ಮಣಿಪುರ: ಕಳೆದ ಒಂದು ತಿಂಗಳಿಂದ ಮಣಿಪುರದಲ್ಲಿ ಎರಡು ಸಮುದಾಯಗಗಳ ನಡುವೆ ಸಂಘರ್ಷ ನಡೆದಿತ್ತು.ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಕುಕಿ ಸಮುದಾಯ ಹಿಂಸಾಚಾರಕ್ಕೆ ಇಳಿದಿತ್ತು.ಈಗಾಗಲೇ ಸುಮಾರು 114 ಜನರನ್ನು ಬಲಿಪಡೆದಿದೆ.
ಈಗ ಹಿಂಸಾಚಾರದ ಬಿಸಿ ಅಲ್ಲಿನ ಜನಪ್ರತಿನಿಧಿಗಳಿಗೂ ತಟ್ಟುತ್ತಿದೆ.ಇದಕ್ಕೂ ಮುಂಚೆ ಹಲವು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡಿರುವ ಪ್ರತಿಭಟನಾಕಾರರು ಈಗ ಅಲ್ಲಿನ ಕೈಗಾರಿಕಾ ಸಚಿವರಾದ ನೆಮ್ಟಾ ಕಿಪ್ಗೆನ್ ಇಂಫಾಲ ಪಶ್ಚಿಮ ಜಿಲ್ಲೆಯ ಲಾಂಫೀಲ್ ಪ್ರದೇಶದಲ್ಲಿರುವ ಸರ್ಕಾರಿ ನಿವಾಸಕ್ಕೆ ಬುಧವಾರ ರಾತ್ರಿ ಬೆಂಕಿ ಹಾಕಲಾಗಿದೆ. ಅಧಿಕೃತ ಪ್ರವಾಸದ ಕಾರಣದಿಂದ ಹೊರಗಿದ್ದರು. ಈ ವೇಳೆ ಈ ದುಷ್ಕೃತ್ಯ ನಡೆಸಲಾಗಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ.
ಇದ್ದನ್ನೂ ಓದಿ:ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಮೂವರು ಸಾವು, ಇಬ್ಬರಿಗೆ ಗಾಯ
ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನ ಮಣಿಪುರಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ಸಮಿತಿಯನ್ನೂ ರಚಿಸಲಾಗಿದೆ. ಅಲ್ಲಿ ರಾಜ್ಯ ಪೊಲೀಸರು, ಕೇಂದ್ರ ಸಶಸ್ತ್ರ ಪಡೆಗಳು, ಮಿಲಿಟರಿ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಅಷ್ಟಾದರೂ ಪ್ರತಿಭಟನೆ ನಿಲ್ಲುತ್ತಿಲ್ಲ.ಮಂಗಳವಾರದಂದು ಖಾಮೇನ್‌ಲೋಕ್ ಏರಿಯಾದಲ್ಲಿ ಹೊಸದಾಗಿ ಫೈರಿಂಗ್ ನಡೆದಿತ್ತು. 9 ಮಂದಿ ಮೃತಪಟ್ಟು, 9 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ ಸಚಿವೆಯ ಅಧಿಕೃತ ನಿವಾಸವೂ ಬೆಂಕಿಯಿಂದ ಸುಟ್ಟು ಹಾಕಲಾಗಿದೆ.