ಕಾಬೂಲ್‌ನ ರಷ್ಯಾದ ರಾಯಭಾರ ಕಚೇರಿ ಬಳಿ ಆತ್ಮಹತ್ಯಾ ಬಾಂಬ್ ಸ್ಫೋಟ : ಇಬ್ಬರು ಸಾವು, 11 ಮಂದಿಗೆ ಗಾಯ

ಕಾಬೂಲ್: ಸೋಮವಾರ ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಪ್ರವೇಶದ್ವಾರದ ಬಳಿ ಆತ್ಮಹತ್ಯಾ ಬಾಂಬರ್  ಸ್ಫೋಟಕದಿಂದಾಗಿ ರಷ್ಯಾದ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದು, 11 ಅಪರಿಚಿತ ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಸ್ತ್ರಸಜ್ಜಿತ ಗಾರ್ಡ್‌ಗಳು ದಾಳಿಕೋರನು ಗೇಟ್ ಸಮೀಪಿಸುತ್ತಿದ್ದಂತೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ.

“ಗುರಿ ತಲುಪುವ ಮೊದಲು ಆತ್ಮಹತ್ಯಾ ದಾಳಿಕೋರನನ್ನು ಗುರುತಿಸಿ, ರಷ್ಯಾದ ರಾಯಭಾರಿ (ತಾಲಿಬಾನ್) ಗಾರ್ಡ್‌ಗಳು ಗುಂಡು ಹಾರಿಸಿದ್ದಾರೆ … ಸಾವುನೋವುಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ” ಎಂದು ದಾಳಿ ನಡೆದ ಜಿಲ್ಲೆಯ ಪೋಲಿಸ್‌ ಮಾವ್ಲಾವಿ ಸಬೀರ್  ಮಾಹಿತಿ ನೀಡಿದ್ದು,ರಷ್ಯಾದ ರಾಯಭಾರ ಕಚೇರಿಯ ಸಿಬ್ಬಂದಿಗಳಿಗೆ ಯಾವುದೇ ಸಾವು ಅಥವಾ ಗಾಯಾಳುಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ.

ಒಂದು ವರ್ಷದ ಹಿಂದೆ ತಾಲಿಬಾನ್ ದೇಶವನ್ನು ವಶಪಡಿಸಿಕೊಂಡ ನಂತರ ಕಾಬೂಲ್‌ನಲ್ಲಿ ರಾಯಭಾರ ಕಚೇರಿಯನ್ನು ನಿರ್ವಹಿಸಿದ ಕೆಲವೇ ದೇಶಗಳಲ್ಲಿ ರಷ್ಯಾ ಕೂಡ ಒಂದು. ಮಾಸ್ಕೋ ಅಧಿಕೃತವಾಗಿ ತಾಲಿಬಾನ್ ಸರ್ಕಾರವನ್ನು ಗುರುತಿಸದಿದ್ದರೂ, ಅವರು ಗ್ಯಾಸೋಲಿನ್ ಮತ್ತು ಇತರ ಸರಕುಗಳನ್ನು ಪೂರೈಸುವ ಒಪ್ಪಂದದ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *