ಸುರಂಗ ಕುಸಿತ: ಅಂತಿಮ ಹಂತ ತಲುಪಿದ ರಕ್ಷಣಾ ಕಾರ್ಯಾಚರಣೆ

ಉತ್ತರಕಾಶಿ; ಉತ್ತರಖಾಂಡ ಸುರಂಗ ಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದ್ದು ಸಿಕ್ಕಿಬಿದ್ದಿರುವ 41 ಕಾರ್ಮಿಕರನ್ನು ಹೊರ ಕರೆತರಲು ಮಾತ್ರ ಬಾಕಿ ಇದೆ.

ಉತ್ತರಕಾಶಿಯಲ್ಲಿ ಸುರಂಗ ಕುಸಿತದಿಂದಾಗಿ 41 ಕಾರ್ಮಿಕರನ್ನು ಅವಶೇಷಗಳಡಿ ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ  ಪ್ರತಿಕೂಲ ಹವಾಮಾನ ಪರಿಸ್ಥಿತಿ, ಯಂತ್ರಗಳಲ್ಲಿನ ಸಮಸ್ಯೆ ಕಾರಣದಿಂದಾಗಿ ರಕ್ಷಣಾ ಕಾರ್ಯಕ್ಕೆ ಒಂದಲ್ಲ ಒಂದು ಸವಾಲು ಎದುರಾಗುತ್ತಲೇ ಇತ್ತು. ಈಗ ಸುರಂಗ ಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದ್ದು ಸಿಕ್ಕಿಬಿದ್ದಿರುವ 41 ಕಾರ್ಮಿಕರನ್ನು ಹೊರ ಕರೆತರಲು ಮಾತ್ರ ಬಾಕಿ ಇದೆ.

ಕಾರ್ಮಿಕರ ಹೊರ ಬರಲು ಹಾದಿಯನ್ನು ಸುಗಮಗೊಳಿಸಿದ್ದು, ಕಾರ್ಮಿಕರನ್ನು ಹೊರ ತೆಗೆಯುತ್ತಿದ್ದಂತೆ ಚಿಕಿತ್ಸೆಗೆ ದಾಖಲಿಸಲು ಆಂಬ್ಯುಲೆನ್ಸ್‌ಗಳನ್ನು ಸಜ್ಜಾಗಿ ಇರಿಸಲಾಗಿದೆ.

ಇದನ್ನೂ ಓದಿ: ಅಮಿತ್ ಶಾ ವಿರುದ್ಧ “ಆಕ್ಷೇಪಾರ್ಹ” ಹೇಳಿಕೆ: ರಾಹುಲ್‌ ಗಾಂಧಿಗೆ ಸಮನ್ಸ್‌ ಜಾರಿಗೊಳಿಸಿದ ಸುಲ್ತಾನ್ ಪುರ್‌ ನ್ಯಾಯಾಲಯ

 ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಕಾರ್ಮಿಕರು ಬರೋಬ್ಬರಿ 17 ದಿನಗಳಿಂದ ಸುರಂಗದೊಳಗೆ ಸಿಲುಕಿದ್ದಾರೆ.

ಅಗರ್‌ ಯಂತ್ರದಲ್ಲಿ ದೋಷ ಕಂಡ ಬಳಿಕ ನಿನ್ನೆಯಿಂದ ಹಸ್ತಚಾಲಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.

ವಿಡಿಯೋ ನೋಡಿ: ನೇಜಾರು ಹತ್ಯೆ ಪ್ರಕರಣ :ಕೊಲೆಗಾರನ ಹಿನ್ನೆಲೆ ತನಿಖೆಯಾಗಲಿ, ಕೋಮುವಾದದ ವಾಸನೆಯೂ ಬಡಿಯುತ್ತಿದೆ Nejaru murder case

Donate Janashakthi Media

Leave a Reply

Your email address will not be published. Required fields are marked *