ಅಭಿವೃದ್ಧಿಗಿಂತ ಉದ್ಯೋಗ ಸೃಷ್ಠಿ ನಮ್ಮದು ಮೊದಲ ಆಧ್ಯತೆ : ರಾಹುಲ್‌ ಗಾಂಧಿ

ಹೊಸದಿಲ್ಲಿ: ನಮಗೆ ಪ್ರಗತಿ ಬೇಕು ಆದರೆ ಉತ್ಪಾದನೆ ಹೆಚ್ಚಿಸಲು ಉದ್ಯೋಗ ಸೃಷ್ಟಿಸಿಸುವ ಜೊತೆಗೆ ಮೌಲ್ಯಧಾರಿತವಾಗ ಉಪಯುಕ್ತವಾದ ಪ್ರಯತ್ನಗಳನ್ನೂ ಮಾಡಬೇಕಾಗಿದೆ. ತಾವೇನಾದರೂ ಪ್ರಧಾನಿ ಆದರೆ, ಅಭಿವೃದ್ಧಿ ಕೇಂದ್ರಿತ ನೀತಿಗಳ ಬದಲು ಉದ್ಯೋಗ ಸೃಷ್ಟಿ ಕೇಂದ್ರಿತ ನೀತಿಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಆನ್‍ ಲೈನ್ ಚರ್ಚೆಯೊಂದರ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಾಹುಲ್ ಹೇಳಿದರು. ಹಾರ್ವರ್ಡ್ ಕೆನಡಿ ಸ್ಕೂಲ್ ಪ್ರೊಫೆಸರ್ ಹಾಗೂ ಅಮೆರಿಕಾದ ಮಾಜಿ ಸೆಕ್ರಟರಿ ಆಫ್ ಸ್ಟೇಟ್ ನಿಕೋಲಾಸ್ ಬರ್ನ್ಸ್‌ ಅವರೊಂದಿಗೆ ನಡದ ‘ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಮುನ್ನೋಟ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನು ಓದಿ : ಕೃಷಿ ಮಹಿಳೆಯರ ಬದುಕಿನ ಪಲ್ಲಟಗಳು: ಜೀವದ ವಿರುದ್ಧ ಕೈಗಾರಿಕಾ ಕೃಷಿ ಸಾರಿದ ಸಮರ

ಅಸ್ಸಾಂನಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ತಮ್ಮ ಕಾರುಗಳಲ್ಲೆ ಮತಯಂತ್ರಗಳನ್ನು ಸಾಗಿಸುತ್ತಿರುವುದು ಸಾಬೀತಾಗುತ್ತಿವೆ. ಇದೊಂದು ದೊಡ್ಡದಾದ ಸಮಸ್ಯೆ. ಆದರೆ ರಾಷ್ಟ್ರೀಯ ಮಾಧ್ಯಮದಲ್ಲಿ ಏನೂ ನಡೆಯುತ್ತಿಲ್ಲ” ಎಂದು ರಾಹುಲ್ ಹೇಳಿದರು.

‘ರಷ್ಯಾ ಮತ್ತು ಚೀನಾದಲ್ಲಿನ ಚಟುವಟಿಕೆಗಳು ಪ್ರಜಾತಾಂತ್ರಿಕ ವ್ಯವಸ್ಥೆ ವಿರುದ್ಧವಾಗಿವೆ’ ಎಂಬುದಾಗಿ ಬರ್ನ್ಸ್‌ ಹೇಳಿದಾಗ ಅದಕ್ಕೆ ರಾಹುಲ್‌ ಗಾಂಧಿ ಈ ರೀತಿ ಹೇಳಿದರು. ‘ನನ್ನ ಪ್ರಕಾರ ಅಮೆರಿಕ ಎಂಬುದು ಪ್ರಬುದ್ಧವಾದ ಚಿಂತನಾ ಕ್ರಮದ ಪ್ರತಿರೂಪ. ಸ್ವಾತಂತ್ರ್ಯ ಎಂಬುದು ನಿಮ್ಮ ಸಂವಿಧಾನದ ಮುಖ್ಯ ಆಶಯ. ಅದೇ ತಳಹದಿ. ಹೀಗಾಗಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಅದನ್ನು ರಕ್ಷಿಸುವ ಕೆಲಸ ನಿಮ್ಮಿಂದಾಗಬೇಕು’ ಎಂದರು.

“ನಾವು ನಮ್ಮ  ಪ್ರಗತಿ ಕುರಿತು ಯೋಚಿಸಿದಾಗ, ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ನಡುವೆ ಇರಬೇಕಿರುವ ಸಂಬಂಧ ಕಾಣುತ್ತಿಲ್ಲ. ನಮಗಿಂತ ಚೀನೀಯರು ಯಾವತ್ತೂ ಮುಂದು. ನಾನು ಉದ್ಯೋಗ ಸೃಷ್ಟಿ ಸಮಸ್ಯೆಯಿದೆ ಎಂದು ಹೇಳುವ ಯಾವುದೇ ಚೀನೀ ನಾಯಕರನ್ನು ಕಂಡಿಲ್ಲʼʼ ಎಂದು ಹೇಳಿದರು.

ಇದನ್ನು ಓದಿ :ಪ್ರಧಾನಿ ಮೋದಿ ಹುಟ್ಟುಹಬ್ಬ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದ ನಿರುದ್ಯೋಗ ದಿನ

“ಉದ್ಯೋಗ ಸೃಷ್ಟಿಯೇ ಇಲ್ಲವಾದರೆ ಅಭಿವೃದ್ಧಿಯನ್ನು ವ್ಯಾಖ್ಯಾನಿಸುವುದು ಹೇಗೆ. ಹಾಗಾಗಿ ಶೇ. 9ರಷ್ಟು ಪ್ರಗತಿ ದರದಲ್ಲಿ ಆಸಕ್ತಿಯೇ ಇಲ್ಲವೆಂದುʼʼ ಹೇಳಿದರು.

‘ರಾಜಕೀಯವಾಗಿ ಬಿಜೆಪಿಯ ಮಾರ್ಗದರ್ಶಿಯಾಗಿರುವ ಆರ್‌ಎಸ್‌ಎಸ್‌, ದೇಶದ ಪ್ರಮುಖ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಪ್ರಸ್ತುತ ದೇಶದಲ್ಲಿ ಆಡಳಿತಾರೂಢ ನಡೆಸುವ ಪಕ್ಷ ಪ್ರಮುಖ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಗಳು ಅವರ ಹಿಡಿತದಲ್ಲಿವೆ.

ಹಣಕಾಸು ಹಾಗೂ ಮಾಧ್ಯಮಗಳ ಮೇಲೆ ಆ ಪಕ್ಷ ಬಿಗಿ ಹಿಡಿತ ಸಾಧಿಸಿದೆ. ಹೀಗಾಗಿ ಕಾಂಗ್ರೆಸ್‌ ಮಾತ್ರವಲ್ಲ, ಇತರ ಪಕ್ಷಗಳಾದ ಬಿಎಸ್‌ಪಿ, ಎಸ್‌ಪಿ, ಎನ್‌ಸಿಪಿ ಸಹ ಈಗ ಚುನಾವಣೆಗಳಲ್ಲಿ ಗೆಲ್ಲಲಾರದಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದೂ ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಹೇಗೆ ಕಾರ್ಯ ನಿರ್ವಹಿಸಬೇಕಿತ್ತೋ ಆ ರೀತಿ ಆಗುತ್ತಿಲ್ಲ ಎಂದು ಖೇಧ ವ್ಯಕ್ತಪಡಿಸಿದರು.

 

Donate Janashakthi Media

Leave a Reply

Your email address will not be published. Required fields are marked *