ಉದ್ಯೋಗ ಖಾತ್ರಿ ಮೂಲಕ ಕೆರೆ ಹೂಳೆತ್ತಿ ಜಲಪಾತ ಸೃಷ್ಟಿಸಿದ ಅತ್ತಾಜೆ ಗ್ರಾಮಸ್ಥರು

ಸರಕಾರ ಅನುಷ್ಠಾನಕ್ಕೆ ತಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮುಖಾಂತರ ಒಂದು ಹಳ್ಳಿ ಪ್ರವಾಸಿ ಕೇಂದ್ರ ವಾಗುತ್ತದೆ ಎಂದರೆ ಖುಷಿಯ ವಿಚಾರವೇ ಸರಿ ಅಲ್ಲವೇ? ಬ್ರಿಟೀಷರ ಕಾಲದಲ್ಲಿ ಮಾಡಲಾದ ಕೆರೆಯೊಂದು 78 ವರ್ಷಗಳ ನಂತರ ಪ್ರವಾಸೋದ್ಯಮವಾಗಿ ಮಾರ್ಪಾಡಾಗುತ್ತದೆ .

ಇದು ದಕ್ಷಿಣ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅತ್ತಾಜೆ ಎಂಬಲ್ಲಿನ ವಿಚಾರ .ಕಳೆದ ವರ್ಷ ಸಂಜೀವಿನಿ ಯೋಜನೆಯ ಅಡಿಯಲ್ಲಿ ಕೆರೆಯ ಸುತ್ತ ಮುತ್ತಲಿನ ಜಾಗವನ್ನು ಸ್ವಚ್ಚಗೊಳಿಸಿ ನೆಲ್ಲಿಕಾಯಿ, ಪೇರಳೆ, ಕೋಕಂ ,ಹಲಸು ಇತ್ಯಾದಿ ಹಣ್ಣಿನ ಗಿಡಗಳನ್ನು ನೆಡಲಾಗಿತ್ತು.

ಎರಡು ವರ್ಷ ಗಳ ಹಿಂದಿನವರೆಗೂ ಖಾಸಗಿಯವರು ನೀರಿನ ತೆರಿಗೆ ಕಟ್ಟಿ ಅದರ ನೀರನ್ನು ಒಬ್ಬರೇ ವ್ಯಕ್ತಿ ಬಳಸುತ್ತಿದ್ದರು.ಆದರೆ ಈಗ ಗ್ರಾಮಪಂಚಾಯತ್ ಅದನ್ನು ಸುಪರ್ದಿಗೆ ತೆಗೆದುಕೊಂಡು ಪ್ರವಾಸಿ ಕೇಂದ್ರವಾಗಿಸಲು ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಇದರ ಫಲವಾಗಿ ಈ ಬಾರಿ ಎಂ.ಜಿ ನರೇಗಾ ಯೋಜನೆಯಡಿಯಲ್ಲಿ ಹಳ್ಳಿಯ ಜನರೆಲ್ಲಾ ಒಟ್ಟಾಗಿ ಜಾತಿ ಭೇದವಿಲ್ಲದೆ,ಹೆಣ್ಣು ಗಂಡೆಂಬ ಭೇದವಿಲ್ಲದೆ,ಹಿರಿಯರು ಕಿರಿಯರೆನ್ನದೆ ಕೆರೆಯ ಹೂಳೆತ್ತುವ ಕಾರ್ಯ ಮಾಡುತ್ತಿದ್ದಾರೆ.ಮಾತ್ರವಲ್ಲದೆ ಕೆರೆಯ ಮೇಲ್ಭಾಗದಲ್ಲಿ 671 ಇಂಗುಗುಂಡಿ ಮಾಡಲಾಗುತ್ತಿದ್ದು ಇದರ ಪರಿಣಾಮವಾಗಿ ಈ ಹಳ್ಳಿಯ ಎಲ್ಲರ ಮನೆಯ ಕೆರೆ ಬಾವಿಗಳು ಭರ್ತಿಯಾಗುತ್ತಿವೆ.ಕೆರೆಯ ಜಲಮಟ್ಟವೂ ಜಾಸ್ತಿಯಾಗುತ್ತಿದೆ.

ಈ ಕೆರೆ ಒಂದು ಜಲಪಾತ ಸೃಷ್ಟಿ ಗೂ ಕಾರಣವಾಗಿದೆ.ಇಷ್ಟು ವರ್ಷ ಡಿಸೆಂಬರ್ ವರೆಗೂ ಜಲಪಾತ ದಲ್ಲಿ ನೀರಿದ್ದು ನೀರಿನ ಜಲಮಟ್ಟ ಹೆಚ್ಚಿರುವ ಕಾರಣ ಇದು ಸದಾ ಹರಿವ ಜಲಪಾತ ಆಗಬಹುದು ಎಂದು ಜನರ ಅಭಿಪ್ರಾಯ. ಕೆರೆಯ ಸುತ್ತಮುತ್ತ ಕಲ್ಲು ಕಟ್ಟಿದ್ದು ಪಕ್ಕದಲ್ಲೇ ಒಂದು ಪುಟ್ಟದಾದ ಬಾವಿಯನ್ನು ಮಾಡಲಾಗಿದೆ.ಸುತ್ತಮುತ್ತ ಜನರು ಬಂದು ಪರಿಸರ ಅಸ್ವಾದಿಸಲು ಬೆಂಚುಗಳನ್ನು ಹಾಕಿಸುವ ಕನಸನ್ನು ಗ್ರಾಮಪಂಚಾಯತು ಹೊಂದಿದೆ.ಕೆರೆಗೆ ಉತ್ತಮ ರೋಡ್ ವ್ಯವಸ್ಥೆ ಯನ್ನು ಮಾಡಲಾಗುವುದು ಎಂದು ಪಂಚಾಯತ್ ಭರವಸೆ ನೀಡಿದೆ.ಹೀಗೆ.ಎಂ.ಜಿ ನರೇಗಾ ಹಳ್ಳಿಯ ಜನರಿಗೆ ಉದ್ಯೋಗ ದ ಭರವಸೆ ಯೊಂದಿಗೆ ಹಳ್ಳಿಯ ಅಂದವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿ ಇದೊಂದು ಮಾದರಿಕಾರ್ಯವಾಗಿದೆ ಎಂದು ಜನಸಾಮಾನ್ಯರು ಶ್ಲಾಘಿಸುತ್ತಿದ್ದಾರೆ.

ನೂರಾರು ಜನರು ಉದ್ಯೋಗ ಖಾತ್ರಿಯ ಮೂಲಕ ಈ ಕೆರೆಗೆ ಜೀವ ತುಂಬಿದ್ದಾರೆ. ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಕೆರೆ ಹೂಳೆತ್ತುವ ನಮ್ಮ ಕನಸಿಗದ ಜೀವ ತುಂಬಿದ್ದಾರೆ. ನಮ್ಮ ಈ ಪ್ರಯತ್ನದಿಂದ ನಮ್ಮ ಊರಿನ ಜೊತೆ ಇತರೆ ಗ್ರಾಮಗಳಿಗೆ ನೀರಿಗೆ ಅನುಕೂಲವಾಗಲಿದೆ. ಜಾನುವಾರಗಳಿಗೆ, ಕೃಷಿ ಕೆಲಸಗಳಿಗೆ ಈ ಕೆರೆಯಿಂದ ಸಾಕಷ್ಟು ಸಹಾಯವಾಗಲಿದೆ ಎಂದು DYFI ಮುಖಂಡ್ ಸುಜಿತ್ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *