ನವದೆಹಲಿ: ನಟಿ ಕಂಗನಾ ರಣಾವತ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ನಿರಂತರವಾಗಿ ವಿವಾದಾತ್ಮಕ ಪೋಸ್ಟ್ ಮಾಡುತ್ತಿರುವು ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಟ್ವಿಟ್ಟರ್ ಶಾಶ್ವತವಾಗಿ ಸ್ಥಗಿತಗೊಳಿಸಿದೆ.
ಟ್ವಿಟ್ಟರ್ ವಕ್ತಾರರು ಪ್ರತಿಕ್ರಿಯೆ ನೀಡಿ “ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಪೋಸ್ಟ್‌ಗಳು ಪ್ರಕಟಗೊಳ್ಳುತ್ತಿದ್ದವು. ಹಾಗಾಗಿ ನಾವು ಕಠಿಣ ಕ್ರಮಕೈಗೊಳ್ಳುತ್ತೇವೆಂದು ಸ್ಪಷ್ಟಪಡಿಸಿದ್ದೇವು ಆದರೂ ಸಹ ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಕಂಗನಾ ರಣಾವತ್ ಅವರ ಖಾತೆಯನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಟ್ವಿಟ್ಟರ್ ಸೇವೆಯನ್ನು ಬಳಸುವ ಎಲ್ಲರಿಗೂ ನಾವು ನಿಯಮಗಳನ್ನು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿ ಮಾಡುತ್ತೇವೆ” ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಮುಗಿದ ಮೇಲೆ ನಡೆಯುತ್ತಿದ್ದ ಹಿಂಸಾಸ್ಮಕ ಗಲಭೆಗಳ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟಿ ಕಂಗನಾ ಭಾವನಾತ್ಮಕ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಪಶ್ಚಿಮ ಬಂಗಾಳ ಹಿಂಸಾಚಾರದ ಬಗ್ಗೆ ಮಾತನಾಡಿದ್ದರು. ಅಲ್ಲಿ ಜನರ ಹತ್ಯೆ ನಡೆಯುತ್ತಿದೆ, ಅತ್ಯಾಚಾರ ನಡೆಯುತ್ತಿದೆ, ಮನೆಗಳನ್ನು ಸುಡಲಾಗುತ್ತಿದೆ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಟ್ವೀಟ್ ಮಾಡಿದ್ದರು. ಇವು ಈ ವಿಡಿಯೋ ಟ್ವಿಟ್ಟರ್ ಖಾತೆ ಸ್ಥಗಿತಗೊಳ್ಳುವ ಮುಂಚಿತವಾಗಿ ಪ್ರಕಟಗೊಂಡಿದ್ದವು.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದ ವಿಧಾನಸಭೆ ಫಲಿತಾಂಶದ ನಂತರದಲ್ಲಿ ಕಂಗಾನ ರಣಾವತ್ ಒಂದಾದ ಮೇಲೆ ಒಂದರಂತೆ ಟ್ವೀಟ್ ಮಾಡುತ್ತಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಕಂಗನಾ ಅವರ ಈರೀತಿಯ ಪೋಸ್ಟ್‌ಗಳು ಸಾಕಷ್ಟು ಪ್ರಕಟಗೊಳ್ಳುತ್ತಿದ್ದವು. ಈ ಹಿಂದೆ ಕೂಡ ಆ ಪೋಸ್ಟ್‌ಗಳಿಗೆ ಕ್ರಮ ಕೈಗೊಳ್ಳಲಾಗಿತ್ತು.
ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆ ಸ್ಥಗಿತಗೊಳ್ಳುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಬಹಳಷ್ಟು ಜನ ಟ್ರೋಲ್ ಮಾಡಿದ್ದು. ಸಾಕಷ್ಟು ಜನರು ಈಗ ಸದ್ಯ ನೆಮ್ಮದಿಗೊಂಡಿದ್ದೇವೆ. ಅಸಹ್ಯವಾದ ಪೋಸ್ಟ್‌ಗಳು ನೋಡಲು ಈ ಹಿಂದೆ ಬೇಸರವಾಗುತ್ತಿತ್ತು.