ನರೇಗಲ್: ಎಮ್ಮೆಗಳು ಮೊಳಕೆಯೊಡೆದ ಹೆಸರು ಹಾಗೂ ಕುಳೆ ತಿಂದು ಸಾವನ್ನಪಿರುವ ಘಟನೆ ಬುಧವಾರ ಸಂಭವಿಸಿದೆ. ಪಟ್ಟಣದ ರೈತ ಅಂದಪ್ಪ ಶಂಕ್ರಪ್ಪ ಹಡಪದ ಎಂಬುವರು ರೈತರು ರಾಶಿ ಮಾಡಿದ ನಂತರ ಉಳಿದ ಹೆಸರು ಕಾಳುಗಳನ್ನು ಎಲ್ಲೆಂದರಲ್ಲಿ ಬಿಟ್ಟಿದ್ದು, ಮಳೆಯಿಂದಾಗಿ ಮೊಳಕೆಯೊಡೆದ ಹೆಸರು ಬೆಳೆ ತಿಂದು ಎಮ್ಮೆಗಳು ಮೃತಪಟ್ಟಿವೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ’ ಎಂದು ಅಂದಪ್ಪ ಹಡಪದ ಅವಲತ್ತುಕೊಂಡರು.
ಇದನ್ನೂ ಓದಿ:3,000 ಜನರನ್ನು ವಜಾಗೊಳಿಸಿದ ಒರಾಕಲ್ ಸಾಫ್ಟ್‌ವೇರ್ ಕಂಪನಿ
ದ್ವಿದಳ ಧಾನ್ಯದ ಬೆಳೆಗಳನ್ನು ರಾಶಿ ಮಾಡಿ ಹೊಲದಲ್ಲಿಯೇ ಬಿಟ್ಟರೆ ಚಿಗುರುವ ಕುಳೆಯಲ್ಲಿ ವಿಷಕಾರಿ ಅನಿಲ ಪ್ರಮಾಣ ಹೆಚ್ಚಾಗಿ ಇರುತ್ತದೆ. ಇದನ್ನು ತಿಂದಾಗ ಶ್ವಾಸಕೋಶಕ್ಕೆ ತೊಂದರೆಯಾಗಿ ದನ ಕರುಗಳು ಮೃತಪಡುತ್ತವೆ.
ಆದ್ದರಿಂದ ರೈತರು ಹಾಗೂ ಕುರುಗಾಹಿಗಳು ಜಾಗೃರಾಗಿರಬೇಕು. ಈ ಬಾರಿ ನರೇಗಲ್ ಭಾಗದಲ್ಲಿ 40ಕ್ಕೂ ಹೆಚ್ಚು ಕುರಿಗಳು, 2 ದನಗಳು ಸಾನ್ನಪ್ಪಿರುವ ಘಟನೆಗಳು ನಡೆದಿವೆ’ ಎಂದು ಪಶು ವೈದ್ಯಾಧಿಕಾರಿ ಲಿಂಗಯ್ಯ ಗೌರಿ ಹೇಳಿದರು.
ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಎಸ್‌ಐಟಿ ತನಿಖೆಗೆ ಅಡ್ಡಿಪಡಿಸಿದವರ ಮೇಲೆ ಕ್ರಮ ಜರುಗಿಸಬೇಕು – ಹಿರಿಯ ವಕೀಲ ಬಿ.ಟಿ. ವೆಂಕಟೇಶ್
