ಹೊಸದಿಲ್ಲಿ: ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೋವಿಡ್-19 ಲಸಿಕೆ ಪೂರೈಸುವುದಾಗಿ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುವ ಬ್ಯಾನರ್‌ಗಳನ್ನು ಹಾಕುವಂತೆ ಎಲ್ಲ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಸೂಚನೆ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕೋವಿಡ್-19 ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಘೋಷಿಸಿರುವ ಹೊಸ ನೀತಿ ಸೋಮವಾರ ಜಾರಿಗೆ ಬಂದಿದೆ. ಈ ಮಾರ್ಗಸೂಚಿಯ ಅನ್ವಯ 18 ವರ್ಷ ಮೇಲ್ಪಟ್ಟ ಎಲ್ಲರೂ ಉಚಿತ ಲಸಿಕೆಗೆ ಅರ್ಹರಾಗಿರುತ್ತಾರೆ. ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸಲಾಗಿರುವ ವಾಟ್ಸ್‌ಆಯಪ್ ಸಂದೇಶದಲ್ಲಿ ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್, ಈ ಬ್ಯಾನರ್‌ಗಳನ್ನು ಸಾಮಾಜಿಕ ಜಾಲತಾಣ ಪುಟಗಳಲ್ಲಿ ಶೇರ್ ಮಾಡುವಂತೆಯೂ ಸೂಚಿಸಿದ್ದಾರೆ.
Vaccine for all free for all !!#Thankyoupm #Thankyoumodiji#TikaLagayaKya#MPVaccinationMahaAbhiyan pic.twitter.com/yMRAWQ2TfS
— LNCT University (@LNCTUniversity) June 21, 2021
“ಒಪ್ಪಿಗೆ ನೀಡಲಾದ ಹೋರ್ಡಿಂಗ್ ಮತ್ತು ಬ್ಯಾನರ್‌ಗಳ ವಿನ್ಯಾಸವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಿದ್ಧಪಡಿಸಿದ್ದು, ಇದನ್ನು ಲಗತ್ತಿಸಲಾಗಿದೆ” ಎಂದು ಜೈನ್ ಹೇಳಿದ್ದಾರೆ. ಈ ಪೋಸ್ಟರ್‌ನಲ್ಲಿ “ಥ್ಯಾಂಕ್ಯೂ ಪಿಎಂ ಮೋದಿ” ಎಂದು ಬರೆಯಲಾಗಿದೆ.
ಲಸಿಕೆಯ ಹೆಸರಲ್ಲೂ ಪ್ರಧಾನಿಗಳು ರಾಜಕೀಯ ಮಾಡುತ್ತಿದ್ದಾರೆ. ವಿವಿಗಳಲ್ಲಿ ಸಾಕಷ್ಟು ಶೈಕ್ಷಣಿಕ ಸಮಸ್ಯೆಗಳು ಇವೆ. ಅವುಗಳನ್ನು ಬಗೆಹರಿಸಲಾಗದ ಸರಕಾರ ಯಾವತ್ತು ಪ್ರಯತ್ನಿಸಿಲ್ಲ. ಉಚಿತ ಲಸಿಕೆಯನ್ನು ಘೋಷಿಸಿ ಈ ರೀತಿ ಪ್ರಚಾರ ಪಡೆಯುತ್ತಿರುವುದು ನಾಚಿಕೇಗೇಡಿನ ಸಂಗತಿ ಎಂದು ಅನೇಕ ವಿಶ್ವ ವಿದ್ಯಾಲಯಗಳ ಅಧ್ಯಾಪಕರ ಸಂಘಟನೆಗಳು ಆರೋಪಿಸಿವೆ. ಇದು ಮುಜುಗರ ಪಡಿವ ಸ್ಥಿತಿಯನ್ನು ಮೋದಿ ಸರಕಾರ ನಿರ್ಮಾಣ ಮಾಡುತ್ತಿದೆ. ಲಸಿಕೆಯಲ್ಲಿನ ರಾಜಕೀಯ ನಿಲ್ಲಿಸಬೇಕು. ಮತ್ತು ಯುಜಿಸಿ ಇಂತಹ ಹೀನ ಕೃತ್ಯಗಳಿಗೆ ಇಳಿಯಬಾರದು ಎಂದು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಸರಕಾರದ ನಿಲುವನ್ನು ವಿರೋಧಿಸಿದ್ದಾರೆ.