ಬೆಳಗಾವಿ: ಧಾರವಾಡ ಜಿಲ್ಲೆಯ ಅಳ್ಳಾವರ-ಗೋವಾ ಹೆದ್ದಾರಿಯಲ್ಲಿ ಮಾರಾಟಕ್ಕೆಂದು ಮೇವಿನ ಹೊಟ್ಟು ಐಶರ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಟಿಟಿ ವಾಹನ ಡಿಕ್ಕಿಯಾಗಿ ಮೂವರು ರೈತರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿಯ ರೈತರಾದ ಹನುಮಂತಪ್ಪ ಮಲ್ಲಾಡ (45), ಮಹಾಂತೇಶ್ ಚೌವ್ಹಾಣ್ (40) ಮಹದೇವ ಹಾಲೊಳ್ಳಿ (40) ಮೃತರು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಚುನಾವಣಾ ನಿಯಮಗಳ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕೆಂದು ಸಿಪಿಐ (ಎಂ) ಪೊಲಿಟ್ ಬ್ಯೂರೋ ಒತ್ತಾಯ
ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋವಾದಲ್ಲಿ ಮೇವಿನ ಹೊಟ್ಟಿಗೆ ಹೆಚ್ಚಿನ ಬೇದಿಕೆ ಇದ್ದ ಹಿನ್ನೆಲೆಯಲ್ಲಿ ಹೊಟ್ಟು ಮಾರಾಟಕ್ಕಾಗಿ ಮೇವಿನ ಹೊಟ್ಟನ್ನು ತುಂಬಿಕೊಂಡು ಗೋವಾದತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಳ್ಳಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: 87th Kannada Sahitya Sammelana 2024 | 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮಂಡ್ಯ