ಉಪ್ಪಿನಬೆಟಗೇರಿ: ಉಪ್ಪಿನಬೆಟಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಮುಂಗಾರು ಹಂಗಾಮಿನ ವಿವಿಧ ಬೆಳೆಯ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿದ ರೈತರು ಮಂಗಳವಾರ ಉದ್ದಿನ ಕಾಳು ಮಾರಾಟ ಮಾಡಿದರು.
ಇದನ್ನೂ ಓದಿ : ಒಂದು ಟನ್ ಕಬ್ಬಿಗೆ 3500 ರೂ. ನಿಗದಿಗೆ ಪ್ರತಿಭಟನೆ: ಗಾಜಿನ ಮೇಲೆ ಉರುಳು ಸೇವೆ ಮಾಡಿ ಹೋರಾಟ
ಈಗಾಗಲೇ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿದ ರೈತರು, ಬೆಳಗಿನಜಾವ ಟ್ರ‍್ಯಾಕ್ಟರ್‌ನಲ್ಲಿ ಉದ್ದಿನ ಚೀಲಗಳನ್ನು ಖರೀದಿ ಕೇಂದ್ರಕ್ಕೆ ತಲುಪಿಸುತ್ತಿದ್ದಾರೆ. ಸರದಿ ಪ್ರಕಾರ ಉದ್ದು ಮಾರಾಟ ಮಾಡುತ್ತಿದ್ದಾರೆ.
ಕಳೆದ ನಾಲ್ಕು ದಿನದಿಂದ ಖರೀದಿ ಕೇಂದ್ರದಲ್ಲಿ ರೈತರು ಬೆಳೆದ ಕಾಳುಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲಾಗುತ್ತಿದೆ. ಈಗಾಗಲೇ 1,500 ಅಧಿಕ ರೈತರು ನೋಂದಣಿ ಮಾಡಿಸಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 7ರವರೆಗೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಸರದಿ ಪ್ರಕಾರ ರೈತರಿಗೆ ಮುಂಚಿತವಾಗಿ ಮೊಬೈಲ್ ಕರೆ ಮಾಡಿ ತಿಳಿಸಲಾಗುತ್ತದೆ ಎಂದು ಪಿಕೆಪಿಎಸ್ ಸಿಬ್ಬಂದಿ ಸಲಿಂ ಖತೀಬ ತಿಳಿಸಿದರು.
ಇದನ್ನೂ ನೋಡಿ : ನಿರಂಜನರ ಕಥನ ಸಾಹಿತ್ಯದಲ್ಲಿ ಮಹಿಳೆ – ಡಾ ಎನ್. ಗಾಯತ್ರಿ Janashakthi Media
