ತುಮಕೂರು: ಜಿಲ್ಲೆಯ ಕೊರಟಗೆರೆ ಬಳಿ ರಸ್ತೆಯುದ್ದಕ್ಕೂ ಕವರ್ ನಲ್ಲಿ ಅಪರಿಚಿತ ಶವದ ತುಂಡುಗಳು ಪತ್ತೆಯಾಗಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೀಡುಮಾಡಿದೆ.
ಕವರ್ ನಲ್ಲಿ ಶವದ ತುಂಡುಗಳು ಪತ್ತೆಯಾಗಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಕೊರಟಗೆರೆಯ ಕೋಳಾಲದ ಮುತ್ಯಾಲಮ್ಮ ದೇವಾಲಯದ ಬಳಿಯಿರುವ ರಸ್ತೆಯಲ್ಲಿ ಐದು ಕಡೆ ಮೃತದೇಹದ ತುಂಡುಗಳು ಪತ್ತೆಯಾಗಿವೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಕೋಮುವಾದಿ ಧೋರಣೆಯಿಂದ ಜನತೆ ಸಂಕಟಕ್ಕೆ ಸಿಲುಕಿದ್ದಾರೆ
3 ಕಿ.ಮೀ ಅಂತರದಲ್ಲಿ 5 ಕಡೆಗಳಲ್ಲಿ ಶವದ ತುಂಡುಗಳು ಪತ್ತೆಯಾಗಿದ್ದು, ಮೃತದೇಹದ ತುಂಡುಗಳು ಪುರುಷನದ್ದೋ? ಮಹಿಳೆಯದ್ದೋ ಎಂಬ ಗೊಂದಲವಿದೆ. ಘಟನಾ ಸ್ಥಳಕ್ಕೆ ಜಿಲ್ಲೆಯ ಎಸ್ ಪಿ ಕೆ.ವಿ.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ನೋಡಿ: ಮಹೇಶ ಜೋಶಿಯನ್ನು ಮನೆಗೆ ಕಳುಹಿಸಿ : ಕನ್ನಡ ಸಾಹಿತ್ಯ ಪರಿಷತ್ ಉಳಿಸಿ Janashakthi Media
