ಕೇಂದ್ರ ಸಂಪುಟದ ಇನ್ನೂ ಎರಡು ಕಾರ್ಪೊರೇಟ್‍ಪರ ನಿರ್ಧಾರಗಳು ; ಅಪಾಯಕಾರಿ ತಿದ್ದುಪಡಿಗಳನ್ನು ವಿರೋಧಿಸಲು ಪ್ರಜಾಪ್ರಭುತ್ವವಾದಿ ಶಕ್ತಿಗಳಿಗೆ ಕರೆ

ನವದೆಹಲಿ: ಖಾಸಗಿ ಮತ್ತು ವಿದೇಶಿ ಕಂಪನಿಗಳ ಪ್ರವೇಶಕ್ಕೆ ಅನುವು ಮಾಡಿಕೊಡುವ ಪರಮಾಣು ವಿದ್ಯುತ್ ಉತ್ಪಾದನೆಯನ್ನು ತೆರೆಯುವುದನ್ನು ಸಿಪಿಐ(ಎಂ) ವಿರೋಧಿಸುತ್ತದೆ ಮತ್ತು ವಿಮಾ ವಲಯದಲ್ಲಿ 100 ಪ್ರತಿಶತ ವಿದೇಶಿ ನೇರ ಹೂಡಿಕೆ (FDI)ಗೆ ಅನುವು ಮಾಡಿಕೊಡುವ ಅದರ ನಿರ್ಧಾರಕ್ಕೂ ತಾವು ಒಪ್ಪುವುದಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಕೇಂದ್ರ 

ವಿದೇಶೀಯರಿಗೆ ದುಪ್ಪಟ್ಟು ಬಕ್ಷೀಸು

ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ಪರಮಾಣು ಶಕ್ತಿ ಕಾಯ್ದೆ, 1962 ಮತ್ತು ನಾಗರಿಕ ಪರಮಾಣು ಹಾನಿ ಹೊಣೆಗಾರಿಕೆ ಕಾಯ್ದೆ (CLNDA), 2010 ನ್ನು ತಿದ್ದುಪಡಿ ಮಾಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ವಿದೇಶಿ ತಂತ್ರಜ್ಞಾನ ಮತ್ತು ಸಲಕರಣೆಗಳ ಪೂರೈಕೆದಾರರು ಸೇರಿದಂತೆ ಖಾಸಗಿ ಕಂಪನಿಗಳ ಪ್ರವೇಶಕ್ಕೆ ಅನುವು ಮಾಡಿಕೊಡುವ ಉದ್ದೇಶವನ್ನು ಈ ಪ್ರಸ್ತಾವಿತ ತಿದ್ದುಪಡಿಗಳು ಹೊಂದಿವೆ.

ಪರಮಾಣು ಶಕ್ತಿಯಂತಹ ಆಯಕಟ್ಟಿನ  ಮತ್ತು ಬಹು ನಿರ್ಣಾಯಕ ವಲಯವನ್ನು ಖಾಸಗಿ ಕಂಪನಿಗಳಿಗೆ ತೆರೆಯುವುದು ಹಾನಿಕಾರಕವಾಗಿದೆ. ಈ ತಿದ್ದುಪಡಿಗಳು ಖಾಸಗಿ ಪರಮಾಣು ಕಂಪನಿಗಳು ಉತ್ಪಾದಿಸುವ ವಿದ್ಯುತ್‌ಗೆ ಸುಂಕಗಳನ್ನು ನಿರ್ಧರಿಸುವಲ್ಲಿ ಅವರಿಗೆ ಮುಕ್ತ ಹಸ್ತವನ್ನು ನೀಡುತ್ತವೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ | ಹೆಲ್ಮೆಟ್ ಕಡ್ಡಾಯ : ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ ಪೋಲಿಸ ಗೆ ದಂಡ

CLNDA ಗೆ ತಿದ್ದುಪಡಿಯು ಪರಮಾಣು ಅಪಘಾತದಿಂದ ಹಾನಿಗೊಳಗಾದ ಜನರಿಗೆ ನೀಡಬೇಕಾದ ಪರಿಹಾರವನ್ನು ದುರ್ಬಲಗೊಳಿಸುವುದರಿಂದ ಅದು ಅಪಾಯಕಾರಿ. ಸರ್ಕಾರವು ಅಮೆರಿಕದ ಒತ್ತಡಕ್ಕೆ ಮಣಿದು, ಅಪಘಾತಗಳು ಮತ್ತು ಇತರ ಅಹಿತಕರ ಘಟನೆಗಳಿಗೆ ತಯಾರಕರನ್ನು ಹೊಣೆಗಾರರನ್ನಾಗಿ ಮಾಡದಿರಲು  ಕಾಯ್ದೆಗೆ ತಿದ್ದುಪಡಿ ತರುತ್ತಿದೆ. ಇದು ಅವರಿಗೆ ದುಪ್ಪಟ್ಟು  ಬಕ್ಷೀಸುಗಳನ್ನು ನೀಡುತ್ತದೆ – ಅಪಘಾತಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಮತ್ತು ಸುಂಕಗಳನ್ನು ನಿರ್ಧರಿಸುವಲ್ಲಿ ನಿಯಂತ್ರಕ ಉಸ್ತುವಾರಿಗೆ  ಒಳಪಡಿಸಲಾಗುವುದಿಲ್ಲ ಕೂಡ. ಇದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳಿಗೆ ಇನ್ನೂ ಒಂದು  ಉದಾಹರಣೆಯಾಗಿದೆ.

ಹಣಕಾಸು ಸ್ಥಿರತೆ, ಸಾಮಾಜಿಕ ಭದ್ರತೆ ದುರ್ಬಲ

ವಿಮಾ ವಲಯದಲ್ಲಿ ಶೇ. 100 ರಷ್ಟು ವಿದೇಶಿ ನೇರ ಹೂಡಿಕೆಗೆ  ಅವಕಾಶ ನೀಡುವುದರಿಂದ ದೇಶೀಯ ವಿಮಾ ಉದ್ಯಮ ಅಸ್ಥಿರಗೊಳ್ಳುತ್ತದೆ. ಇದು ಪಾಲಿಸಿದಾರರ ಖಾಸಗಿತ್ವ ಮತ್ತು ಹಣಕಾಸು ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ. ಸಾರ್ವಜನಿಕ ಕಲ್ಯಾಣ ಉದ್ದೇಶಗಳಿಗಿಂತ  ವಿದೇಶಿ ಹೂಡಿಕೆದಾರರ ವಾಣಿಜ್ಯ ಆದ್ಯತೆಗಳದ್ದೇ ಕೈಮೇಲಾಗುತ್ತದೆ. ಇದು ಹಣಕಾಸು ಸ್ಥಿರತೆ ಮತ್ತು ಸಾಮಾಜಿಕ ಭದ್ರತೆಯನ್ನು ದುರ್ಬಲಗೊಳಿಸುತ್ತದೆ. ಈ ಕ್ರಮವು ಲೂಟಿಕೋರ ಕಂಪನಿ ಸ್ವಾಧೀನಗಳಿಗೆ ಬಾಗಿಲು ತೆರೆಯುತ್ತದೆ, ಇದರ ಫಲಿತಾಂಶವಾಗಿ ದೇಶವು  ಪ್ರಮುಖ ರಾಷ್ಟ್ರೀಯ ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ಕಳಕೊಳ್ಳುತ್ತದೆ.

ಆದ್ದರಿಂದ  ದೇಶದ ಹಿತಾಸಕ್ತಿಗಳ ರಕ್ಷಣೆಗಾಗಿ ಈ ತಿದ್ದುಪಡಿಗಳನ್ನು ವಿರೋಧಿಸಲು ಸಮಾಜದ ಎಲ್ಲಾ ಪ್ರಜಾಪ್ರಭುತ್ವವಾದೀ  ವಿಭಾಗಗಳಿಗೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆ ನೀಡಿದೆ.

ಇದನ್ನೂ ನೋಡಿ: ಸಾರಿಗೆ ಕಾರ್ಮಿಕರ ಭವಣೆಗಳು – ಕಣ್ತೆರೆಯದ ಸರಕಾರJanashakthi Media

Donate Janashakthi Media

Leave a Reply

Your email address will not be published. Required fields are marked *