ತೆಲಂಗಾಣ : ಶ್ರೀದೇವಿ ಅವರು ಸತತ ಹಿನ್ನಡೆ ಅನುಭವಿಸಿದರೂ, ವೈಫಲ್ಯಗಳಿಗೆ ಎಂದಿಗೂ ಹೆದರದೇ ಎದೆಗುಂದದ ಜನರಿದ್ದಾರೆ ಎಂಬುದು ಅತಿಶಯೋಕ್ತಿಯಲ್ಲ. ತಮ್ಮ ಸಾಧನೆಯ ಹಾದಿಯಲ್ಲಿ ಉಂಟಾದ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಉತ್ತುಂಗಕ್ಕೇರಿದವರೂ ಇದ್ದಾರೆ. ಅವರ ಸಾಲಿನಲ್ಲಿ ಶ್ರೀದೇವಿ ಮಾಳಪ್ಪ ಪೋಲ್ ಅವರೂ ಒಬ್ಬರು.
ತೆಲಂಗಾಣ
ಶ್ರೀದೇವಿ ಅವರು ತಮ್ಮ ಕನಸು ನನಸಾಗಿಸಲು ಅವಿಶ್ರಾಂತವಾಗಿ ಶ್ರಮಿಸಿದರು. ಇಂದು ಅವರ ಪರಿಶ್ರಮ ಫಲ ಕೊಟ್ಟಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯಲ್ಲಿ 73 ನೇ ರ‍್ಯಾಂಕ್ ಗಳಿಸಿದ್ದಾರೆ. ಸಾಧನೆಗೆ ಸವಾಲು ಅಡ್ಡಿಯಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
ತೆಲಂಗಾಣ
ಇದನ್ನೂ ಓದಿ: ಟ್ರಂಪ್ ಸುಂಕಗಳು ಮತ್ತು ಭಾರತದ ಮುಂದಿರುವ ದಾರಿ
“ಪ್ರಕೃತಿ ಮತ್ತು ಜೀವಿಗಳೆಂದರೆ ನನಗೆ ಇಷ್ಟ. ಆದರೆ, ವ್ಯಾಪಾರ ಮತ್ತು ವೈಯಕ್ತಿಕ ಲಾಭಕ್ಕಾಗಿ ಕಾಡುಗಳು ನಾಶವಾಗುವುದನ್ನು ನೋಡಿ ನನಗೆ ನೋವಾಯಿತು. ಆಗ ನಾನು ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡಬೇಕು ಎಂದು ಭಾವಿಸಿದೆ. ಹೀಗಾಗಿ, ನಾನು ಕೃಷಿ ಕ್ಷೇತ್ರದಲ್ಲಿ ಡಿಗ್ರಿ ಮುಗಿಸಿದೆ” ಎಂದು ಶ್ರೀದೇವಿ ಅವರು ಹೇಳಿದರು.
ಕರ್ನಾಟಕದ ಹುಡುಗಿಗೆ ತೆಲಂಗಾಣ ಕೇಡರ್ನಲ್ಲಿ ಹುದ್ದೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಮೂಲದವರಾದ ಶ್ರೀದೇವಿ ಅವರ ಕುಟುಂಬ ಶಿಕ್ಷಕರಿಂದ ಕೂಡಿದೆ. ತಂದೆ ಮಾಳಪ್ಪ ಪೋಲ್ ಮತ್ತು ತಾಯಿ ಭಾರತಿ ಇಬ್ಬರೂ ಶಿಕ್ಷಕರು. ಶ್ರೀದೇವಿ ಅವರು ಬಿ.ಎಸ್ಸಿ ಕೃಷಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ.
“ಐಎಫ್‌ಎಸ್‌ನಲ್ಲಿ ಹಿರಿಯ ಸ್ನೇಹಿತರು ಇದ್ದುದು ನನಗೆ ಸ್ಫೂರ್ತಿ ನೀಡಿತು. ಆದ್ದರಿಂದ, ನಾನು 2019 ರಲ್ಲಿ ಯುಪಿಎಸ್‌ಸಿಗೆ ಪ್ರಯತ್ನಿಸಲು ನಿರ್ಧರಿಸಿದೆ. ಯಾವುದೇ ತರಬೇತಿ ಇಲ್ಲದೇ, ನಾನು ಸ್ವಂತವಾಗಿ ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಂಡೆ. ನಾನು ನಾಲ್ಕು ಬಾರಿ ಪರೀಕ್ಷೆ ಬರೆದೆ. ಆದರೆ, ಪ್ರತಿ ಬಾರಿಯೂ ವಿಫಲವಾದೆ. ಆದರೂ, ನಾನು ಎಂದಿಗೂ ಕೈಬಿಡಲಿಲ್ಲ” ಎಂದು ತಮ್ಮ ಛಲದ ಬಗ್ಗೆ ತಿಳಿಸಿದರು.
ಉದ್ಯೋಗ ಮಾಡುತ್ತಾ ಅಭ್ಯಾಸ ಮಾಡಿದೆ “ನಾನು ಮೊದಲು ಆರ್ಥಿಕವಾಗಿ ಸದೃಢವಾಗಬೇಕೆಂದು ಭಾವಿಸಿದೆ. ಹೀಗಾಗಿ, ಯಾವುದಾದರೂ ಉದ್ಯೋಗ ಮಾಡಲು ಬಯಸಿದೆ. ಆದರೆ, ನಮ್ಮವರು ಇದನ್ನು ಆಕ್ಷೇಪಿಸಿದರು. ಕೆಲಸಕ್ಕೆ ಸೇರಿಕೊಂಡರೆ, ಯುಪಿಎಸ್‌ಸಿ ಬರೆಯುವುದು ಕಷ್ಟವಾಗುತ್ತದೆ ಎಂದರು. ಆದರೆ ನಾನು ಸುಮ್ಮನೆ ಕುಳಿತುಕೊಳ್ಳಲು ಬಯಸಲಿಲ್ಲ. ಸರ್ಕಾರಿ ಉದ್ಯೋಗಗಳಿಗೂ ಅರ್ಜಿ ಸಲ್ಲಿಸಿದೆ” ಎಂದು ಶ್ರೀದೇವಿ ನೆನಪಿಸಿಕೊಂಡರು.
ಫಲ ನೀಡಿದ ದೃಢನಿಶ್ಚಯ “ಕೊನೆಗೂ ನನ್ನ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು. 5ನೇ ಯತ್ನದಲ್ಲಿ ಐಎಫ್‌ಎಸ್ ಪಾಸ್ ಮಾಡಿದೆ. ಈ ಪ್ರಯಾಣದಲ್ಲಿ ನನ್ನ ಪೋಷಕರು ಮತ್ತು ಸಹೋದ್ಯೋಗಿಗಳ ಬೆಂಬಲ ಮರೆಯಲಾಗದು” ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದರು.
“ಕೆಲವೊಮ್ಮೆ ಸಮಯ ನಮ್ಮಂತೆ ನಡೆಯದಿದ್ದಾಗ ನಾವು ನಿರುತ್ಸಾಹಗೊಳ್ಳುತ್ತೇವೆ. ನಾವು ಬೇರೆ ಏನನ್ನಾದರೂ ಸಾಧಿಸಬೇಕು ಎಂದು ಯೋಚಿಸಿ ಪ್ರಯತ್ನಿಸುವುದನ್ನು ನಿಲ್ಲಿಸುತ್ತೇವೆ. ಆದರೆ ನೀವು ತಾತ್ಕಾಲಿಕವಾಗಿ ದಿಕ್ಕು ತಪ್ಪಿದರೂ, ನೀವು ನಿಮ್ಮ ಗುರಿ ಸಾಧನೆಯತ್ತ ಪ್ರಯತ್ನಿಸುತ್ತಲೇ ಇದ್ದರೆ ಯಶಸ್ಸು ಖಂಡಿತವಾಗಿಯೂ ಬರುತ್ತದೆ ಎಂಬುದು ನನ್ನ ನಂಬಿಕೆ” ಎನ್ನುತ್ತಾರೆ ಶ್ರೀದೇವಿ.
ಇದನ್ನೂ ನೋಡಿ: ಘನತೆಯ ಬದುಕು ನಮ್ಮ ಹಕ್ಕು | ಜನವಾದಿ ಮಹಿಳಾ ಸಂಘಟನೆ ; 12ನೇ ರಾಜ್ಯ ಸಮ್ಮೇಳನJanashakthi Media
