ತುಮಕೂರು: ಕೇಂದ್ರದಲ್ಲಿಅಧಿಕಾರ ನಡೆಸುತ್ತಿರುವ ಸರ್ಕಾರ ತನ್ನ ಮತ ಗಳಿಕೆಯ ರಾಜಕಾರಣಕ್ಕಾಗಿ ಸಂವಿಧಾನ ವಿರೋಧಿ ಹಾಗೂ ವಿಭಜಕ ರಾಜಕಾರಣ ಮುಂದುವರಿಸುತ್ತಾ ವಕ್ಪ್ ತಿದ್ದುಪಡಿ ಕಾಯ್ದೆ 2025 ಪ್ರಜಾಪಭುತ್ವ ವಿರೋಧಿಯಾಗಿ ಜಾರಿಗೊಳಿಸಿದೆ. ಇದು ಸಮಾನತೆ ಹಾಗೂ ಸಂವಿಧಾನದ ಆಶಯ ವಿರೋಧಿ ನಡೆ ಹಾಗಾಗಿ ನಾಗರೀಕ ಸಮಾಜ ಇದನ್ನು ತಿರಸ್ಕರಿಸಬೇಕೆಂದು ಪಿಯುಸಿಎಲ್‌ನ ಜಿಲ್ಲಾಧ್ಯಕ್ಷರು ಪ್ರಗತಿ ಪರಚಿಂತಕರಾದ ಪ್ರೊಫೆಸರ್ ಕೆ ದೋರೈ ರಾಜ್ ಅವರು ಅಭಿಪ್ರಾಯಪಟ್ಟರು. ಸಂವಿಧಾನ
ಅವರು ದಿನಾಂಕ 21.- 4-2025ರ ಸೋಮವಾರ ಸಂಜೆ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ತುಮಕೂರು ಆಯೋಜಿಸಿದ್ದ ವಕ್ಪ್ ಕಾಯ್ದೆ ತಿದ್ದುಪಡಿ ಕುರಿತ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ಪ್ರಚೋದನೆ ನೀಡುವ, ತಮ್ಮ ರಾಜಕ್ರೀಯ ಲಾಭಕ್ಕೆಜನರ ವಿಭಜಿಸುವ ನಡೆಗಳಿಗೆ ಪ್ರಜಾಪ್ರಭುತ್ವ ನೆಲೆಯ ಶಾಂತಿಯುತ ಪ್ರತಿರೋಧ ಹಾಗೂ ಜನರಿಗೆ ಇದರ ನಿಜ ಉದ್ದೇಶಗಳನ್ನು ಅರ್ಥೈಸುವುದೇ ಸರಿಯಾದಮಾರ್ಗಎಂದುಅಭಿಪ್ರಾಯಪಟ್ಟರು. ಸಂವಿಧಾನ
ಸಾಮಾಜಿಕ ಚಿಂತಕ ಶ್ರೀ ಯತಿರಾಜು ಅವರು ಮಾತನಾಡಿ ಕೇಂದ್ರದಲ್ಲಿ ಅಧಿಕಾರಸ್ಥ ಪಕ್ಷಒಂದು ಪಕ್ಷ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸುತ್ತಿದೆ. ಆದರೆ ಹೀಗೆ ಆಪಾದಿಸುತ್ತಿರುವ ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ದ್ವೇಷ ರಾಜಕಾರಣವನ್ನ ಮಾಡುತ್ತಿದ್ದಾರೆ, ಅದು ನಾಗರೀಕ ಸಮಾಜ ಒಪ್ಪುವಂತಹದಲ್ಲ , ಓಲೈಕೆ ಸರಿಯಲ್ಲ, ಅದರೆ ದ್ವೇಷ ಅದಕ್ಕಿಂತ ಕೆಟ್ಟದ್ದು ಎಂದು ಅಭಿಪ್ರಾಯಪಟ್ಟರು. ಜನರನ್ನು ವಿಭಜಿಸಿ ಆಧಿಕಾರ ಉಳಿಸುವ ಅ ನಡೆಗೆ ದೇಶದ ಜನತೆ ಐಕ್ಯತೆಯ ಪ್ರತ್ಯತ್ತರ ನೀಡಬೇಕೆಂದರು .
ಇದನ್ನೂ ಓದಿ: ಪಹಲ್ಗಾಂ ಭಯೋತ್ಪಾದಕ ದಾಳಿ ಹಿನ್ನೆಲೆ: ಅಮಿತ್ ಶಾ ಶ್ರೀನಗರಕ್ಕೆ ಭೇಟಿ, ಉನ್ನತ ಮಟ್ಟದ ಭದ್ರತಾ ಸಭೆ
ಯುವ ಮುಂದಾಳು ನಿಕೀತ್ ರಾಜ್ ಮೌರ್ಯ ಮಾತನಾಡಿ ಜನತೆಯ ಐಕ್ಯತೆ ಹೊಡೆಯುವ ಪ್ರಯತ್ನ ನಿರಂತರವಾಗಿದ್ದು ಮುಸ್ಲಿಂ ಸಮುದಾಯ ವಿವೇಕದ ಹಾಗೂ ಶಾಂತಿಯುತ ಪ್ರತಿರೋಧದ ನಡೆ ಅಗತ್ಯವೆಂದರು.
ಎಐಕೆಎಸ್ ನಕಂಬೇಗೌಡಅವರು ಮಾತನಾಡಿ ಕೇಂದ್ರದಲ್ಲಿಅಧಿಕಾರ ನಡೆಸುತ್ತಿರುವವರು ಒಂದೇ ಜನಾಂಗವನ್ನು ಗುರಿಯಾಗಿಟ್ಟುಕೊಂಡಂತೆ ದ್ವೇಷಕಾರುವ ನಡೆಗಳನ್ನು ನಾಗರಿಕ ಸಮಾಜ ಒಪ್ಪತಕ್ಕದ್ದಲ್ಲ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ವಕ್ಫ್ ಇರುವ ಧೀರ್ಫ ಇತಿಹಾಸ ವಿವರಿಸಿದರು. ಜನ ನಿರುದ್ಯೋಗ, ಬೆಲೆ ಏರಿಕೆ, ಹಸಿವಿನ ಸಾವುಗಳು, ದುಬಾರಿ ಶಿಕ್ಷಣ-ಆರೋಗ್ಯ ಸೇವೆಗಳು ಹೀಗೆ ಸಂಕಷ್ಟಗಳಿಗೆ ಕಾರಣವಾದ ನೀತಿಗಳನ್ನ ಬಗ್ಗೆ ಜನ ಸಿಟ್ಟು -ಆಕ್ರೋಶಗಳ ಮೂಡದಂತೆಜನರನ್ನು ವಿಭಜಕ ನೀತಿಗಳ ಮೂಲಕ ಕೇಂದ್ರ ಸರ್ಕಾರ ಗಮನವನ್ನು ಈ ಕಿತ್ತಾಟಕ್ಕೆ ಹಚ್ಚಿದೆ ಎಂದರು.
ಕರ್ನಾಟಕ ಪ್ರಾಂತರೈತ ಸಂಘದರಾಜ್ಯ ಪ್ರಧಾನ ಕಾರ್ಯದರ್ಶಿ ಯಶ್ವಂತ್‌ಅವರು ಮಾತನಾಡಿ ಈ ತಿದ್ದುಪಡಿಯು ಮುಂದಿನ ದಿನಗಳಲ್ಲಿ ಎಲ್ಲಾ ಧಾರ್ಮಿಕ – ಪಾರಂಪರಿಕ ಅಸ್ತಿಗಳ ನಿರ್ವಹಣೆಯಲ್ಲಿ ಅ ಧರ್ಮದಲ್ಲಿ ನಂಬಿಕೆ ಇಲ್ಲದೆ ಇರುವವರ ಮಧ್ಯ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಅವಕಾಶ/ಅಪಾಯವನ್ನು ಹೊಂದಿದೆ ಎಂದು ಎಚ್ಚರಿಸಿದರು.
ಸಮಾಜ ಸೇವಕ ತಾಜುದ್ದೀನ್ ಶರೀಪ್ ಅವರು ಮಾತನಾಡಿ ಪಾರ್ಲಿಮೆಂಟ್ ನಲ್ಲಿ ಈ ಕಾಯಿದೆಯನ್ನು ವಿರೋಧಿಸಿದವರು ಕೇವಲ ಮುಸ್ಲಿಂ ಸದಸ್ಯರು ಮಾತ್ರವಲ್ಲ ಅದರಲ್ಲಿ ಬಹು ಪಾಲು ಸದಸ್ಯರು ಅನ್ಯಧರ್ಮಿಯರು ಇದ್ದರು. ಇದೆ ನೀಜ ಭಾರತೀಯತೆ.
ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿಯ ಮಹಿಳಾ ಸಂಚಾಲಕಿ ಶ್ರೀಮತಿ ಅನುಪಮಾ, ಮಹಾ ನಗರ ಪಾಲಿಕೆ ಮಾಜಿ ಸದಸ್ಯ ನಯಾಜ್ ಅಹಮದ್ , ಪ್ರಾಂತರೈತ ಸಂಘದಜಿಲ್ಲಾ ಸಂಚಾಲಕ ಅಜ್ಜಪ್ಪ ಮಾನವ ಹಕ್ಕುಗಳ ಹೋರಾಟಗಾರ ಮುಕ್ರಮ್ ಸೈಯಿದ್. ಮೌಲಾನ ಉಮರ್ ಅಸಾರಿ ಇದ್ದಾರೆ.
ಆರಂಭದಲ್ಲಿ ಪ್ರಸ್ತಾವಿಕ ಮಾತನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟದಜಿಲ್ಲಾ ಸಂಚಾಲಕರಾದ ಬಿ ಉಮೇಶ ಬೇರೆಲ್ಲಾ ಧಾರ್ಮಿಕ – ಪಾರಂಪರಿಕ ನಿರ್ವಹಣೆಗೆ ಯಾವುದೆ ಹಸ್ತಕ್ಷೇಪ ಮಾಡದೆ ವಕ್ಫ್ ನಲ್ಲಿ ಮಾತ್ರದ ಮಧ್ಯ ಪ್ರವೇಶ ಶಾಂತಿ – ಸಹಬಾಳ್ವೆ, ಮತ್ತು ಸೋದರತ್ವದ ಬದುಕಿಗೆ ಕೊಳ್ಳಿ ಇಡುವ ಕೆಲಸ ಎಂದರು .
ಸಭೇಯಲ್ಲಿ ಎಐಟಿಯುಸಿ ಗೀರಿಶ್, ಕಾರ್ಮಿಕ ಮುಂದಾಳು ಎನ್. ಕೆ. ಸುಬ್ರಮಣ್ಯ, ಪಂಡಿತ್ ಜವಾರ್, ದಿಪೀಕಾ ಮರಳೂರು ಮತ್ತಿತರರು ಹಾಜರಿದ್ದರು.
ಅರಂಭದಲ್ಲಿ ಆರುಣ ಮತ್ತು ಕೃಷ್ಣ ಮೂರ್ತಿ ತಂಡದವರು ಹೋರಾಟ ಗೀತೆಗಳನ್ನು ಹಾಡಿದರು.
ಇದನ್ನೂ ನೋಡಿ: ಪಹಲ್ಗಾಮ್ ದಾಳಿ : ಸಂಜೆ ರಾಜ್ಯಕ್ಕೆ ಆಗಮಿಸಲಿದೆ ಮಂಜುನಾಥ್ ಮೃತದೇಹ Janashakthi Media