ರಾಜಸ್ಥಾನ | ಶೌಚಾಲಯ ಕೊಳಕು ದೂರು: ಪ್ರಯಾಣಿಕನನ್ನು ರೈಲಿನಿಂದ ಇಳಿಸಿದ ಟಿಟಿಇ, ತನಿಖೆಗೆ ಆದೇಶ

ರಾಜಸ್ಥಾನ : ಕೊಳಕು ಶೌಚಾಲಯ ವ್ಯವಸ್ಥೆಯನ್ನು ಪ್ರಶ್ನಿಸಿದ ಪ್ರಯಾಣಿಕನನ್ನು ಎರ್ನಾಕುಲಂ ನಿಜಾಮುದ್ದೀನ್ ದುರೊಂತೋ ಎಕ್ಸ್‌ಪ್ರೆಸ್‌ನಲ್ಲಿನಲ್ಲಿ ಪ್ರಯಾಣ ಟಿಕೆಟ್​ ಪರೀಕ್ಷಕ (ಟಿಟಿಇ) ರೈಲಿನಿಂದಲೇ ಇಳಿಸಿ, ಆತನ ಮೇಲೆ ಹಲ್ಲೆಗೆ ಯತ್ನ ನಡೆಸಿದ ಆರೋಪ ಕೇಳಿಬಂದಿದೆ.

ಟಿಟಿಇಯಿಂದ ದೌರ್ಜನ್ಯಕ್ಕೆ ಒಳಗಾದ ಪ್ರಯಾಣಿಕನನ್ನು ಮಂಗೇಶ್ ತಿವಾರಿ ಎಂದು ಗುರುತಿಸಲಾಗಿದೆ. ಈ ಘಟನೆಯು 12283 ಸಂಖ್ಯೆಯ ಎರ್ನಾಕುಲಂ ನಿಜಾಮುದ್ದೀನ್ ದುರೊಂತೋ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಇಂದು ನಡೆದಿದೆ. ಟಿಟಿಇ ದೌರ್ಜನ್ಯವನ್ನು ಆತ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ರೈಲ್ವೆ ಅಧಿಕಾರಿಗಳಿಗೆ ಟ್ಯಾಗ್​ ಮಾಡಿದ್ದಾನೆ.

ಇದನ್ನೂ ಓದಿ : ಕಾರ್ಮಿಕ ಸಂಹಿತೆ ಜಾರಿಗೆ ವಿರೋಧ: ರಾಜ್ಯ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆಗೆ ಪತ್ರ -ಎಳಮರಂ ಕರೀಂ

ದೂರುದಾರ ಪ್ರಯಾಣಿಕ ದುರೊಂತೋ ಎಕ್ಸ್‌ಪ್ರೆಸ್‌ನ ಎರಡನೇ ಎಸಿ ಕೋಚ್ ಡಿಎಲ್ -1 ರಲ್ಲಿ ವಡೋದರಾದಿಂದ ನಿಜಾಮುದ್ದೀನ್‌ಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಶೌಚಾಲಯದ ಕೊಳಕಿನ ಬಗ್ಗೆ ಟಿಟಿಇಗೆ ದೂರು ನೀಡಿದ್ದರು. ಟಿಟಿಇ ಮುಖೇಶ್ ಕುಮಾರ್ ಅವರು ರೈಲ್ವೆ ಸಿಬ್ಬಂದಿಯನ್ನು ಕರೆದರೂ, ಸ್ವಚ್ಛಗೊಳಿಸಲಾಗಿಲ್ಲ. ಪ್ರಯಾಣಿಕರು ಮತ್ತೆ ಟಿಟಿಇಗೆ ದೂರು ನೀಡಿದ್ದಾರೆ. ಇದರಿಂದ ಕೋಪಗೊಂಡ ಅಧಿಕಾರಿ ಪ್ರಯಾಣಿಕನನ್ನು ರತ್ಲಂ ನಿಲ್ದಾಣದಲ್ಲಿ ಇಳಿಸಿ, ಗಲಾಟೆ ಮಾಡಿದ್ದಾರೆ. ಕೋಟಾ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸೌರಭ್ ಜೈನ್ ಅವರು ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಲಭ್ಯವಿದೆ. ಈ ಬಗ್ಗೆ ತನಿಖೆ ನಡೆಸಿ ದೆಹಲಿ ರೈಲ್ವೆ ಪ್ರಧಾನ ಕಚೇರಿಗೆ ವರದಿ ನೀಡಲಾಗುವುದು. ಟಿಟಿಇ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರೈಲ್ವೆ ಮಂಡಳಿಯೂ ಈ ಬಗ್ಗೆ ತನಿಖೆ ನಡೆಸುತ್ತಿದೆ” ಎಂದು ತಿಳಿಸಿದರು.

 “ನಾನು ಪ್ರಯಾಣಿಸುತ್ತಿದ್ದ ಬೋಗಿಯ ಶೌಚಾಲಯವು ಕೊಳಕಿನಿಂದ ಕಟ್ಟಿಕೊಂಡಿತ್ತು. ಈ ಬಗ್ಗೆ ಟಿಟಿಇಗೆ ದೂರು ನೀಡಿ ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದೆ. ಅಧಿಕಾರಿ ಸ್ವಚ್ಛಗೊಳಿಸಲು ಆದೇಶಿಸುವ ಬದಲು, ನನ್ನ ಮೇಲೆ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದರು. ಆದರೆ, ಇತರ ರೈಲು ಸಿಬ್ಬಂದಿ ಮಧ್ಯಪ್ರವೇಶಿಸಿದರು” ಎಂದು ಹೇಳಿದರು.

ಬಳಿಕ ಟಿಟಿಇ ನನ್ನನ್ನು ರೈಲಿನಿಂದ ಇಳಿಯುವಂತೆ ಒತ್ತಾಯಿಸಿದರು. ಇದು ವಿಡಿಯೋದಲ್ಲಿ ದಾಖಲಾಗಿದೆ. ಈ ಬಗ್ಗೆ ರೈಲ್ವೆ ದೂರು ಸಂಖ್ಯೆಯಾದ 139 ಹಲವು ಬಾರಿ ಡಯಲ್ ಮಾಡಿದೆ. ಆದರೆ ಈ ಕುರಿತು ಅಧಿಕಾರಿಗಳು ಸ್ಪಂದಿಸಲಿಲ್ಲ” ಎಂದು ಪ್ರಯಾಣಿಕ ಆರೋಪಿಸಿದರು.

ಇದನ್ನೂ ನೋಡಿ : “ಮನರೇಗಾ ನಮ್ಮ ಹಕ್ಕು: V B GRAM G ವಿರುದ್ಧ ಜನಪಂಚಾಯತ್‌” | ಉದ್ಯೋಗ ಖಾತರಿ Janashakthi Media

Donate Janashakthi Media

Leave a Reply

Your email address will not be published. Required fields are marked *