ವಿಶ್ವಸಂಸ್ಥೆಯಿಂದ ಗಾಜಾದಲ್ಲಿ ಕದನ ವಿರಾಮ ಘೋಷಣೆಗೆ ಅಮೆರಿಕ ವಿರೋಧ

ವಿಶ್ವಸಂಸ್ಥೆ: ಇಸ್ರೇಲ್ ಮತ್ತು ಗಾಜಾ ಪ್ರದೇಶದಲ್ಲಿ ಹಮಸ್‌ನ ಉಗ್ರರ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಅಂತ್ಯಗೊಳಿಸಲು ವಿಶ್ವಸಂಸ್ಥೆ ಕದನ ವಿರಾಮ ಘೋಷಿಸಲು ಮುಂದಾಗಿದೆ. ಆದರೆ ಈ ಪ್ರಸ್ತಾವಕ್ಕೆ ಅಮೆರಿಕ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.

ಕದನ ವಿರಾಮ ಘೋಷಸಿಬೇಕೆಂದು ವಿಶ್ವಸಂಸ್ಥೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲು ತೀವ್ರವಾಗಿ ಪ್ರಯತ್ನಿಸಿತು. ಆದರೆ, ಅಮೆರಿಕವು ನಾಲ್ಕು ಬಾರಿ ತಡೆ ನೀಡಿದೆ. ಅಲ್ಲದೆ, ಈ ಬಾರಿ ಫ್ರಾನ್ಸ್ ಕರಡು ಸಿದ್ಧಪಡಿಸಿದೆ. ವಿಶ್ವಸಂಸ್ಥೆಯ ಸಮಿತಿಯ ಇತರ ಎಲ್ಲ ಸದಸ್ಯ ರಾಷ್ಟ್ರಗಳು ಸಮ್ಮತಿ ಸೂಚಿಸಿದ್ದರೂ, ಕದನ ವಿರಾಮ ಘೋಷಣೆಗೆ ಅಮೆರಿಕ ಮಾತ್ರ ಒಪ್ಪಿಗೆ ನೀಡುತ್ತಿಲ್ಲ.

ಇದನ್ನು ಓದಿ: “ನಾವು ಪ್ಯಾಲೆಸ್ಟೈನ್ ಜೊತೆಗಿದ್ದೇವೆ. ಅವರ ತಾಯ್ನಾಡನ್ನು ಪಡೆಯುವ, ಮನೆಗೆ ಮರಳುವ ಮತ್ತು ಅತಿಕ್ರಮಣಕ್ಕೆ ಪ್ರತಿರೋಧವೊಡ್ಡುವ ಹಕ್ಕನ್ನು ಬೆಂಬಲಿಸುತ್ತೇವೆ.”

ವಿಶ್ವಸಂಸ್ಥೆಯು ಬಿಡುಗಡೆಗೊಳಿಸುವ ಪತ್ರಿಕಾ ಹೇಳಿಕೆಗೆ ಸಮಿತಿಯ ಎಲ್ಲ 15 ಸದಸ್ಯರ ಒಪ್ಪಿಗೆ ಬೇಕಾಗುತ್ತದೆ. ಆದರೆ ನಿರ್ಧಾರ ಪ್ರಕಟಿಸಬೇಕಾದರೆ ಕನಿಷ್ಠ ಒಂಭತ್ತು ಮಂದಿ ಅನುಮತಿ ಹಾಗೂ ಅಮೆರಿಕ ಅಥವಾ ಇತರ ನಾಲ್ಕು ಶಾಶ್ವತ ಸದಸ್ಯ ರಾಷ್ಟ್ರಗಳು ವಿಟೋ ಬಳಸದೇ ಇರಬೇಕು

ಗಾಜಾದಲ್ಲಿ ಕದನ ವಿರಾಮ ಘೋಷಣೆ ಮತ್ತು ಪರಿಹಾರ ಕಾರ್ಯ ಕೈಗೊಳ್ಳಲು ಅನುವಾಗುವಂತೆ ವಿಶ್ವಸಂಸ್ಥೆಯ ಅಧಿಕಾರಿಗಳು ಅಮೆರಿಕ ಜತೆ ಚರ್ಚೆ ನಡೆಸುತ್ತಿದ್ದಾರೆ ಎಂದು ಫ್ರಾನ್ಸ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಆದರೆ ಈ ಬಗ್ಗೆ ಅಮೆರಿಕದ ಅಧಿಕಾರಿಗಳು ವಿಶ್ವಸಂಸ್ಥೆಗೆ ಹೇಳಿಕೆ ನೀಡಿದ್ದು, ಹಿಂಸಾಚಾರವನ್ನು ಕೊನೆಗಾಣಿಸುವ ಕುರಿತಂತೆ ತೀವ್ರತರವಾದ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿದೆ. ಆದರೆ ಉಗ್ರರ ವಿರುದ್ಧದ ಹೋರಾಟಕ್ಕೆ ಬೆಂಬಲವಿರುತ್ತದೆ ಎಂದಿದ್ದಾರೆ.

193 ಸದಸ್ಯರ ಸಾಮಾನ್ಯ ಸಭೆಯು ಇಂದು  ಇಸ್ರೇಲ್-ಪ್ಯಾಲೇಸ್ಟಿನಿಯನ್ ಸಂಘರ್ಷದ ಬಗ್ಗೆ ಮುಕ್ತ ಸಭೆಯನ್ನು ನಿಗದಿಪಡಿಸಲಾಗಿದೆ. ಸುಮಾರು ೧೨ಕ್ಕೂ ಹೆಚ್ಚಿನ ರಾಜತಾಂತ್ರಿಕರು ಖುದ್ದಾಗಿ ಹಾಜರಾಗುವ ಸಾಧ್ಯತೆಗಳಿವೆ. ಈ ಸಭೆಯು ಇಡೀ ದಿನ ನಡೆಯಲಿದೆ ಎಂಬುದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *