ಸಂಭಾಜಿನಗರ| ಕಬ್ಬು ಸಾಗಿಸುತ್ತಿದ್ದ ಟ್ರಕ್ ಪಲ್ಟಿ; 6 ಕಾರ್ಮಿಕರು ಸಾವು

ಸಂಭಾಜಿನಗರ:  ಸೋಮವಾರ ಮುಂಜಾನೆ ಕಬ್ಬು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಆರು ಕಾರ್ಮಿಕರು ಸಾವನ್ನಪ್ಪಿ, 11 ಮಂದಿ ಗಂಭೀರ ಗಾಯಗೊಂಡಿರುವ ಘಟನೆ  ಸಂಭವಿಸಿದೆ. ಸಂಭಾಜಿನಗರ

ನೆನ್ನೆ ಮುಂಜಾನೆ ಕನ್ನಡ-ಪಿಶೋರ್ ರಸ್ತೆಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದ್ದು, ಪಿಶೋರ್ ಘಾಟ್ ವಿಭಾಗದಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ವೇಗವಾಗಿ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ದುರ್ಘಟನೆ ವೇಲೆ ಹದಿನೇಳು ಕಾರ್ಮಿಕರು ಟ್ರಕ್ ನಲ್ಲಿದ್ದರು. ಟ್ರಕ್ ಪಲ್ಟಿಯಾದ ಪರಿಣಾಮ ಕಬ್ಬಿನ ಹೊರೆಯ ಅಡಿಯಲ್ಲಿ ಕಾರ್ಮಿಕರು ಸಿಕ್ಕಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅರ್ಹರಿಗೆ ಸರ್ಕಾರಿ ಸೌಲಭ್ಯ ದೊರಕಿಸಲು ಸಮಿತಿ ರಚನೆ: ಕೆ.ಎಚ್.ಮುನಿಯಪ್ಪ

ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕನ್ನಡ ನಗರ ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕಿಸಾನ್ ರಾಥೋಡ್ (30), ಮನೋಜ್ ಚವಾಣ್ (23), ಮಿಥುನ್ ಚವಾಣ್ (26), ವಿನೋದ್ ಚವಾಣ್ (28), ಕೃಷ್ಣ ರಾಥೋಡ್ (30) ಮತ್ತು ಜ್ಞಾನೇಶ್ವರ ಚವಾಣ್ (36) ಎಂದು ಗುರುತಿಸಲಾಗಿದೆ. ಎಲ್ಲರೂ ಸತ್ಕುಂಡ್ ಗ್ರಾಮ ಮತ್ತು ಕನ್ನಡದ ಹತ್ತಿರದ ಪ್ರದೇಶಗಳ ನಿವಾಸಿಗಳು ಎಂದು ಹೇಳಲಾಗಿದೆ.

ಅಪಘಾತದ ನಂತರ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಗಾಯಗೊಂಡ ಕಾರ್ಮಿಕರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ಮತ್ತು ಇತರ ವೈದ್ಯಕೀಯ ಸೌಲಭ್ಯಗಳಿಗೆ ದಾಖಲಿಸಲಾಗಿದೆ.

ಮಾಹಿತಿಯ ಪ್ರಕಾರ, ಕಬ್ಬು ತುಂಬಿದ ಟ್ರಕ್ ಕನ್ನಡದಿಂದ ಪಿಶೋರ್‌ಗೆ ಹೋಗುತ್ತಿತ್ತು. ಕಾರ್ಮಿಕರು ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಘಾಟ್ ಪ್ರದೇಶದಲ್ಲಿ ಮುಂಜಾವು 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿತು.

ಈ ಘಟನೆ ಮಧ್ಯರಾತ್ರಿಯ ನಂತರ ನಡೆದ ಕಾರಣ, ಸ್ಥಳದಲ್ಲಿ ತಕ್ಷಣ ಸಹಾಯ ಒದಗಿಸಲು ಸಾಧ್ಯವಾಗಲಿಲ್ಲ. ಆದರೆ, ಅಪಘಾತದ ಸದ್ದು ಕೇಳಿ ಬಂದ ಸ್ಥಳೀಯ ಜನರು ಕಾರ್ಮಿಕರನ್ನು ರಕ್ಷಿಸಲು ಪ್ರಯತ್ನಿಸಿದರು. ಕಬ್ಬಿನ ಕೆಳಗೆ ಸಿಲುಕಿದ್ದ ಎಲ್ಲಾ ಕಾರ್ಮಿಕರನ್ನು ಬಹಳ ಕಷ್ಟಪಟ್ಟು ಹೊರತರಲಾಯಿತು, ಆದರೆ 6 ಕಾರ್ಮಿಕರ ಜೀವಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಕಾರ್ಮಿಕರನ್ನು ಪೊಲೀಸರು ಗುರುತಿಸಿದ್ದಾರೆ. ಮೃತರಲ್ಲಿ ಕಿಸಾನ್ ಧನ್ನು ರಾಥೋಡ್, ಮನೋಜ್ ನಾಮ್‌ದೇವ್ ಚವಾಣ್, ವಿನೋದ್ ನಾಮ್‌ದೇವ್ ಚವಾಣ್, ಮಿಥುನ್ ಮಹಾರು ಚವಾಣ್, ಕೃಷ್ಣ ಮುಲ್‌ಚಂದ್ ರಾಥೋಡ್ ಮತ್ತು ಜ್ಞಾನೇಶ್ವರ್ ದೇವಿದಾಸ್ ಚವಾಣ್ ಸೇರಿದ್ದಾರೆ.

ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆಯೇ ಅಥವಾ ಅಪಘಾತದ ಹಿಂದೆ ಬೇರೆ ಏನಾದರೂ ಕಾರಣವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: CITU| ಶ್ರಮಿಕರ ಅಹೋರಾತ್ರಿ ಹೋರಾಟ 5ನೇ ದಿನಕ್ಕೆ | ಅಂಗವಾಡಿ ನೌಕರರ ಸಂಘಟನೆಯಿಂದ ಧರಣಿ

Donate Janashakthi Media

Leave a Reply

Your email address will not be published. Required fields are marked *