ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತ -ಕಾರ್ಮಿಕ ವರ್ಗ ಮತ್ತೆ ಗುಲಾಮಗಿರಿಯತ್ತ – ಫಣೀಂದ್ರ ಕೆ

ಮಂಗಳೂರು : ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಕಾಪಾಡಬೇಕಾದ ಕೇಂದ್ರ ಸರಕಾರವು ನಿತ್ಯ ನಿರಂತರವಾಗಿ ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ.ಆ ಮೂಲಕ ಕಾರ್ಪೊರೇಟ್ ಸರಕಾರವಾಗಿದೆ. ಹಸಿವು ಮುಕ್ತ,ಬಡತನ ಮುಕ್ತ, ನಿರುದ್ಯೋಗ ಮುಕ್ತ ಭಾರತವಾಗಿ ನಿರ್ಮಾಣ ಮಾಡುವ ಬದಲು ಯೂನಿಯನ್ ಮುಕ್ತ ಭಾರತವನ್ನಾಗಿ ನಿರ್ಮಿಸಲು ಹೊರಟಿದೆ.ಈ ಮೂಲಕ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮರನ್ನಾಗಿಸಿ ಅತ್ಯಂತ ಹೀನಾಯವಾಗಿ ಶೋಷಣೆ ಮಾಡಲು ಹೊರಟಿದೆ ಎಂದು ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ ಯವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ (JCTU)ದ ಸಹಯೋಗದಲ್ಲಿ ಫೆಬ್ರವರಿ 12ರ ಅಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ಆಯೋಜಿಸಲ್ಪಟ್ಟ ದ.ಕ‌.ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ : ಫೆ.12 ಅಖಿಲ ಭಾರತ ಮುಷ್ಕರ – ಶ್ರಮಿಕರ ಪ್ರತಿರೋಧದ ಮಹಾದಿನ

ದ.ಕ.ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ : ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ವಿಲೀನೀಕರಣದ ಹೆಸರಿನಲ್ಲಿ ಸರ್ವ ನಾಶ ಮಾಡುವ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ.ವಿಮಾ ಕ್ಷೇತ್ರದಲ್ಲೂ 100%ದಷ್ಟು ವಿದೇಶೀ ನೇರ ಹೂಡಿಕೆಯನ್ನು ಮಾಡಿ ವಿದೇಶೀ ವಿಮಾ ಸಂಸ್ಥೆಗಳಿಗೂ ಮುಕ್ತ ಅವಕಾಶ ನೀಡಿದೆ ಎಂದು ಆರೋಪಿಸಿದರು.

ಬ್ಯಾಂಕ್ ನೌಕರರ ರಾಜ್ಯ ಮುಖಂಡರಾದ ಬಿ ಎಂ ಮಾಧವ : ಕಳೆದ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ಅಂಬಾನಿ ಅಧಾನಿಗಳು ಸೇರಿದಂತೆ ಕಾರ್ಪೊರೇಟ್ ಕಂಪೆನಿಗಳಗೆ ಮಾರಾಟ ಮಾಡುವ ಮೂಲಕ ಇಡೀ ದೇಶವನ್ನೇ ಅಂಬಧಾನಿ ಮಾಡಲು ಹೊರಟಿದೆ ಎಂದು ಹೇಳಿದರು

 ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್  : ದೇಶದ 70%ಕ್ಕಿಂತಲೂ ಹೆಚ್ಚಿನ ಕಾರ್ಖಾನೆಗಳು ಕಾರ್ಮಿಕ ಸಂಹಿತೆಗಳಿಂದ ಹೊರಗುಳಿಯುವ ಮೂಲಕ 90% ದಷ್ಟು ಕಾರ್ಮಿಕರು ಯಾವುದೇ ಕಾನೂನಿನ ರಕ್ಷಣೆಯಿಲ್ಲದೆ ಬೀದಿಪಾಲಾಗಲಿದ್ದಾರೆ ಮಾತ್ರವಲ್ಲದೆ ಅವರನ್ನು ಗುಲಾಮರಂತೆ ದುಡಿಸಿ ಅವರ ಶ್ರಮವನ್ನು ದೋಚಲಾಗುತ್ತದೆ ಎಂದು ತಿಳಿಸಿದರು.

ಈ ಜಾಥಾದಲ್ಲಿ  ಸಿಐಟಿಯು ಜಿಲ್ಲಾ ನಾಯಕರಾದ ಬಿ‌ ಎಂ ಭಟ್, ವಸಂತ ಆಚಾರಿ,ಯೋಗೀಶ್ ಜಪ್ಪಿನಮೊಗರು, ವಸಂತಿ, ಲೋಲಾಕ್ಷಿ, ರೋಹಿದಾಸ್, ರವಿಚಂದ್ರ ಕೊಂಚಾಡಿ,ಜಯಲಕ್ಷ್ಮಿ, ಜಯಶ್ರೀ, ಎಐಟಿಯುಸಿ  ಜಿಲ್ಲಾ ಮುಖಂಡರಾದ ಸೀತಾರಾಮ ಬೇರಿಂಜ,ಬಿ ಶೇಖರ್,ವಿ ಕುಕ್ಯಾನ್,ಎಚ್ ವಿ ರಾವ್,ಸುಧಾಕರ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಪುರುಷೋತ್ತಮ ಪೂಜಾರಿ,ವಿಮಾ ನೌಕರರ ಸಂಘಟನೆಯ ನಾಯಕರಾದ ಬಿ ಎನ್ ದೇವಾಡಿಗ,ಅಲ್ಬನ್ ಮಸ್ಕರೇನಸ್,ವಸಂತ ಕುಮಾರ್, ಹೋಟೇಲ್ ನೌಕರರ ಸಂಘದ ನಾಯಕರಾದ ಮೋಹನ್,ಕಿರಣ್ ರಾಜ್,ಮಹಿಳಾ ಮುಖಂಡರಾದ ಪ್ರಮೀಳಾ ಶಕ್ತಿನಗರ,ಫ್ಲೇವಿಕ್ರಾಸ್ತಾ, ಯೋಗಿತಾ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಹಸನ್ ಕುದ್ರೋಳಿ,ಸಿಕಂದರ್,ಹಂಝ, ಗುಡ್ಡಪ್ಪ,ಶಿವಪ್ಪ,ನೌಷಾದ್,ವಿಜಯ,ಯುವಜನ ನಾಯಕರಾದ ಅಭಿಷೇಕ್, ವಿದ್ಯಾರ್ಥಿ ನಾಯಕರಾದ ವಿನುಷ ರಮಣ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ನೋಡಿ : “ಮನರೇಗಾ ನಮ್ಮ ಹಕ್ಕು: V B GRAM G ವಿರುದ್ಧ ಜನಪಂಚಾಯತ್‌” | ಉದ್ಯೋಗ ಖಾತರಿ Janashakthi Media

Donate Janashakthi Media

Leave a Reply

Your email address will not be published. Required fields are marked *