ಬೆಂಗಳೂರು: ತ್ರಿಪುರಾ ರಾಜ್ಯದ ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಕಛೇರಿ ಮತ್ತಿತರೆಡೆ ಧಾಳಿ ನಡೆಸಿ ಗುಂಡಾಗಿರಿ ನಡೆಸಿರುವ ಅಲ್ಲಿನ ಬಿಜೆಪಿ ಹಾಗೂ ಹಿಂದೂ ಮತಾಂಧರ ದುಷ್ಕೃತ್ಯವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.
ಸಿಪಿಐ(ಎಂ) ಪಕ್ಷದ ತ್ರಿಪುರಾ ರಾಜ್ಯ ಸಮಿತಿಯ ಎರಡು ಪ್ರಮುಖ ಕಛೇರಿಗಳಿಗೆ ಬೆಂಕಿ ಹಚ್ಚಲಾಗಿದ್ದು ಅಪಾರ ಪ್ರಮಾಣದ ಆಸ್ತಿಗೆ ಹಾನಿಯಾಗಿದೆ ಮತ್ತು ದಾಖಲಾತಿಗಳು ಸುಟ್ಟು ಹೋಗಿವೆ.
ಇದನ್ನು ಓದಿ: ತ್ರಿಪುರಾದಲ್ಲಿನ ಈ ದುಷ್ಟ ಹಿಂಸಾಚಾರ ನಿಲ್ಲಬೇಕು: ಸಿಪಿಐ(ಎಂ) ಪೊಲಿಟ್ ಬ್ಯುರೊ
ಮರಳಿ ಸಿಪಿಐ(ಎಂ) ತ್ರಿಪುರದಲ್ಲಿ ಜನಪ್ರಿಯತೆ ಪಡೆಯುವುದನ್ನು ಸಹಿಸದೆ ಹತಾಶತನದಿಂದ ಇಂತಹ ದುಷ್ಕೃತ್ಯದಲ್ಲಿ ಬಿಜೆಪಿ ತೊಡಗಿದೆ ಎಂದು ಕರ್ನಾಟಕ ರಾಜ್ಯ ಸಮಿತಿ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು ತಿಳಿಸಿದ್ದು, ಈ ಗುಂಡಾಗಿಯಲ್ಲಿ ತೊಡಗಿದ ದುಷ್ಕರ್ಮಿಗಳನ್ನು ಈ ಕೂಡಲೇ ಬಂಧಿಸಬೇಕು. ಅದೇ ರೀತಿ ಧಾಳಿಯನ್ನು ತಡೆಯುವಲ್ಲಿ ವಿಫಲವಾದ ಮತ್ತು ಕುಮ್ಮಕ್ಕು ನೀಡುವಂತೆ ಮೂಕ ಪ್ರೇಕ್ಷಕರಾಗಿದ್ದ ಪೋಲೀಸರನ್ನು ಉದ್ಯೋಗದಿಂದ ವಜಾ ಮಾಡಬೇಕೆಂದು ತ್ರಿಪುರಾ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಅಲ್ಲದೆ, ಇಂತಹ ಹತಾಶ ಧಾಳಿಗಳು ಸಿಪಿಐ(ಎಂ) ಅನ್ನು ಬೆದರಿಸಲಾರವೆಂದು ಎಚ್ಚರಿಕೆ ನೀಡಿದ್ದಾರೆ.