ಒಕ್ಕೂಟವೋ, ತಿಕ್ಕಾಟವೋ ಪುಸ್ತಕ ಬಿಡುಗಡೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು: ನಾಳೆ ಶನಿವಾರ ಬಿ ಶ್ರೀಪಾದ ಭಟ್ ವಿರಚಿತ ಒಕ್ಕೂಟವೋ ತಿಕ್ಕಾಟವೋ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಪುಸ್ತಕ

ಬೆಂಗಳೂರಿನ ಎನ್ ಆರ್ ಕಾಲೋನಿಯ ಮೂರನೇ ಮುಖ್ಯರಸ್ತೆಯಲ್ಲಿರುವ ಬಿಎಂಶ್ರೀ ಕಲಾಭವನ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.

ಇದನ್ನು ಓದಿ:ಇಸ್ರೇಲ್ ಕಾಡ್ಗಿಚ್ಚು: ದಿಢೀರ್ ತುರ್ತು ಪರಿಸ್ಥಿತಿ ಘೋಷಣೆ 

ಒಕ್ಕೂಟವೋ, ತಿಕ್ಕಾಟವೋ ಎಂಬ ಪುಸ್ತಕ ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟದ ಆಳ ಅಗಲ ಮತ್ತು ಸವಾಲುಗಳು ಹಾಗೂ ಸಾಧ್ಯತೆಗಳ ಕುರಿತು ಎತ್ತಿ ತೋರಿಸುತ್ತದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದ ಜೊತೆಗೆ ವಿಚಾರ ಸಂಕೀರ್ಣವು ಕೂಡ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಹಾಗೂ ಲೇಖಕರು ಆಗಿರುವ ಡಿ ಉಮಾಪತಿ, ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕರು ಆದ ಮಾವಳ್ಳಿ ಶಂಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಡಾ. ಕೆ ಪ್ರಕಾಶ್ ವಿಷಯ ಮಂಡಿಸಲಿದ್ದಾರೆ. ಜೊತೆಗೆ ಒಕ್ಕೂಟವೋ, ತಿಕ್ಕಾಟವೋ ಪುಸ್ತಕ ಲೇಖಕರಾಗಿರುವ ಬಿ ಶ್ರೀಪಾದ ಭಟ್ ಅವರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮ ನಡೆಯುವ ಸ್ಥಳದ ಗೂಗಲ್‌ ಮ್ಯಾಪ್‌ : https://maps.app.goo.gl/fT4D4bkH51fcYuH29

ಇದನ್ನು ಓದಿ:ಯುದ್ಧ ಬೇಡ, ಅದರಿಂದ ನಮ್ಮ ಸೈನಿಕರೇ ಸಾಯೋದು: ನಟಿ ರಮ್ಯಾ

Donate Janashakthi Media

Leave a Reply

Your email address will not be published. Required fields are marked *