ಉತ್ತರ ಪ್ರದೇಶ: ಕಾನುರದಲ್ಲಿ ನೀಟ್ ಅಭ್ಯರ್ಥಿ ಮೇಲೆ ಅತ್ಯಾಚಾರ ಎಸಗಿದ ಕೋಚಿಂಗ್ ಸೆಂಟರ್ ನ ಇಬ್ಬರು ಶಿಕ್ಷಕರು ಹಲವು ತಿಂಗಳ ಕಾಲ ಆಕೆಗೆ ಬ್ಲಾಕ್ ಮೇಲ್ ಮಾಡಿದ ಘಟನೆ ನಡೆದಿದೆ.
ನೀಟ್ ಮೆಡಿಕಲ್ ಪ್ರವೇಶ ಪರೀಕ್ಷೆ ಆಕಾಂಕ್ಷಿಯಾಗಿದ್ದ ಅಪ್ರಾಪ್ತ ಮೇಲೆ ಕಾನ್ಪುರದ ಖ್ಯಾತ ಕೋಚಿಂಗ್ ಸೆಂಟರ್ ನಲ್ಲಿ ಜನಪ್ರಿಯರಾಗಿದ್ದ ಇಬ್ಬರು ಶಿಕ್ಷಕರು ಅತ್ಯಾಚಾರ ಎಸಗಿದ್ದೂ ಅಲ್ಲದೇ ಹಲವು ತಿಂಗಳ ಕಾಲ ಬ್ಯಾಕ್ ಮೇಲ್ ಮಾಡಿ ದೌರ್ಜನ್ಯ ಎಸಗಿದ್ದಾರೆ.
ಕೆಲವು ತಿಂಗಳ ಹಿಂದೆ ಒಬ್ಬ ಶಿಕ್ಷಕ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಸಿಸಿಟಿವಿ ದೃಶ್ಯದ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಘಟನೆಯಿಂದ ಧೈರ್ಯ ಪಡೆದ ನೀಟ್ ಆಕಾಂಕ್ಷಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇಬ್ಬರು ಶಿಕ್ಷಕರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಪಂಚಾಯಿತಿ ಕಟ್ಟಡದೊಳಗೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು
2022ರಂದು ಯುವತಿ ನೀಟ್ ಮೆಡಿಕಲ್ ಪ್ರವೇಶ ಬರೆಯಲು ಕಾಯ್ಕುರದ ಖ್ಯಾತ ಕೋಚಿಂಗ್ ಸೆಂಟರ್ ಸೇರಿದ್ದಳು. 32 ವರ್ಷದ ಶಿಕ್ಷಕ ಸಾಹಿಲ್ ಸಿದ್ಧಿಕಿ ಕೆಲವು ಸಮಯದ ನಂತರ ಮನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪಾರ್ಟಿ ಹಮ್ಮಿಕೊಂಡಿದ್ದು ಬರುವಂತೆ ಆಹ್ವಾನ ನೀಡಿದ್ದಾನೆ, ಶಿಕ್ಷಕನ ಅಪಾರ್ಟ್ ಮೆಂಟ್ ಗೆ ಹೋದ ನಂತರವೇ ಯುವತಿಗೆ ತಿಳಿದಿದ್ದು ಯಾರೂ ಬಾರದೆ ತನ್ನನ್ನು ಮಾತ್ರ ಆಹ್ವಾವಿಸಿರುವುದು ಎಂದು.
ಈ ವೇಳೆ ಸಿದ್ಧಿಕಿ ಜ್ಯೂಸ್ ಕುಡಿದು ಹೋಗು ಎಂದು ಪುಸಲಾಯಿಸಿ ಜ್ಯೂಸ್ ನಲ್ಲಿ ಮತ್ತು ಬರುವ ಔಷಧ ಹಾಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದೂ ಅಲ್ಲದೇ ವೀಡಿಯೋ ಮಾಡಿಕೊಂಡಿದ್ದಾನೆ.
ನನ್ನ ಮೇಲೆ ಅತ್ಯಾಚಾರ ಎಸಗಿದ ವೀಡಿಯೋ ತೋರಿಸಿ ನನಗೆ ಬೆದರಿಕೆ ಹಾಕಿದ್ದೂ ಅಲ್ಲದೇ ಕುಟುಂಬದ ಸದಸ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೇ ಈ ರೀತಿ ಸಾಕಷ್ಟು ಜನರನ್ನು ಕೊಲೆ ಮಾಡಿದ್ದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾರೆ.
ಯುವತಿಯನ್ನು ಬ್ಲಾಕ್ ಮೇಲ್ ಮಾಡಿ ಕೆಲವು ಸಮಯ ತನ್ನ ಜೊತೆ ಕೂಡಿಟ್ಟುಕೊಂಡಿದ್ದು ಪಾರ್ಟಿಗಳಿಗೆ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ 39 ವರ್ಷದ ಕೆಮಿಸ್ಟ್ರಿ, ಶಿಕ್ಷಕ ವಿಕಾಸ್ ಪೊರ್ವೆಲ್ ಎಂಬಾತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹೋಳಿ ಹಬ್ಬಕ್ಕಾಗಿ ಮನೆಗೆ ಮರಳಿದ್ದಾಗ ಕರೆ ಮಾಡಿದ ಸಿದ್ದಿಕಿ ಕೂಡಲೇ ವಾಪಸ್ ಬರುವಂತೆ ಸೂಚಿಸಿದ್ದಾನೆ. ಇಲ್ಲದೇ ಇದ್ದರೆ ಕುಟುಂಬದ ಸದಸ್ಯರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾರೆ.
ಇದನ್ನೂ ನೋಡಿ: ಪ್ರೋಮೊ| ನಿರಂಜನ 100 – ಚಿರಸ್ಮರಣೆ ಮತ್ತು ಸಮಕಾಲೀನತೆ ಉಪನ್ಯಾಸ ಸರಣಿ Janashakthi Media