- ತುಮಕೂರಲ್ಲಿ ನಿರಂತ ಮಳೆಯಾಗುತ್ತಿದೆ.
- ಕೋಳಿ ಶೆಡ್ ಗೆ ನುಗ್ಗಿದ ಮಳೆ ನೀರು
- ಒಂದೇ ರಾತ್ರಿಯಲ್ಲಿ 45 ಸಾವಿರ ಕೋಳಿಗಳ ಸಾವು
- 80 ಲಕ್ಷ ಮೌಲ್ಯದ ಕೋಳಿಗಳು ಸಾವು
ತುಮಕೂರು : ತುಮಕೂರಲ್ಲಿ ನಿರಂತರ ಮಳೆ ಬಿದ್ದ ಹಿನ್ನೆಲೆ ಒಂದೇ ರಾತ್ರಿ 45 ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ, ಹೆಬ್ಬೂರು ಹೋಬಳಿಯ ಯಾಲದಹಳ್ಳಿಯಲ್ಲಿ ನಡೆದಿದೆ.
ಒಂದೇ ರಾತ್ರಿಯಲ್ಲಿ ಸುರಿದ ಭಾರೀ ಮಳೆಯ ಕಾರಣ ಮಳೆ ನೀರು ಕೋಳಿ ಶೆಡ್ ಗಳಿಗೆ ನುಗ್ಗಿದೆ. ಪರಿಣಾಮ 45 ಸಾವಿರ ಕೋಳಿಗಳು ಸಾವನ್ನಪ್ಪಿವೆ. ಕೋಳಿ ಶೆಡ್ ಗಳಿಗೆ ನೀರು ನುಗ್ಗಿದ ಪರಿಣಾಮ ಎಂಟು ಶೆಡ್ ಗಳಲ್ಲಿದ್ದ ಕೋಳಿಗಳು ಮೃತಪಟ್ಟಿವೆ. ಶೆಡ್ ಗೆ ನುಗ್ಗಿದ ಮಳೆ ನೀರು ಕೋಳಿಗಳ ಮಾಲಿಕ ನಾರಾಯಣಪ್ಪ ಅವರ ಬದುಕನ್ನೇ ಕೊಚ್ಚಿ ಕೊಂಡು ಹೋಗಿದೆ. ಸಾಲ ಮಾಡಿ ಕೋಳಿ ಶೆಡ್ ನಿರ್ಮಾಣ ಮಾಡಿದ್ದ ನಾರಾಯಣಪ್ಪ ಇದೀಗ ಅಕ್ಷರಶಃ ಬೀದಿಗೆ ಬಂದಂತಾಗಿದೆ. ಮಳೆ ಆವಾಂತರದಿಂದ ನಾರಾಯಣಪ್ಪ ಅವರಿಗೆ ಸುಮಾರು 80 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದೇ ರೀತಿ ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಅನಾಹುತ ಸೃಷ್ಟಿಯಾಗಿದೆ. ರಾಜ್ಯ ಸರಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.