Union Budget 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್​​

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ 2026-27ನೇ ಸಾಲಿನ ಕೇಂದ್ರ ಬಜೆಟ್​​ ಮಂಡಿಸಿದ್ದಾರೆ. ಅವರು ಮಂಡಿಸಿರುವ 9ನೇ ಆಯವ್ಯಯದ ಗಾತ್ರ 53.47 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಸಾರಿಗೆ ಹಾಗೂ ರಕ್ಷಣಾ ಇಲಾಖೆಗೆ ಅತಿಹೆಚ್ಚು ಅನುದಾನ ಹಂಚಿಕೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಗೃಹ ವ್ಯವಹಾರಗಳ ಇಲಾಖೆಗೂ ಹೆಚ್ಚು ಒತ್ತು ನೀಡಲಾಗಿದೆ. ಚುನಾವಣಾ ರಾಜ್ಯಗಳಿಗೂ ಬಂಪರ್​​ ಗಿಫ್ಟ್​​ ಸಿಕ್ಕಿದ್ದು, ಕೇಂದ್ರ ಬಜೆಟ್​ನಲ್ಲಿ ಪ್ರಮುಖ ಇಲಾಖೆಗಳಿಗೆ ಸಿಕ್ಕಿದ ಅನುದಾನದ ಮಾಹಿತಿ ಇಲ್ಲಿದೆ.

ಪ್ರಮುಖ ಇಲಾಖೆಗಳಿಗೆ ಸಿಕ್ಕಿದ ಅನುದಾನ

  • ಸಾರಿಗೆ ಇಲಾಖೆ- 5,98,520 ಕೋಟಿ ರೂ.
  • ರಕ್ಷಣಾ ಇಲಾಖೆ 5,94,585 ಕೋಟಿ ರೂ.
  • ಗ್ರಾಮೀಣಾಭಿವೃದ್ಧಿ ಇಲಾಖೆ- 2,73,108 ಕೋಟಿ ರೂ.
  • ಗೃಹ ವ್ಯವಹಾರಗಳ ಇಲಾಖೆ- 2,55,234 ಕೋಟಿ ರೂ.
  • ಕೃಷಿ ಇಲಾಖೆ- 1,62,671 ಕೋಟಿ ರೂ.
  • ಶಿಕ್ಷಣ ಇಲಾಖೆ- 1,39,289 ಕೋಟಿ ರೂ.
  • ಆರೋಗ್ಯ ಇಲಾಖೆ- 1,04,599 ಕೋಟಿ ರೂ.
  • ಇಂಧನ ಇಲಾಖೆ- 1,09,029 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ- 85,522 ಕೋಟಿ ರೂ.
  • ಐಟಿ ಮತ್ತು ಟೆಲಿಕಾಂ- 74,560 ಕೋಟಿ ರೂ.
  • ವಾಣಿಜ್ಯ ಮತ್ತು ಕೈಗಾರಿಕೆ- 70,296 ಕೋಟಿ ರೂ.
  • ಸಮಾಜಕಲ್ಯಾಣ ಇಲಾಖೆ- $62,362 ಕೋಟಿ ರೂ.
  • ವೈಜ್ಞಾನಿಕ ಇಲಾಖೆ- 55,756 ಕೋಟಿ ರೂ.
  • ತೆರಿಗೆ ಆಡಳಿತ- 45,500 ಕೋಟಿ ರೂ.
  • ವಿದೇಶಾಂಗ ವ್ಯವಹಾರ ಇಲಾಖೆ- 22,119 ಕೋಟಿ ರೂ.
  • ಹಣಕಾಸು ಇಲಾಖೆ- 20,649 ಕೋಟಿ ರೂ.
  • ಈಶಾನ್ಯ ರಾಜ್ಯಗಳ ಅಭಿವೃದ್ಧಿ- 6,812 ಕೋಟಿ ರೂ.
ಕೇಂದ್ರ ಬಜೆಟ್  ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಕೇಂದ್ರ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಯಾವುದೇ ದೂರದೃಷ್ಟಿಯಿಲ್ಲದ ಬಜೆಟ್ ಮಂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬರೀ ಹೇಳಿಕೆಗಳಿಂದ ಕೂಡಿದ ಬಜೆಟ್. ಬಹಳ ನಿರಾಶಾದಾಯಕವಾಗಿದೆ. ಪರಿಷ್ಕೃತ ಆದಾಯ ಗಾತ್ರ 49 ಲಕ್ಷ 64 ಸಾವಿರ ಕೋಟಿಯಿದೆ. 1 ಲಕ್ಷ ಕೋಟಿಯಷ್ಟು ಪರಿಷ್ಕೃತ ಅಂದಾಜು ಕಡಿಮೆಯಾಗಿದೆ ಎಂದರು.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಏನೂ ಕೊಟ್ಟಿಲ್ಲ. ಕರ್ನಾಟಕಕ್ಕೆ ಕೊಟ್ಟಿದ್ದು ಬರಿ ಚೊಂಬು. ಬೆಂಗಳೂರುಗೆ ಎರಡು ರೈಲು ಘೋಷಿಸಿದ್ದಾರೆ. ಅದೂ ಇನ್ನೂ ಐದು ವರ್ಷಗಳ ನಂತರದ ಯೋಜನೆ. ಒಟ್ಟಾರೆಯಾಗಿ ರಾಜ್ಯಕ್ಕೆ ಯಾವುದೇ ಘೋಷಣೆಯನ್ನೂ ಮಾಡಿಲ್ಲ. ಇಡೀ ದಕ್ಷಿಣ ಭಾರತ ರಾಜ್ಯಕ್ಕೆ ಏನನ್ನೂ ಘೋಷಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Donate Janashakthi Media

Leave a Reply

Your email address will not be published. Required fields are marked *