ಟ್ರಂಪ್ 2.0 ಮತ್ತು ಮೋದಿ 3.0 – ವ್ಯಂಗ್ಯಚಿತ್ರಕಾರರು ಕಾಣುವಂತೆ

“ಬಹಶಃ 2014ರ ನಂತರ ಮೊದಲ ಬಾರಿಗೆ, (ಸಂಸತ್‍) ಅಧಿವೇಶನದ ಒಂದೆರಡು ದಿನಗಳ ಮುನ್ನ ವಿದೇಶಗಳಿಂದ ಕಿಡಿಯೂದುವ ಪ್ರಯತ್ನ ಈ ಬಾರಿ ನಡೆದಿಲ್ಲ” ಎಂದು ನಮ್ಮ ಪ್ರಧಾನಿಗಳು ಪ್ರಸಕ್ತ ಬಜೆಟ್‍ ಅಧಿವೇಶನದ ಆರಂಭದ ಮೊದಲು ಸಂಪ್ರದಾಯದಂತೆ ಸಂಸದ್‍ ಭವನದ ಮುಂದೆ ನಿಂತು ಮಾಡುವ ಟಿಪ್ಪಣಿಗಳಲ್ಲಿ ‘ಆತ್ಮವಿಶ್ವಾಸ’ದಿಂದ ಹೇಳಿದ್ದಾರೆ ಎಂದು ಜನವರಿ 31ರಂದು ವರದಿಯಾಯಿತು. ಈ ಸುದ್ದಿಗೆ ಸ್ಪಂದಿಸಿ ‘ವಾರ್ತಾಭಾರತಿ’ ದೈನಿಕದಲ್ಲಿ ಪ್ರಕಟವಾಗಿರುವ ಈ ಮೇಲಿನ ಪಿ.ಮಹಮ್ಮದ್‍ ಅವರ ವ್ಯಂಗ್ಯಚಿತ್ರ ಯು.ಎಸ್‍. ನಲ್ಲಿ ಟ್ರಂಪ್‍ 2.0 ಅವಧಿ ಭಾರತದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಟಿಪ್ಪಣಿ ಮಾಡುತ್ತದೆ.

ಮರುದಿನ ಮಂಡಿಸಲ್ಪಟ್ಟ ಪ್ರಸಕ್ತ ಬಜೆಟಿನಲ್ಲಿ ವಿಮಾವಲಯದಲ್ಲಿ ಡಾಲರುಗಳಿಗೆ ಇನ್ನು ಮುಂದೆ 100% ಅವಕಾಶ ಹಾಗೂ ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿವಲಯಕ್ಕೆ ಅವಕಾಶ ಒದಗಿಸಲು ಅಣು ಶಕ್ತಿ ಕಾಯ್ದೆ ಮತ್ತು ನಾಗರಿಕ ಪರಮಾಣು ಹಾನಿ ಬಾಧ್ಯತೆ ಕಾಯ್ದೆಗೆ ತಿದ್ದುಪಡಿಗಳನ್ನು ತರುವುದಾಗಿ ಹೇಳಿರುವುದು ಇಂತಹ ಹೊಸ ‘ಒತ್ತಡ’ಗಳು ಮತ್ತು ‘ಷರತ್ತಗಳು ಹೇಗೆ ಕೆಲಸ ಮಾಡಲಿವೆ ಎಂಬುದನ್ನು ಸೂಚಿಸುತ್ತವೆ ಎಂದು ಪರಿಣಿತರು ಅಭಿಪ್ರಾಯ ಪಟ್ಟಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು.

ಏಳು ತಿಂಗಳ ಹಿಂದೆ ತಮ್ಮ ಮೂರನೇ ಸರಕಾರವನ್ನು ರಚಿಸಿದ ನಮ್ಮ ಪ್ರಧಾನಿಗಳು ಮತ್ತು ಇತ್ತೀಚೆಗಷ್ಟೇ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ
ಯುಎಸ್‍ನ ಅಧ್ಯಕ್ಷರು ಪ್ರಸಕ್ತ ‘ಸತ್ಯೋತ್ತರ’ (ಪೋಸ್ಟ್‍ ಟ್ರುಥ್) ಕಾಲದ ಪ್ರಮುಖ ಜಾಗತಿಕ ಮುಖಂಡರು ಎಂದೆನಿಸಿಕೊಂಡಿರುವವರು. ಅಲ್ಲದೆ ತಾವು ಪರಮ ಮಿತ್ರರು ಎಂದು ಅವರೇ ಹೇಳಿಕೊಂಡಿದ್ದಾರಷ್ಟೇ ಅಲ್ಲ,ಒಂದೇ ಬಾಯಿಂದ ‘ಅಬ್‍ ಕೀ ಬಾರ್ ಮೋದಿ ಸರ್ಕಾರ್’ ಮತ್ತು ‘ಅಬ್‍ ಕೀ ಬಾರ್ ಟ್ರಂಪ್‍ ಸರ್ಕಾರ್’ ಎಂಬೆರಡೂ ಘೋಷಣೆಗಳು ಕೇಳಬಂದಿರುವುದು ಇತ್ತೀಚಿನ ಇತಿಹಾಸ. ಸತ್ಯೋತ್ತರ ಕಾಲ ಎಂದರೆ ಸತ್ಯ ದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವುದು ಎಂದೂ ಈಗ ಜನಜನಿತವಾಗಿರುವುದರಿಂದ ಸಹಜವಾಗಿ ನಮ್ಮ ದೇಶದ ವ್ಯಂಗ್ಯಚಿತ್ರಕಾರರಿಗೆ ಇವರಿಬ್ಬರೂ ಬಹಳ ‘ಪ್ರಿಯ’ ವಿಷಯಗಳು. ಟ್ರಂಪ್‍ 2.0 ಅವಧಿ ಪ್ರಾರಂಭವಾಗುತ್ತಿದ್ದಂತೆಯೇ ಮೊದಲ ಹತ್ತು ದಿನಗಳಲ್ಲಿ ಪ್ರಕಟವಾಗಿರುವ ವ್ಯಂಗ್ಯಚಿತ್ರಗಳೇ ಇದಕ್ಕೆ ಸಾಕ್ಷಿ. ಅಂತಹ ವ್ಯಂಗ್ಯಚಿತ್ರಗಳ ಒಂದು ನೋಟ ಇಲ್ಲಿದೆ:

ಇದನ್ನೂ ಓದಿ: ರಾಜ್ಯದಾದ್ಯಂತ 1,652 ಕಿಮೀ ಹೊಸ ರೈಲು ಹಳಿ ನಿರ್ಮಾಣ: ಅಶ್ವಿನಿ ವೈಷ್ಣವ್

‘ತಾರೀಫ್‍ ಪೆ ತಾರೀಫ್’ ಗೆ ಎದುರಾಗಿ ‘ಟ್ಯಾರೀಫ್-ಟ್ಯಾರೀಫ್’

ಜನವರಿ 27ರಂದು ನಮ್ಮ ಪ್ರಧಾನಿಗಳು ಯುಎಸ್ ಅಧ್ಯಕ್ಷ ಟ್ರಂಪ್‌ರೊಡನೆ ದೂರವಾಣಿ ಸಂವಾದ ನಡೆಸಿದರು. ಆ ಸಂವಾದದಲ್ಲಿ ತಾನು ಟ್ರಂಪ್‌ರನ್ನು ಅವರ ‘ಚಾರಿತ್ರಿಕ ಎರಡನೇ ಅವಧಿ’ ಕುರಿತು ಅಭಿನಂದಿಸಿದೆ ಮತ್ತು ಒಂದು ಪರಸ್ಪರ ಪ್ರಯೋಜನಕಾರಿ ಮತ್ತು ವಿಶ್ವಾಸದ ಸಂಬಂಧಗಳಿಗೆ ನಾವು ಕಟಿಬದ್ಧರಾಗಿದ್ದೇವೆ ಎಂದೆ ಎಂದು ಪ್ರಧಾನಿಗಳು ಹೇಳಿದರಂತೆ. ಟ್ರಂಪ್ “ಜಾಗತಿಕ ಶಾಂತಿ’ ಮತ್ತು “ಭದ್ರತೆ”ಗೆ ಕೆಲಸ ಮಾಡುವುದಾಗಿ ಒಪ್ಪಿಕೊಂಡರು ಎಂದೂ ಪ್ರಧಾನಿಗಳು ಹೇಳಿದ್ದಾರಂತೆ. ನಮ್ಮ ಸಂಬಂಧಗಳನ್ನು “ಆಳಗೊಳಿಸಲು” ಫೆಬ್ರುವರಿಯಲ್ಲಿ ನಮ್ಮ ಪ್ರಧಾನಿಗಳು ವಾಶಿಂಗ್ಟನ್‌ಗೆ ಭೇಟಿ ನೀಡಲಿದ್ದಾರೆ ಎಂದೂ ಪ್ರಕಟಿಸಲಾಗಿದೆ.

ಇದು ಯಾವ ರೀತಿಯ “ಆಳ” ಎಂಬುದು ಕೂಡ ಬೇಗನೇ ಸ್ಪಷ್ಟವಾಯಿತು. ಏಕೆಂದರೆ ಈ ಸಂವಾದ ನಡೆದ ಬೆನ್ನಲ್ಲೇ ಅಧ್ಯಕ್ಷ ಟ್ರಂಪ್ ಅವರು ಇದಕ್ಕೆ ಮತ್ತೊಂದು ಆಯಾಮವನ್ನೂ ಸೇರಿಸಿದರು ಎಂದೂ ಅವೇ ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ರಮುಖ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳಲ್ಲಿ “ಅಮೆರಿಕಾ ಮೊದಲು’ ಧೋರಣೆಯನ್ನು ಅನುಸರಿಸಬೇಕು ಎಂದು ಅವರು ಕರೆ ನೀಡುತ್ತ ಆ ದೇಶಗಳ ಮೇಲೆ ‘ಟ್ಯಾರೀಫ್’(ಆಮದುಸುಂಕ)ಗಳನ್ನು ಹಾಕುತ್ತೇವೆ ಎಂದೂ ಹೇಳಿದರು. ಈ ಸಂದರ್ಭದಲ್ಲಿ ಅವರು ಉಲ್ಲೇಖಿಸಿದ ದೇಶಗಳಲ್ಲಿ ಚೀನಾ ಮಾತ್ರವಲ್ಲ, ಬ್ರೆಝಿಲ್ ಮತ್ತು ಭಾರತವೂ ಇದೆ ಎಂಬುದು ಗಮನಾರ್ಹ.

‘ಅಕ್ರಮ’ ವಲಸಿಗರ ಘರ್‍ ವಾಪಸೀ!

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಟ್ರಂಪ್ ಸಹಿ ಹಾಕಿದ ಒಂದು ಪ್ರಮುಖ ಆದೇಶವೆಂದರೆ ದಸ್ತಾವೇಜುಗಳಿಲ್ಲದ ‘ಅಕ್ರಮ ವಲಸಿಗ ಕ್ರಿಮಿನಲ್‍’ಗಳನ್ನು ಬಂಧಿಸಿ ಅವರವರ ದೇಶಗಳಿಗೆ ವಾಪಾಸ್ ಕಳಿಸಬೇಕು ಎಂಬುದು. ಇಂತಹ 1.4 ಕೋಟಿ ಮಂದಿ ಇದ್ದು, ಇದರಲ್ಲಿ ಭಾರತದಿಂದ ಹೋದವರ ಸಂಖ್ಯೆ 7.25ಲಕ್ಷ, ಅದರಲ್ಲಿ ಈಗಾಗಲೇ 18,000 ಭಾರತೀಯರು ದಸ್ತಗಿರಿಯಾಗಿದ್ದಾರೆ. ಇವರನ್ನು ತಕ್ಷಣವೇ ಭಾರತಕ್ಕೆ ಕಳಿಸಲಾಗುವುದಂತೆ

“ಡೊನಾಲ್ಡ್ ರವರಿಂದ “

ಮೀರ್ ಸೊಹೈಲ್, ಫೇಸ್‍ಬುಕ್‍

ಅವರನ್ನೆಲ್ಲ ಹಿಂದಕ್ಕೆ ಪಡೆಯುವುದಾಗಿ ಭಾರತ ಸರಕಾರ ಹೇಳಿದೆಯಂತೆ!

 

 

 

“ನಾವು ಟ್ರಂಪ್‍ರೊಡನೆ
ನಿಭಾಯಿಸಲು ಸಿದ್ಧರಿದ್ದೇವೆ”

ಮಂಜುಲ್, ಫೇಸ್‍ಬುಕ್, ಜನವರಿ 28

 

 

 

ಸತೀಶ ಆಚಾರ್ಯ (ಫೇಸ್‍ಬುಕ್, ಜನವರಿ 23) ಇದನ್ನು ವಲಸಿಗರ ಘರ್ ವಾಪಸೀ ಎನ್ನುತ್ತಾರೆ.

 

 

“ಟ್ರಂಪ್‍ ಭಾಯ್,
ನಾವು ಇದನ್ನು
ವಿಶ್ವಗುರು ಯೋಜನೆಯ
ಅಡಿಯಲ್ಲಿ ಘರ್‍ ವಾಪಸಿ
ಎಂದು ಕರೆಯುತ್ತೇವೆ”

 

 

ಅಮೆರಿಕಾದಲ್ಲಿ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿರುವವರಲ್ಲಿ ಅಕ್ರಮ ವಲಸಿಗರ ಪ್ರಮಾಣ ಬಹಳ ಕಡಿಮೆಎಂದು ಹೇಳಲಾಗುತ್ತಿದ್ದರೂ ಟ್ರಂಪ್‍
ಅವರನ್ನು ‘ಕ್ರಿಮಿನಲ್‍’ಗಳೆಂದೇ ಕರೆಯುತ್ತಾರೆ…..

 

“ಯುಎಸ್‍ ನಿಂದ ಅಕ್ರಮ
ಎನ್‍ಆರ್‌ಐ ವಲಸಿಗರು
ತಾಯ್ನಾಡಿಗೆ ಮರಳಿರುವುದನ್ನು
ಬಿಂಬಿಸುವ ಗಣತಂತ್ರ ದಿನದ
ಸ್ತಬ್ಧಚಿತ್ರ”

ಪೊನ್ನಪ್ಪ.ಎಕ್ಸ್, ಜನವರಿ 26

 

ಏನು ವ್ಯತ್ಯಾಸ?

ಅಲ್ಲಿ ಅಕ್ರಮ ಭಾರತೀಯರು ಮತ್ತು ಇಲ್ಲಿ ಅಕ್ರಮ ಬಾಂಗ್ಲಾದೇಶೀಯರು- ಇವೆರಡರಲ್ಲಿ ಏನು ವ್ಯತ್ಯಾಸ ಎಂದು ಇದೇ ವ್ಯಂಗ್ಯಚಿತ್ರಕಾರರು
ಇನ್ನೊಂದು ಕಾರ್ಟೂನಿನಲ್ಲಿ ಹೀಗೆ ಟಿಪ್ಪಣಿ ಮಾಡಿದ್ದಾರೆ:

 

“ಭಾರತೀಯರು
ಡಾಲರುಗಳಲ್ಲಿ
ಗಳಿಸುತ್ತಾರಾದರೆ,
ಬಾಂಗ್ಲಾದೇಶೀಯರು
ರೂಪಾಯಿಗಳಲ್ಲಿ…..”

ಪೊನ್ನಪ್ಪ.ಎಕ್ಸ್, ಜನವರಿ

 

 

ಭಾರತದಲ್ಲಿ ‘ಅಚ್ಛೇ ದಿನ್‍’ ಗಳು ಆರಂಭವಾಗುತ್ತಿದ್ದಂತೆ ಪೌರತ್ವದ ಪ್ರಶ್ನೆಗಳನ್ನು ಎತ್ತುತ್ತಿದ್ದಾಗ ಒಬ್ಬ ಉನ್ನತ ನಾಯಕರು ಬಾಂಗ್ಲಾದೇಶದಿಂದ ಬಂದವರನ್ನು ‘ಗೆದ್ದಲುಗಳು’ ಎಂದಿದ್ದರು ಎಂದು ವ್ಯಂಗ್ಯಚಿತ್ರಕಾರ ಸಜಿತ್‍ ಕುಮಾರ್ ಡೆಕ್ಕನ್ ಹೆರಾಲ್ಡ್ ನಲ್ಲಿ ನೆನಪಿಸಿಕೊಂಡಿದ್ದಾರೆ.

ಆದರೂ ಇಂತಹ ವಿಷಯದಲ್ಲಿ ಇಷ್ಟೊಂದು ತರಾತುರಿಯಿಂದ ಮುಂದುವರೆಯುವ ಅಗತ್ಯವಿದೆಯೇ ಎಂದುಕೆಲವು ಭಾರತದಲ್ಲಿನ ‘ಭಕ್ತ’ರಿಗೆ ಅನಿಸುತ್ತಿದೆಯೇ?

 

“ಕ್ರಿಯೆಗಳ ಬದಲು
ಅಬ್ಬರದ ಮಾತುಗಳಿಂದಲೇ
ಆಳಬಹುದಲ್ಲವೇ ಎಂದು
ನಿಮ್ಮ ಪ್ರಿಯ ಗೆಳೆಯ ಟ್ರಂಪ್‍ರಿಗೆ
ನೀವು ಮನವರಿಕೆ ಮಾಡಿಸಿದ್ದರೆ
ಅದು ದೊಡ್ಡ ಸಂಗತಿಯಾಗುತ್ತಿತ್ತು!”

ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್,

ಜನವರಿ 23

 

 

ಏನೇ ಆಗಲಿ, ಭಾರತದಲ್ಲಿ ಇರುವವರಿಗಂತೂ ಅವರು ಸ್ಫೂರ್ತಿಯ ಸೆಲೆ!

 

“ನಮ್ಮ ಮಂತ್ರಿಗಳು
ಟ್ರಂಪ್‍ ಹೇಗೆ ಯುಎಸ್‍
ಸಂವಿಧಾನವನ್ನು
ಅಸ್ತವ್ಯಸ್ತಗೊಳಿಸುತ್ತಾರೆ ಎಂದು
ನಿಕಟವಾಗಿ ನಾವು ನೋಡುತ್ತಿರಬೇಕು
ಎಂದು ಬಯಸುತ್ತಾರೆ- ಸ್ಪೂರ್ತಿಗಾಗಿ!”

ಸಜಿತ್‍ ಕುಮಾರ್,ಡೆಕ್ಕನ್‍ ಹೆರಾಲ್ಡ್, ಜನವರಿ 24

ಅಲ್ಲಿಯ ‘ಮಗ’ ಮತ್ತು ಇಲ್ಲಿಯ ‘ಪರಿವಾರ’

ಟ್ರಂಪ್‍ ರವರ ‘ ಮೇಕ್ ಅಮೆರಿಕ ಗ್ರೇಟ್‍ ಅಗೇನ್’(ಮಗ)ದ ವಿವಿಧ ಸಾಮಾಜಿಕ ಮಾಧ್ಯಮಗಳು ಟ್ರಂಪ್‍ರವರೊಂದಿಗೆ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಾನ್ಸ್ ರವರ ಪತ್ನಿ ಭಾರತೀಯ ಮೂಲದ ಉಷಾ ವಾನ್ಸ್ ರವರ ವಿರುದ್ಧ ಅವರ (ಅಲ್ಲಿ ಅಲ್ಪಸಂಖ್ಯಾತ) ಧರ್ಮವನ್ನು ಉಲ್ಲೇಖಿಸಿ ದ್ವೇಷ ಪ್ರಚಾರ ಮಾಡುತ್ತಿದ್ದಾರೆ ಎಂಬ ಸುದ್ದಿ ‘ಅಬ್‍ಕೀ ಬಾರ್‍ ಟ್ರಂಪ್‍ ಸರಕಾರ್’ ಎಂದು ಓಡಾಡಿದ ‘ಪರಿವಾರ’ದ ಹಲವರಲ್ಲಿ ಕಸಿವಿಸಿ ಉಂಟು ಮಾಡಿದೆಯಂತೆ!

 

“ಅವರು ಧರ್ಮವನ್ನು
ರಾಜಕೀಯದೊಂದಿಗೆ
ಬೆರೆಸಬಾರದು”

“ ನಾಚಿಕೆಗೇಡು!ಈ ದ್ವೇಷ
ಅಮೆರಿಕಾವನ್ನು
ನಾಶ ಮಾಡುತ್ತದೆ!”

ಸಂದೀಪ ಅಧ್ವರ್ಯು, ಟೈಂಸ್‍ ಆಫ್‍

ಇಂಡಿಯ, ಜನವರಿ 24

 

ಇದೇ ರೀತಿ ಪಿ.ಮಹಮ್ಮದ್‍ ರವರು ಈ ಕಾರ್ಟೂನಿನಲ್ಲಿ( ಫೇಸ್‍ಬುಕ್, ಜನರಿ 29) ಸೂಚಿಸಿರುವಂತೆ ‘ಮೂಲನಿವಾಸಿ’ಯ ತರ್ಕವನ್ನೂ ಮುಂದಿಡಬಹುದು.

ಆದರೆ, ‘ಪರಿವಾರ’ಕ್ಕೆ ಹೀಗೆಲ್ಲ ಹೇಳಲು ‘ಕಾಯಾ- ವಾಚಾ-ಮನಸಾ’ ಸಾಧ್ಯವೇ ಎಂಬುದೇ ಪ್ರಶ್ನೆ!

ಇದನ್ನೂ ನೋಡಿ: ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತ ಜಿ.ಸಿ. ಬಯ್ಯಾರೆಡ್ಡಿ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *