ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಮುಳ್ಳೂರು ಕ್ಯಾಂಪ್ ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸವಾರರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಎರಡು
37 ವರ್ಷದ ಶಿವಪ್ಪ , 21 ವರ್ಷದ ಮೌನೇಶ , 30 ವರ್ಷದ ಹನುಮೇಶ ಮೃತ ಬೈಕ್ ಸವಾರರು.
ಇದನ್ನೂ ಓದಿ: ಕೋಲ್ಕತ್ತಾ| ಎಸ್‌ಎಫ್‌ಐ ಪ್ರತಿಭಟನೆ: ಗಾಯಗೊಂಡ ಶಿಕ್ಷಣ ಸಚಿವ ಬೃತ್ಯ ಬಸು
ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸಿಂಧನೂರಿನಿಂದ ಬಸ್ಸಾಪುರ ಗ್ರಾಮಕ್ಕೆ ಹೊರಟಿದ್ದ ಶಿವಪ್ಪ ಹಾಗೂ ಸಿಂಧನೂರು ಕಡೆಗೆ ಹೊರಟಿದ್ದ ಚಿಕ್ಕಬೇರಗಿ ಗ್ರಾಮದ ಹನುಮೇಶ ಇಬ್ಬರು ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೊರಟಿದ್ದೇ ಅಪಘಾತಕ್ಕೇ ಕಾರಣವಾಗಿದೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಿಂಬದಿ ಸವಾರ ಕೊಳಬಾಳ ಗ್ರಾಮದ ಮೌನೇಶ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಿಂಧನೂರು ತಾಲೂಕಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಇಂಗ್ಲೀಷ್ ಕಲಿಯೋಣ | “Wh” ಪ್ರಶ್ನೆಗಳ ರಚನೆ ಹೇಗೆ? | ತೇಜಸ್ವಿನಿ |#whquestions| Spokenenglish |Janashakthi