ನೀಡಿದ್ದರು. ನ್ಯಾಯ
ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್ 04 | ಭಾಗ 01 Live #wintersession2023