ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್‌ ಕ್ಲಿಕ್ ವಿರುದ್ಧ ‘ಯುಎಪಿಎ’ ದಾಖಲು; 2 ಪತ್ರಕರ್ತರು ವಶಕ್ಕೆ!

ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಸೆಲ್‌ ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್ ಕ್ಲಿಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ-ತಡೆಗಟ್ಟುವಿಕೆ-ಕಾಯ್ದೆ(ಯುಎಪಿಎ)ಯ ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿದೆ. ಮಂಗಳವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಹಲವಾರು ಪತ್ರಕರ್ತರ ಮನೆಗಳನ್ನು ಶೋಧಿಸಲಾಗಿದ್ದು, ಕನಿಷ್ಠ ಇಬ್ಬರು ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿದೆ. ನ್ಯೂಸ್‌ ಕ್ಲಿಕ್ ಆವರಣದಲ್ಲೂ ಶೋಧ ನಡೆಸಲಾಗಿದೆ ಎಂದು ವರದಿಯಾಗಿದೆ.

ನ್ಯೂಸ್ ಕ್ಲಿಕ್ ವರದಿಗಾರನನ್ನು ದಕ್ಷಿಣ ದೆಹಲಿಯಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ. ಬೆಳಗ್ಗೆ 7.15ರ ಸುಮಾರಿಗೆ ಸಾಮಾನ್ಯ ಉಡುಪಿನಲ್ಲಿದ್ದ ಇಬ್ಬರು ಸೇರಿದಂತೆ ಸುಮಾರು ಏಳು ಪೊಲೀಸ್ ಸಿಬ್ಬಂದಿಯ ತಂಡ ಅವರ ಮನೆಗೆ ಬಂದು ಒಂದು ಗಂಟೆ ಕಾಲ ವಿಚಾರಣೆ ನಡೆಸಿವೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ಹೇಳಿವೆ.

ಇದನ್ನೂ ಓದಿ: ಹಿಂದುತ್ವದ ಗೆಲುವಿಗೆ ವಾಟ್ಸ್ ಆ್ಯಪ್ ಅಪಪ್ರಚಾರ:ಬಿಜೆಪಿ ಐಟಿ ವಿಂಗ್ ಸಂಚು!

“ಪೊಲೀಸರು ಇಂದು ಅವರನ್ನು ಬಿಡುಗಡೆ ಮಾಡುತ್ತಾರೆ ಎಂದು ಹೇಳಿದರು…ಸುಮಾರು 8.15 ಕ್ಕೆ ಹೊರಟರು” ಎಂದು ವಶಕ್ಕೊಗಳಗಾದ ಕುಟುಂಬದ ಸದಸ್ಯರು ಹೇಳಿದ್ದಾರೆ.

ಹಿರಿಯ ಪತ್ರಕರ್ತ ಊರ್ಮಿಳೇಶ್ ಅವರನ್ನೂ ವಶಕ್ಕೆ ಪಡೆಯಲಾಗಿದೆ. “ಊರ್ಮಿಳೇಶ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅವರ ಪತ್ನಿ ನನಗೆ ತಿಳಿಸಿದ್ದಾರೆ. ಸದ್ಯಕ್ಕೆ ನನಗೆ ಬೇರೆ ಯಾವುದೇ ವಿವರಗಳಿಲ್ಲ” ಎಂದು ಪತ್ರಕರ್ತನ ವಕೀಲರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಅಮೆರಿಕದ ಟೆಕ್ ಮೊಗಲ್ ನೆವಿಲ್ಲೆ ರಾಯ್ ಸಿಂಘಮ್ ಅವರು ನ್ಯೂಸ್ ಕ್ಲಿಕ್‌ಗೆ ಧನಸಹಾಯ ಮಾಡಿದ್ದಾರೆ ನ್ಯೂಯಾರ್ಕ್ ಟೈಮ್ಸ್ ಆರೋಪಿಸಿತ್ತು. ಸಿಂಘಮ್ ಅವರು ಚೀನಾದ ಪರವಾಗಿ ಪ್ರೊಪಗಾಂಡ ನಡೆಸುವ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದು ವರದಿಯು ಆರೋಪಿಸಿತ್ತು. ಈ ವರದಿ ಪ್ರಕಟವಾಗುತ್ತಿದ್ದಂತೆ ನ್ಯೂಸ್‌ ಕ್ಲಿಕ್‌ ಹಣದ ಬಗ್ಗೆ ತನಿಖೆ ಪ್ರಾರಂಭಿಸಿದ ಜಾರಿ ನಿರ್ದೇಶನಾಲಯವು ಈ ಹಿಂದೆ ಅದರ ಆಸ್ತಿಯನ್ನು ತಡೆಹಿಡಿದಿತ್ತು.

ಇದನ್ನೂ ಓದಿ: ಸಶಸ್ತ್ರ ಪಡೆಗಳಿಗೆ ಅಂಗವೈಕಲ್ಯ ಪಿಂಚಣಿ ನಿಯಮದಲ್ಲಿ ಬಿಜೆಪಿಯ ನಕಲಿ ರಾಷ್ಟ್ರೀಯತೆ ಮತ್ತೆ ಗೋಚರ| ಮಲ್ಲಿಕಾರ್ಜುನ ಖರ್ಗೆ ಆರೋಪ

ನ್ಯೂಯಾರ್ಕ್‌ ಟೈಮ್ಸ್‌  ವರದಿ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ರಾಜೀವ್ ಚಂದ್ರಶೇಖರ್, “ಚೀನಾ, ಕಾಂಗ್ರೆಸ್ ಮತ್ತು ನ್ಯೂಸ್‌ಕ್ಲಿಕ್ ‘ಹೊಕ್ಕುಳಬಳ್ಳಿ’ ಸಂಬಂಧ ಹೊಂದಿದ್ದಾರೆ” ಎಂದು ಆರೋಪಿಸಿದ್ದರು. ನ್ಯೂಯಾರ್ಕ್‌ ಟೈಮ್ಸ್‌ ವರದಿಯ ಕೆಲವು ದಿನಗಳ ನಂತರ ಆಗಸ್ಟ್‌ನಲ್ಲಿ ನ್ಯೂಸ್ ಕ್ಲಿಕ್ ವಿರುದ್ಧ ಯುಎಪಿಎ ಪ್ರಕರಣವನ್ನು ದಾಖಲಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ನ್ಯೂಸ್ ಲಾಂಡ್ರಿ ವರದಿ ಮಾಡಿದೆ.

ಪತ್ರಕರ್ತರಾದ ಪರಂಜಯ್ ಗುಹಾ ಠಾಕುರ್ತಾ, ಅಭಿಸಾರ್ ಶರ್ಮಾ, ಊರ್ಮಿಳೇಶ್, ಔನಿಂದ್ಯೋ ಚಕ್ರವರ್ತಿ ಮತ್ತು ಭಾಷಾ ಸಿಂಗ್, ವಿಡಂಬನಕಾರ ಸಂಜಯ್ ರಾಜೌರಾ ಮತ್ತು ಸಾಮಾಜಿಕ ಹೋರಾಟಗಾರ ಸೊಹೈಲ್ ಹಶ್ಮಿ ಅವರ ಮನೆಗಳನ್ನು ಇಂದು ಶೋಧಿಸಲಾಗಿದೆ ಎಂದು ವರದಿಯಾಗಿದೆ.

ಅದರಲ್ಲೂ ಖ್ಯಾತ ಪತ್ರಕರ್ತ ಅಭಿಸಾರ್ ಶರ್ಮಾ ಮತ್ತು ಭಾಷಾ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿರುವ ಭಾಷಾ ಸಿಂಗ್ ಅವರ ನಿವಾಸದ ಹೊರಗೆ ಪೊಲೀಸ್ ಸಿಬ್ಬಂದಿ ಮತ್ತು ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಿರುವುದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಆಹಾರ ಕಳ್ಳತನ ಆರೋಪ: 13 ವರ್ಷದ ಆದಿವಾಸಿ ಬಾಲಕನ ಗುಂಪು ಹತ್ಯೆ ಮಾಡಿ ರಸ್ತೆಯಲ್ಲಿ ಎಸೆದ ದುಷ್ಕರ್ಮಿಗಳು

ನ್ಯೂಸ್‌ಕ್ಲಿಕ್ ವಿರುದ್ಧದ ಯುಎಪಿಎ ಪ್ರಕರಣ ಮತ್ತು ಪತ್ರಕರ್ತರ ಮನೆಗಳ ಮೇಲೆ ದೆಹಲಿ ಪೊಲೀಸರು ಮಾಡಿರುವ ದಾಳಿಗಳ ವಿರುದ್ಧ ಹಲವಾರು ಪತ್ರಿಕಾ ಸಂಸ್ಥೆಗಳು ಖಂಡಿಸಿವೆ.

”ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್” ದಾಳಿಯನ್ನು ಖಂಡಿಸಿದ್ದು, ತೀವ್ರ ಕಳವಳ ವ್ಯಕ್ತಪಡಿಸಿದೆ. “ದಾಳಿಯು ಸರ್ಕಾರದ ಅನಿಯಂತ್ರಿತ ಬೆದರಿಸುವ ನಡವಳಿಕೆಯ ಮತ್ತೊಂದು ಉದಾಹರಣೆ” ಎಂದು ಕರೆದಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌ | ಬಿಜೆಪಿ ಬೆಂಬಲಿಗರು ಹಂಚುತ್ತಿರುವ ಈ ಘಟನೆ ‘ಲವ್‌ ಜಿಹಾದ್’ ಅಲ್ಲ, ಯುಪಿಯದ್ದೂ ಅಲ್ಲ!

ನೆಟ್‌ವರ್ಕ್‌ ಆಫ್‌ ವುಮೆನ್‌ ಇನ್‌ ಮೀಡಿಯಾ, ಇಂಡಿಯಾ ಕೂಡಾ ಘಟನೆಯನ್ನು ಖಂಡಿಸಿದ್ದು, “ದೆಹಲಿ ಪೋಲಿಸರು ಶೋಧಿಸಿದ ಪತ್ರಕರ್ತರ ಮನೆಗಳೆಲ್ಲವೂ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯದ ಧ್ವನಿ ಹೊಂದಿರುವ ಪ್ರಮುಖರದ್ದಾಗಿದೆ” ಎಂದು ಹೇಳಿದೆ.

“ಪ್ರಭುತ್ವಕ್ಕೆ ಎದುರಾಗಿ ಸತ್ಯವನ್ನು ಮಾತನಾಡುವ ಪತ್ರಕರ್ತರು, ಹೋರಾಟಗಾರರು ಮತ್ತು ಕಲಾವಿದರು ಸರ್ಕಾರದಿಂದ ನಿರಂತರ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಆದರೆ ವಿಧೇಯರಾಗಿರುವ ಮತ್ತು ಬಗ್ಗುವ ಮಾಧ್ಯಮ ವ್ಯಕ್ತಿಗಳು ಹಾಗೂ ಮಾಧ್ಯಮ ಸಂಸ್ಥೆಗಳನ್ನು ಪೋಷಿಸಲಾಗುತ್ತಿದೆ” ಎಂದು ವುಮೆನ್ ಇನ್ ಮೀಡಿಯಾ ಟ್ವೀಟ್ ಮಾಡಿದೆ.

ಪ್ರೆಸ್ ಕ್ಲಬ್ ಆಫ್ ಇಂಡಿಯಾ ನ್ಯೂಸ್‌ ಕ್ಲಿಕ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರವು ವಿವರಗಳನ್ನು ನೀಡಲು ಒತ್ತಾಯಿಸಿದೆ.

ಇದನ್ನೂ ಓದಿ: ಬಹುನಿರೀಕ್ಷಿತ ಜಾತಿ ಸಮೀಕ್ಷೆ ಬಿಡುಗಡೆ ಮಾಡಿದ ಬಿಹಾರ ಸರ್ಕಾರ | ಹಿಂದುಳಿದ ವರ್ಗಳಗದ್ದೆ ಪ್ರಾಬಲ್ಯ

ಮುಂಬೈ ಪ್ರೆಸ್ ಕ್ಲಬ್ ಕೂಡಾ ನ್ಯೂಸ್ ಕ್ಲಿಕ್ ವಿರುದ್ಧದ ದಾಳಿಯನ್ನು ಖಂಡಿಸಿದ್ದು, ದಾಳಿಯನ್ನು ಪತ್ರಕರ್ತರ ವಿರುದ್ಧದ ಉದ್ದೇಶಿತ ಕಿರುಕುಳ ಅಭಿಯಾನ ಎಂದು ಕರೆದಿದೆ. ಜೊತೆಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಕೂಡ ದಾಳಿಯನ್ನು ಖಂಡಿಸಿದ್ದು, ದಾಳಿಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದೆ.

ವಿಡಿಯೊ ನೋಡಿ: ಇದು ಶಾಲೆಯಾ? ಅಥವಾ ಸ್ವಿಮ್ಮಿಂಗ್ ಫೂಲ್! ಶಾಸಕರೆ ಉತ್ತರಿಸಿ Janashakthi Media

Donate Janashakthi Media

Leave a Reply

Your email address will not be published. Required fields are marked *