ಫರಿದಾಬಾದ್: ಬಸ್ ಚಾಲಕನೊಬ್ಬ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಫರಿದಾಬಾದ್ನಲ್ಲಿ ಫೆಬ್ರವರಿ 9 ರಂದು ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯ ಮೇಲೆ ಖಾಸಗಿ ಬಸ್ಸಿನೊಳಗೆ ಚಾಲಕ ಅತ್ಯಾಚಾರವೆಸಗಿದ್ದೂ, ಅಪರಾಧ ನಡೆಯುತ್ತಿರುವಾಗ ಇದನ್ನು ತಪ್ಪಿಸುವ ಬದಲು ಕಂಡಕ್ಟರ್ ಯಾರಾದರೂ ಬಸ್ಸಿನ ಕಡೆಗೆ ಬರುತ್ತಾರೋ ಎಂದು ನೋಡುತ್ತಾ ಕಾದುಕುಳಿತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಡ್ರೈವರ್ ಜತೆ ಕಂಡಕ್ಟರ್‌ನನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತೆ ನೀಡಿರುವ ಮಾಹಿತಿ ಪ್ರಕಾರ, ಮಹಿಳೆ ಹಲವು ಫ್ಲಾಟ್ಗಳಲ್ಲಿ ಕೆಲಸ ಮಾಡುತ್ತಿದ್ದಳು, ಸೆಕ್ಟರ್ 56ರಲ್ಲಿ ಮನೆಗೆ ಹೋಗಲು ಸೆಕ್ಟರ್ 17 ಬೈಪಾಸ್ ರಸ್ತೆಯಲ್ಲಿ ಸಂಜೆ 6 ಗಂಟೆಗೆ ಬಸ್ಸಿಗಾಗಿ ಕಾಯುತ್ತಿದ್ದಳು. ಆಗ ಬಿಳಿ ಬಣ್ಣದ ಬಸ್ಸೊಂದು ಬಂದಿತ್ತು ಚಾಲಕ ಆಕೆಗೆ ಬಸ್ ಹತ್ತಲು ಅವಕಾಶ ನೀಡಿದ್ದ. ಹತ್ತಿದ ಬಳಿಕ ಬಸ್ಸಿನಲ್ಲಿ ತಾನೊಬ್ಬಳೇ ಇರುವುದು ಅರಿವಿಗೆ ಬಂದಿತ್ತು.
ಇದನ್ನೂ ಓದಿ: ಫ್ರಾನ್ಸ್ ಅಧ್ಯಕ್ಷರ ವಿಮಾನದಲ್ಲಿ ಮ್ಯಾಕ್ರನ್- ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ!
ಬಸ್ ಖಾಲಿಯಾಗಿರುವುದರ ಬಗ್ಗೆ ಆಕೆ ಕಂಡಕ್ಟರ್‌ನನ್ನು ಪ್ರಶ್ನಿಸಿದಾಗ, ಮುಂದಿನ ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಯಾಣಿಕರು ಹತ್ತುತ್ತಾರೆ ಎಂದು ಹೇಳಿದ್ದ. ಆದರೆ, ಚಾಲಕ ಬಸ್ಸನ್ನು ಯಾರೂ ಇಲ್ಲದ ಸ್ಥಳದಲ್ಲಿ ನಿಲ್ಲಿಸಿದ್ದ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಚಾಲಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ ಕಂಡಕ್ಟರ್ ಎಲ್ಲಾ ಕಿಟಕಿಗಳನ್ನು ಮುಚ್ಚಿದ್ದಾನೆ ಎನ್ನಲಾಗಿದೆ. ಕಂಡಕ್ಟರ್ ಘಟನಾ ಸ್ಥಳದಲ್ಲೇ ಇದ್ದು, ಇತರರ ಮೇಲೆ ನಿಗಾ ಇಟ್ಟಿದ್ದ.
ಹಲ್ಲೆಯ ನಂತರ, ಆರೋಪಿಯು ಮಹಿಳೆಯನ್ನು ಸೆಕ್ಟರ್ 17 ರಲ್ಲಿ ಇಳಿಸಿ, ಪೊಲೀಸರಿಗೆ ವರದಿ ಮಾಡಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ. ಬೆದರಿಕೆಗಳ ಹೊರತಾಗಿಯೂ, ಮಹಿಳೆ ತಕ್ಷಣ ಪೊಲೀಸರನ್ನು ಸಂಪರ್ಕಿಸಿದಳು ಮತ್ತು ಸೆಕ್ಟರ್ 17 ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 64 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಸೆಕ್ಟರ್ 16 ರ ಮಹಿಳಾ ಪೊಲೀಸ್ ಠಾಣೆಯು ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದೆ. ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದರೆ ನೆರೆಯ ಗುರುಗ್ರಾಮದಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರನ್ನು ಸಾಗಿಸಲು ಬಸ್ ಅನ್ನು ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಜೈಪುರದ ಪನಿಯಾಲ ಗ್ರಾಮದ ಬಸ್ ಚಾಲಕ ರೋಷನ್ ಲಾಲ್ (35) ಮತ್ತು ಉತ್ತರ ಪ್ರದೇಶದ ಬದೌನ್‌ನ ಹರ್ಧತ್ತಪುರ ಗ್ರಾಮದ ನಿವಾಸಿ ನಾನ್ಹೆ ಎಂಬ ಕಂಡಕ್ಟರ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ರೋಷನ್ ಮೂರು ತಿಂಗಳಿನಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವಿಚಾರಣೆಯ ನಂತರ, ಇಬ್ಬರೂ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬಸ್ಸನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ನೋಡಿ: ಕಟ್ಟಡ ಕಾಮಗಾರಿ ವೇಳೆ ಗೋಡೆ ಕುಸಿತ – ಓರ್ವ ಕಾರ್ಮಿಕನಿಗೆ ಗಂಭೀರ ಗಾಯ Janashakthi Media