ಸುಪ್ರೀಂ ಕೋರ್ಟ್ ನಲ್ಲಿ ಯೋಗಿಯ ಬುಲ್ಡೋಜರ್ ನೀತಿಯ ಎರಡು ಪ್ರಕರಣ ದಾಖಲು

ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಬುಲ್ಡೋಜರ್ ನೀತಿಗೆ ಸಂಬಂಧಿಸಿದ ಎಪಿಸಿಆರ್ ಅಥವಾ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಂಸ್ಥೆಯು ಎರಡು ಪ್ರಕರಣವನ್ನ ದಾಖಲಿಸಿದೆ. ಇದನ್ನು ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ.

ಇತ್ತೀಚಿಗೆ ಮುಸ್ಲಿಮರ ಮನೆಯನ್ನು ಮಧ್ಯಪ್ರದೇಶದ ಉದಯಪುರ ಮತ್ತು ಜಾವ್ರ ಪ್ರದೇಶದಲ್ಲಿ ಸರ್ಕಾರ ಬುಲ್ಡೋಜರ್ ನಿಂದ ಉರುಳಿಸಿದ್ದು, ಈ ಪ್ರಕರಣವನ್ನು ಎಪಿಸಿಆರ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದೆ.

ಇದನ್ನೂ ಓದಿ: ಹೇಮಾ ಸಮಿತಿಯಂತೆ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚಿಸಿ ; ಫೈರ್ ಸಂಸ್ಥೆಯಿಂದ ಸಿಎಂಗೆ ಮನವಿ

ಉದಯಪುರದಲ್ಲಿ ರಶೀದ್ ಖಾನ್ ಅವರ ಮನೆಯನ್ನ ದ್ವಂಸಗೊಳಿಸಲಾಗಿತ್ತು. ಅವರು ಯಾವುದೇ ಅಪರಾಧದಲ್ಲಿ ಭಾಗಿಯಾಗಿರಲಿಲ್ಲ. ಅವರ ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಯ ಮಗನೊಬ್ಬ ಗಲಭೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಹೊರಿಸಿ ಸರ್ಕಾರ ಈ ಮನೆ ದ್ವಂಸ ಕಾರ್ಯ ನಡೆಸಿತ್ತು. ಜವ್ರದಲ್ಲಿ ಮೊಹಮ್ಮದ್ ಹುಸೇನ್ ಅವರ ತಂದೆಯ ಮನೆಯನ್ನು ದ್ವಂಸಗೊಳಿಸಲಾಗಿತ್ತು.

ಅವರ ಮಗನ ಮೇಲಿನ ಆರೋಪಕ್ಕಾಗಿ ಈ ಕೃತ್ಯವೆಸಗಲಾಗಿತ್ತು. ಈ ಎರಡು ಧ್ವಂಸ ಕಾರ್ಯಗಳು ಕಾನೂನುಬಾಹಿರವಾಗಿ ಮತ್ತು ಅನ್ಯಾಯವಾಗಿ ನಡೆದಿದೆ ಎಂದು ಆರೋಪಿಸಲಾಗಿದೆ. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ನ್ಯಾಯವಾದಿಗಳಾದ ಉದಯ್ ಸಿಂಗ್, ಫೌಝಿಯ ಶಕೀಲ್, ಅಜಯ್ ಸಿಂಗ್ ಮತ್ತು ಹುಝಯ್ ಫಾ ವಾದಿಸಿದ್ದಾರೆ.

ಇದನ್ನೂ ನೋಡಿ: ಸಮರಧೀರ ಹೋರಾಟ ರೂಪಿಸಲು ಕಾಮ್ರೇಡ್ ಸೂರಿ ಮಾದರಿ – ಮೀನಾಕ್ಷಿಸುಂದರಂ Janashakthi Media

Donate Janashakthi Media

Leave a Reply

Your email address will not be published. Required fields are marked *