ಕಿನ್ನಿಗೋಳಿ| ಎರಡು ತಲೆಯ ಕರುವಿಗೆ ಜನನ – ಅಚ್ಚರಿಗೊಂಡ ಸ್ಥಳೀಯರು ಹಾಗೂ ಪಶುವೈದ್ಯರು

ಕಿನ್ನಿಗೋಳಿ:  ಮಂಗಳೂರಿನ ಕಿನ್ನಿಗೋಳಿ ಪ್ರದೇಶದಲ್ಲಿ ಎರಡು ತಲೆಗಳಿರುವ ಕರುವೊಂದು ಹುಟ್ಟಿರುವ ಅಪರೂಪದ ಘಟನೆನಡೆದಿದ್ದು, ಸ್ಥಳೀಯರ ಹಾಗೂ ಪಶುವೈದ್ಯರ ಗಮನ ಸೆಳೆದಿರುವ ಕರು ಸದ್ಯ ಆರೋಗ್ಯವಾಗಿದೆ.ಕಿನ್ನಿಗೋಳಿ

ದಾಮಸ್ ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬುವವರ ಹಸು ಕರುವಿಗೆ ಜನ್ಮ ನೀಡಿದ್ದು, ವಿಶೇಷವೆಂದರೆ ಕರುವಿನ ದೇಹ ಒಂದೇ ಆಗಿದ್ದು, ತಲೆ ಎರಡು ಇದೆ. ತಲೆ ಒಂದಕ್ಕೊಂದು ಅಂಟಿಕೊಂಡಿದ್ದು, ನಾಲ್ಕು ಕಣ್ಣುಗಳಿವೆ. ಮಧ್ಯ ಭಾಗದ ಎರಡು ಕಣ್ಣುಗಳು ಚಲನೆಯಲ್ಲಿಲ್ಲ, ಮತ್ತೆರಡು ಕಣ್ಣುಗಳು ಸರಿಯಾಗಿ ಇದೆ. ಎದ್ದು‌ ನಿಲ್ಲಲು ಸಾದ್ಯವಾಗದ ಈ ಕರುವಿಗೆ ಮಕ್ಕಳಿಗೆ ನೀಡುವ ಬಾಟಲ್ ಮೂಲಕ ಹಾಲನ್ನುನೀಡಲಾಗುತ್ತಿದೆ.

ಇದನ್ನು ಓದಿ : ಉತ್ತರ ಪ್ರದೇಶ| ಜಾತಿ ದೌರ್ಜನ್ಯ – ದಲಿತ ಯುವಕನನ್ನು ಥಳಿಸಿ, ತಮ್ಮು ಶೂ ನೆಕ್ಕಿಸಿದ ಸವರ್ಣೀಯರು

ಹಸುವಿನ ಎರಡನೇ ಕರು ಇದಾಗಿದ್ದು,ಈ ಬಾರಿ ಹೆಣ್ಣು ಕರುವನ್ನು ದನ ಹಾಕಿತ್ತು.‌ಮನೆ ಮಂದಿಗೆ ಹೆಣ್ಣು ಕರುವೆಂಬ ಖುಷಿಗಿಂತ ಮುಂದೆ ಈ ಕರು ಆರೋಗ್ಯವಾಗಿ ಇರುಬಹುದಾ ಅನ್ನುವ ಚಿಂತೆ ಜಾಸ್ತಿಯಾಗಿದೆ. ಸದ್ಯ ಎದ್ದು ನಿಲ್ಲಲಾಗದ ಸ್ಥಿತಿಯಲ್ಲಿ ಈ ಕರುವಿದೆ. ಕರುವನ್ನು ಎದ್ದು ನಿಲ್ಲಿಸಿದರೂ ದೇಹದ ತೂಕಕ್ಕಿಂತ ತಲೆಯ ತೂಕವೇ ಜಾಸ್ತಿ ಇದೆ.

ಪಶುವೈದ್ಯ ಮೂಲಗಳ ಪ್ರಕಾರ, ಕರುವು ಪಾಲಿಸೆಫಾಲಿ ಎಂದು ಕರೆಯಲ್ಪಡುವ ಸ್ಥಿತಿಯಲ್ಲಿದೆ. ಈ ಕರು ಎರಡು ತಲೆಗಳನ್ನು ಒಟ್ಟಿಗೆ ಸೇರಿಸಿದ್ದು, ಒಂದೇ ದೇಹ ಹೊಂದಿದೆ.ಇದು ನಾಲ್ಕು ಕಣ್ಣುಗಳನ್ನು ಹೊಂದಿದೆ, ಆದರೆ ಹೊರಗಿನ ಎರಡು ಮಾತ್ರ ಕಾರ್ಯನಿರ್ವಹಿಸುತ್ತವೆ, ಆದರೆ ಮಧ್ಯದ ಎರಡು ಕಾರ್ಯನಿರ್ವಹಿಸುವುದಿಲ್ಲ. ಸ್ಥಳೀಯ ಪಶುವೈದ್ಯರು ಕರುವನ್ನು ಪರೀಕ್ಷಿಸಿ ಸದ್ಯಕ್ಕೆ ಆರೋಗ್ಯವಾಗಿದೆ ಎಂದು ಖಚಿತಪಡಿಸಿದ್ದಾರೆ.

ಕರುವನ್ನು ಹೊಂದಿರುವ ಕುಟುಂಬ ಮತ್ತು ಹಸು ಸಾಕಣೆಯ ಜ್ಞಾನವುಳ್ಳ ಜನರ ಸಮಿತಿಯು ಕರುವನ್ನು ಉಳಿಸಲು ಪ್ರಯತ್ನ ನಡೆಸುತ್ತಿದ್ದಾರೆ, ಆದರೆ ಕರುವನ್ನು ಹೆಜ್ಜೆ ಇಡಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ.

ಮೂಲ್ಕಿ ತಾಲೂಕು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು, ಕರುವು ತಾನಾಗಿಯೇ ಎದ್ದು ಹಾಲು ಕುಡಿದರೇ ಆಗ ಅದು ಬದುಕುಳಿಯುವ ಸಾಧ್ಯತೆಯಿರುತ್ತದೆ ಎಂದು ಹೇಳಿದ್ದಾರೆ. ಆದರೆ ಸವಾಲುಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅವರು ಹೇಳಿದರು.

ಇದನ್ನು ನೋಡಿ : ದಲಿತ ವ್ಯಕ್ತಿಗೆ ಕ್ಷೌರ ನಿರಾಕರಿಸಿ ಕೊಲ ಪ್ರಕರಣ – ಜನಪರ ಸಂಘಟನೆಗಳಿಂದ ಸಂಗನಹಾಳ ಚಲೋ Janashakthi Media

Donate Janashakthi Media

Leave a Reply

Your email address will not be published. Required fields are marked *