ಮಾಳ ಮಲ್ಲೇಶ್ವರನ ಉತ್ಸವದಲ್ಲಿ ಇಬ್ಬರು ಸಾವು; 90 ಮಂದಿಗೆ ಗಾಯ

ಸಿರುಗುಪ್ಪ: ತಾಲೂಕಿನ ಗಡಿಗ್ರಾಮ ಸೀಮಾಂಧ್ರ ಪ್ರದೇಶದ ದೇವರಗುಡ್ಡದ ಮಾಳ ಮಲ್ಲೇಶ್ವರನ ಉತ್ಸವದಲ್ಲಿ 90 ಮಂದಿಗೆ ಗಾಯಗಳಾಗಿದ್ದು, ಗಂಭೀರ ಗಾಯಗೊಂಡ 25 ಜನರಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಕರ್ನೂಲ್, ಆದೋನಿ, ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಳಮಲ್ಲೆಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನೂಲ್ ಜಿಲ್ಲಾ ಎಸ್.ಪಿ. ವಿಕ್ರಾಂತ್‌ ಪಾಟೀಲ್ ತಿಳಿಸಿದ್ದಾರೆ.

ವಿಜಯದಶಮಿ ದಿನದಂದು ನಡೆಯುವ ಬನ್ನಿ ಉತ್ಸವ ಸಾಂಪ್ರದಾಯಿಕವಾಗಿ ನಡೆದಿದೆ, ಪ್ರಶಾಂತವಾಗಿ ಮುಗಿದಿದೆ, ಭಕ್ತರ ಭಧ್ರತೆಯ ಹಿತದೃಷ್ಟಿಯಿಂದ 1000 ಪೊಲೀಸರ ಬಂದೋಬಸ್ತ್ ಏರ್ಪಡಿಸಲಾಗಿತ್ತು, 10 ದ್ರೋಣ್ ಕ್ಯಾಮರ ಬಳಸಲಾಗಿತ್ತು ಎಂದರು.

ಇದನ್ನೂ ಓದಿ: ಕೋಲಾರ | ಯಳಚೇಪಲ್ಲಿಯ ಗ್ರಾಮದಲ್ಲಿ ಇಬ್ಬರು ವಿಧ್ಯಾರ್ಥಿನಿಯರು ನಾಪತ್ತೆ

ಈ ಉತ್ಸವದಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬರ ತಲೆಗೆ ಗಾಯವಾಗಿದ್ದು, ಮತ್ತೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಮಾಹಿತಿ ನೀಡಿದ ಅವರು ಇಬ್ಬರು ಅಡಿಷನಲ್ ಎಸ್.ಪಿ. 7 ಜನ ಡಿ.ವೈ.ಎಸ್.ಪಿ. ಸೇರಿ ಒಂದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕಿಡಿಗೇಡಿಗಳು ಯಾವುದೇ ಕೃತ್ಯವನ್ನು ನಡೆಸದಂತೆ 100 ಕಡೆ ಸಿ.ಸಿ.ಕ್ಯಾಮರಾ, 10 ಡ್ರೋಣ್ ಕ್ಯಾಮರಾಗಳು ಅಳವಡಿಸಲಾಗಿತ್ತು. ಕಿಡಿಗೇಡಿಗಳು ಭಾಗಿಯಾಗಿದ್ದರೆ ಅಂತವರನ್ನು ಸಿ.ಸಿ.ಕ್ಯಾಮರದಲ್ಲಿ ಗುರುತಿಸಿ ಪರಿಶೀಲನೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದೆಂದು ಮಾಹಿತಿ ನೀಡಿದರು.

ಆದೋನಿ ಸಬ್ ಕಲೆಕ್ಟರ್ ಮೌರ್ಯಭಾರದ್ವಾಜ್ ಇದ್ದರು.

ಆಲೂರು ತಾಲೂಕಿನ ಅರಿಕೇರಿ ಗ್ರಾಮದ ತಿಮ್ಮಪ್ಪ (40), ಆದೋನಿ ನಗರ ನಿವಾಸಿ ಆಂಜನೇಯಲು (50) ಸಾವನ್ನಪ್ಪಿದ್ದು, ತರ‍್ನೆಕಲ್ಲು ಗ್ರಾಮದ ಮಾರೆಣ್ಣ, ಅರಿಕೇರಿ ಗ್ರಾಮದ ಬಲರಾಮ, ಗೆಜ್ಜೆಳ್ಳಿ ಗ್ರಾಮದ ಗುರುಲಿಂಗ, ಧರ್ಮವರಂ ಸಮರ, ವಿರುಪಾಪುರ ಗ್ರಾಮದ ವೀರೇಶ ತೀವ್ರವಾಗಿ ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ.

ಇದನ್ನೂ ನೋಡಿ: ಉಪನ್ಯಾಸಕರೇ ಇಲ್ಲ ಅಂದ್ರೆ, ನಮಗೆ ಪಾಠ ಮಾಡೋರು ಯಾರು? ಪಾಸ್‌ ಆಗೋದು ಹೇಗೆ? – ವಿದ್ಯಾರ್ಥಿಗಳ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *