ಬೆಂಗಳೂರು: ಇಬ್ಬರು ಪಿಡಿಒ ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಸಂಬಳ ನೀಡದ ಹಿನ್ನೆಲೆ ಜೀವನ ಮರಣ ಹೋರಾಟ ನಡೆಸುತ್ತಿದ್ದಾರೆ. ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಕ್ಯಾನ್ಸರ್ ಹಾಗೂ ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವ ಪಿಡಿಒ ಅಧಿಕಾರಿಗಳಿಗೆ ಒಂದು ವರ್ಷದಿಂದ ಸಂಬಳ ಕೊಟ್ಟಿಲ್ಲ. ಹೀಗಾಗಿ ಜೀವನ ನಡೆಸೋಕಾಗದೆ ಇಬ್ಬರು ಪಿಡಿಒ ಅಧಿಕಾರಿಗಳು ಸಂಕಷ್ಟದಲ್ಲಿದ್ದಾರೆ. ವಿಜಯಪುರ ಜಿಲ್ಲೆಯ ಮಹೇಶ್ ಹಾಗೂ ಶಿವಮೊಗ್ಗ ಜಿಲ್ಲೆಯ ನಾಗೇಶ್ ಪಿಡಿಒ ಅಧಿಕಾರಿಗಳು ಎನ್ನಲಾಗಿದೆ.
ವೈದ್ಯಕೀಯ ಆಧಾರದ ಮೇಲೆ ಇದುವರೆಗೂ ಸರ್ಕಾರ ಸ್ಥಳ ನಿಯುಕ್ತಿ ಮಾಡಿಲ್ಲ. ಇತ್ತ, ಕ್ಯಾನ್ಸರ್ ಹಾಗೂ ಕಿಡ್ನಿ ವೈಫಲ್ಯ ದಿಂದಾಗಿ ಅಧಿಕಾರಿಗಳು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸಂಬಳ ಇಲ್ಲದೆ ವೈದ್ಯಕೀಯ ಖರ್ಚು ಭರಿಸಲಾಗಿದೆ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ: ರಾಜ್ಯದಲ್ಳಿ ಮಳೆ ಹೆಚ್ಚಾಗಿ 44,000 ಹೆಕ್ಟರ್ ಬೆಳೆ ಕೃಷಿ ಭೂಮಿಯಲ್ಲಿ ಹಾನಿಯಾಗಿದೆ: ಸಚಿವ ಕೃಷ್ಣ ಬೈರೇಗೌಡ
ಹೀಗಾಗಿ ಕರ್ನಾಟಕ ಪಂಚಾಯತ್ ರಾಜ್ ಅಭಿವೃದ್ಧಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ರಾಜುವಾರದ ಸರ್ಕಾರಕ್ಕೆ ಸಾಕಷ್ಟು ಭಾರೀ ಪತ್ರ ಬರೆದು ಗಮನಕ್ಕೆ ತರುವ ಕೆಲಸ ಮಾಡಿದ್ದಾರೆ. ಆದ್ರೂ ಪ್ರಯೋಜನ ಆಗಿಲ್ಲ.
ಮಹೇಶ್, ನಾಗೇಶ್ ಇಬ್ಬರೂ ಪಿಡಿಒ ಅಧಿಕಾರಿಗಳಿಗೆ ತುರ್ತಾಗಿ ಸ್ಥಳ ನಿಯುಕ್ತಿ ಮಾಡಬೇಕು. ಹಾಗೂ ಕಳೆದ ಒಂದು ವರ್ಷದಿಂದ ಸಂಬಳ ಇಲ್ಲದೆ ಇಬ್ಬರು ಅಧಿಕಾರಿಗಳು ಸಂಕಷ್ಟದಲ್ಲಿದ್ದಾರೆ. ಮಾನವೀಯತೆ ಮೆರೆಯಬೇಕಾದ ಇಲಾಖೆ ಮೈ ಮರೆತಿದೆ. ಈ ಕೂಡಲೇ ಇಲಾಖೆ ಸಚಿವರು ಇಬ್ಬರೂ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ. ಸಂಬಳ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಇದನ್ನೂ ನೋಡಿ: ನಿರಂಜನರ ಕಾದಂಬರಿಗಳ ಕುರಿತು ಚ.ಹ. ರಘುನಾಥ್ ಮಾತುಗಳು Janashakthi Media