ಮುಂಬೈ: ಟ್ರಕ್ ಟೈರ್ ಸ್ಫೋಟದಿಂದ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್‌ನ ಟೈರ್ ಸಿಡಿದ ಪರಿಣಾಮ ಆಟೋ ರಿಕ್ಷಾ ಸಂಪೂರ್ಣವಾಗಿ ಛಿದ್ರಗೊಂಡಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ರಸ್ತೆ
ಆ ವಿಡಿಯೋದಲ್ಲಿ, ಆಟೋ ರಿಕ್ಷಾ ಚಾಲಕ ತನ್ನ ಕಿವಿಯನ್ನು ಹಿಡಿದುಕೊಂಡು ನಿಂತಿರುವ ದೃಶ್ಯವಿದೆ. ಆತನ ಸುತ್ತಲೂ ಹಲವಾರು ಜನರು ಜಮಾಯಿಸಿದ್ದಾರೆ. ಟ್ರಕ್‌ನ ಸಿಡಿದ ಟೈರ್ ಮತ್ತು ಹಾನಿಗೊಳಗಾದ ರಿಕ್ಷಾವನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಕ್ರಿಕೆಟ್ ಪಂದ್ಯದ ಮಧ್ಯೆ ಕೊಹ್ಲಿ ಮಾಡಿದ ಕೆಲಸವೊಂದರ ಫೋಟೋ ವೈರಲ್
“ಟ್ರಕ್ ಟೈರ್ ಸ್ಫೋಟದಿಂದ ರಿಕ್ಷಾ ಚೂರುಚೂರಾಗಿದೆ” ಎಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಹೇಳುತ್ತಿರುವುದು ಕೇಳಿಸುತ್ತದೆ. “ನನಗೆ ಏನೂ ಕೇಳಿಸುತ್ತಿಲ್ಲ” ಎಂದು ಆಟೋ ಚಾಲಕ ಹೇಳುತ್ತಿರುವುದು ಸಹ ದಾಖಲಾಗಿದೆ.
ಚಾಲಕನಿಗೆ ಶಾಶ್ವತವಾಗಿ ಶ್ರವಣ ದೋಷ ಉಂಟಾಗಿದೆಯೇ ಅಥವಾ ತಾತ್ಕಾಲಿಕವಾಗಿ ಈ ರೀತಿ ಆಗಿದೆ ಎಂಬುದು ಇನ್ನೂ ತಿಳಿದಿಲ್ಲ. ಈ ಘಟನೆ ಮುಂಬೈನ ಯಾವ ಪ್ರದೇಶದಲ್ಲಿ ಮತ್ತು ಯಾವಾಗ ಸಂಭವಿಸಿದೆ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ: ಬಿಟ್ಟಿ ಚಾಕರಿ ಬೇಡ ಸೇವಾ ಭದ್ರತಿ ನೀಡಿ | ಕರ್ನಾಟಕ ಸಂಜೀವಿನಿ ನೌಕರರ ಹೋರಾಟ Janashakthi Media