ಉಡುಪಿ : ಕೊರಗರ ಮೇಲೆ ದಾಳಿ ನಡೆಸಿದ ಪೊಲೀಸ್ ಉಪನಿರೀಕ್ಷಕ ಬಿ.ಪಿ. ಸಂತೋಷ್ ಎನ್ನುವವರನ್ನು ಅಮಾನತುಗೊಳಿಸಿದ್ದು, ಐವರು ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಮಾಧ್ಯಮಗಳ ಮೂಲಕ ತಿಳಿಯಿತು. ಇದು ರಾಜ್ಯಾದ್ಯಂತ ಬಂದಿರುವ ಆಕ್ರೋಶ ಮತ್ತು ಪ್ರತಿರೋಧದ ಭಾಗವಾಗಿ ಆಗಿರುತ್ತದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಾನತು ಮಾಡಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸ್ವಾಗತಿಸಿದೆ.
ಆದರೆ ಅಮಾನತು ಮಾಡಿದಕ್ಷಣ ಅವರಿಗೆ ಶಿಕ್ಷೆ ಆಗಿದೆ ಎಂದು ಅರ್ಥವಲ್ಲ. ಸಂಬಂಧಿಸಿದ ಪೊಲೀಸರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಬೇಕು. ಉಡುಪಿ ಡಿವೈಎಸ್ಪಿ ಅವರು ಸ್ವಯಂಪ್ರೇರಿತರಾಗಿ ಅಟ್ರಾಸಿಟಿ ಕೇಸು ದಾಖಲಿಸಿ ಕ್ರಮ ಕೈಗೊಳ್ಳಲುಬೇಕು. ನೊಂದ ಕೊರಗ ಸಮುದಾಯದ ಬಂಧುಗಳಿಗೆ ಪರಿಹಾರ ನೀಡಬೇಕು. ಹಾಗೆ ದೌರ್ಜನ್ಯ ನಡೆಸಿರುವ ಪೊಲೀಸ್ ಅಧಿಕಾರಿಗಳು ಇಡೀ ಕೊರಗ ಸಮುದಾಯದ ಕುರಿತು ಕ್ಷಮೆ ಕೇಳಬೇಕು. ಮುಖ್ಯವಾಗಿ ಈ ಘಟನೆ ಹಿಂದೆ ಕೊರಗರ ಕುರಿತು ಅಸೂಯೆ ಮತ್ತು ಕೇಳು ಮನೋಭಾವ ಹೊಂದಿರುವ ಕಾಣದ ಕೈ ಕುರಿತು ತನಿಖೆ ಆಗಬೇಕು ಅವರಿಗೂ ಶಿಕ್ಷೆ ಆಗಬೇಕು ಎಂದು ಆಡಳಿತವನ್ನು ಒತ್ತಾಯಿಸುತೇವೆ ಎಂದು ಸಂಘಟನೆ ತಿಳಿಸಿದೆ.
ನ್ಯಾಯ ಸಿಗುವ ವರೆಗೆ ನಮ್ಮ ಸಮುದಾಯದ ಹೋರಾಟ ಮುಂದುವರಿಯಲಿದೆ ಎಂದು ಉಡುಪಿ ಜಿಲ್ಲಾ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕರಾದ ಶ್ರೀಧರ ನಾಡ ತಿಳಿಸಿದ್ದಾರೆ.