ಕೋಲ್ಕತ: ಕೋಲ್ಕತ್ತಾ ಮೂಲದ ತ್ರಿಪರ್ಣ ಚಕ್ರವರ್ತಿ ಎಂಬ ಬಾಲಕಿ ಸತತವಾಗಿ 100 ದಿನ, ಒಂಬತ್ತು ಗಂಟೆಗಳ ಕಾಲ ತಡೆರಹಿತವಾಗಿ ಮಲಗಿ ಭಾರತದ ಮೊದಲ ‘ಸ್ಲೀಪ್ ಚಾಂಪಿಯನ್’ ಎಂಬ ಹೆಸರು ಪಡೆದುಕೊಂಡಿದ್ದಾಳೆ. ಮಾತ್ರವಲ್ಲ ಬರೋಬ್ಬರಿ 5 ಲಕ್ಷ ರೂ ಬಿಟ್ಟಿದ್ದಾರೆ!
ತ್ರಿಪರ್ಣ ಚಕ್ರವರ್ತಿ(26) ವೇಕ್‌ಫಿಟ್‌ನ ಸ್ಲೀಪ್ ಚಾಂಪಿಯನ್‌ಶಿಪ್ ಸ್ಪರ್ಧೆಗೆ ನೋಂದಣಿ ಮಾಡಿಕೊಂಡಿದ್ದರು. ದೇಶಾದ್ಯಂತ ಒಟ್ಟು 5.5 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದು, ಆ ಪೈಕಿ 15 ಸ್ಪರ್ಧಿಗಳನ್ನು ಸಂಸ್ಥೆ ಆಯ್ದುಕೊಂಡಿತ್ತು. ನಾಲ್ವರು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದರು. ಅವರಲ್ಲಿ ಯಾರು 100 ದಿನಗಳ ಕಾಲ ಪ್ರತಿದಿನ 9 ಗಂಟೆ ಯಾವುದೇ ಅಡೆತಡೆ ಇಲ್ಲದೆ ನಿದ್ರೆ ಮಾಡುತ್ತಾರೆ ಎಂದು ಪರೀಕ್ಷೆ ಮಾಡಲಾಗಿದೆ.
ನಾಲ್ವರ ಪೈಕಿ ತ್ರಿಪರ್ಣಾ ತಮ್ಮ ನಿದ್ರೆಯಲ್ಲಿ ಶೇ.95 ದಕ್ಷತೆ ತೋರಿಸಿದ್ದಾರೆ. ಪ್ರತಿ ದಿನ 9 ಗಂಟೆಗಳ ಕಾಲ ಅತ್ಯುತ್ತಮ ನಿದ್ರೆ ಮಾಡಿದ ಹಿನ್ನೆಲೆ ಅವರನ್ನು ಭಾರತದ ‘ಸ್ಲೀಪ್ ಚಾಂಪಿಯನ್’ ಎಂದು ವೇಕ್‌ಫಿಟ್ ಸಂಸ್ಥೆ ಕರೆದಿದೆ. ಹಾಗೆಯೇ 5 ಲಕ್ಷ ರೂ. ಬಹುಮಾನವನ್ನೂ ಕೊಟ್ಟಿದೆ. ಅಮೆರಿಕ ಮೂಲದ ಸಂಸ್ಥೆಗೆ ಕೆಲಸ ಮಾಡುತ್ತಿರುವ ತ್ರಿಪರ್ಣಾ, ರಾತ್ರಿ ವೇಳೆ ಕೆಲಸ ಮಾಡಿ, ಹಗಲು ನಿದ್ರೆ ಮಾಡಿದ್ದಾರೆ. ರಾತ್ರಿಯ ಕೆಲಸದ ಜತೆ ಹಗಲಿನ ನಿದ್ರೆಗೂ ಅವರಿಗೆ ಹಣ ಸಿಕ್ಕಿದೆ.
ಇದನ್ನೂ ಓದಿ : ಇಂಪಾದ ಸಂಗೀತ ಸೂಸುವ ರಸ್ತೆಗಳು – ಈ ರಸ್ತೆಯ ಮೇಲೆ ಡ್ರೈವ್ ಮಾಡೋದೆ ಖುಷಿ ಅಂತಾರೆ ನೆಟ್ಟಿಗರು!
ಸ್ಪರ್ಧಿಗಳು ವೆಬ್ಸೈಟ್ ಮೂಲಕ ಈ ಸ್ಪರ್ಧೆಯ ಕುರಿತು ಮಾಹಿತಿ ತಿಳಿದುಕೊಂಡಿದ್ದರು. ಎಲ್ಲ ಸ್ಪರ್ಧಿಗಳಿಗೂ ಹಾಸಿಗೆ ಮತ್ತು ಸ್ಲೀಪ್ ಟ್ರ್ಯಾಕರ್ ಕೊಟ್ಟು ಮಲಗುವ ನಿಮ್ಮ ಕೌಶಲವನ್ನು ನೀವು ಪ್ರದರ್ಶಿಸಬೇಕು ಎಂದು ಹೇಳಲಾಗಿತ್ತು. ವಿಜೇತೆ ತ್ರಿಪರ್ಣ ಬಹುಮಾನದ ಹಣದಲ್ಲಿ ತನಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಬೇಕೆಂಬ ಆಲೋಚನೆ ಇದೆ ಎಂದು ಹೇಳಿಕೊಂಡಿದ್ದಾರೆ. ಅಮೆರಿಕ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈಕೆ ಸದ್ಯ ವರ್ಕ್ ಫ್ರಾಂ ಹೋಮ್ನಲ್ಲಿದ್ದಾಳೆ. ಈ ಕಾರಣದಿಂದಾಗಿ, ರಾತ್ರಿಯೂ ಎಚ್ಚರವಾಗಿರಬೇರಬೇಕಾದ ಅನಿವಾರ್ಯತೆ ಇತ್ತು. ಅಂತೂ ಈ ಸ್ಪರ್ಧೆಯ ಮೂಲಕ ಎಲ್ಲ ನಿದ್ದೆಯನ್ನು ವಾಪಾಸು ಪಡೆದುಕೊಂಡಿದ್ದಾಳೆ ಎನ್ನಬಹುದೆ?
ದಿ ಲ್ಯಾನ್ಸೆಟ್ ಚೈಲ್ಡ್ ಅಂಡ್ ಅಡೋಲೆಸೆಂಟ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಮಕ್ಕಳು ಒಂಬತ್ತು ಗಂಟೆಗಿಂತ ಕಡಿಮೆ ಅವಧಿ ನಿದ್ರಿಸಿದರೆ ಮೆದುಳಿನ ಕಾರ್ಯವಿಧಾನದಲ್ಲಿ ಕೆಲ ಬದಲಾವಣೆಗಳಾಗಿ ಸ್ಮರಣಶಕ್ತಿ, ಬೌದ್ಧಿಕ ಶಕ್ತಿ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಕ್ಕಳು ಪ್ರತೀ ರಾತ್ರಿ 9ರಿಂದ 12 ಗಂಟೆಗಳ ಕಡ್ಡಾಯವಾಗಿ ಮಲಗಬೇಕು. ಇನ್ನು ವಯಸ್ಕರ ನಿದ್ರಾಹೀನತೆಗೆ ಮಾನಸಿಕ ಸಮಸ್ಯೆಗಳೂ ಕಾರಣ. ಖಿನ್ನತೆ, ಆತಂಕ ಇರುವವರಲ್ಲಿ ನಿದ್ರೆಯಲ್ಲಿ ಏರುಪೇರು ಉಂಟಾಗುತ್ತಿರುತ್ತದೆ. ಆಗ ಸ್ಮರಣಶಕ್ತಿ, ನಿರ್ಧಾರ ತೆಗೆದುಕೊಳ್ಳುವುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಷಯವಾಗಿ ಅವರಿಗೆ ಗೊಂದಲ ಉಂಟಾಗುತ್ತಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹವ್ಯಾಸ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯ. ಹವ್ಯಾಸಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಆದರೆ ಯಾವ ಹವ್ಯಾಸವನ್ನು ರೂಢಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಬದುಕು ನಿಲ್ಲುತ್ತದೆ. ಇಲ್ಲೊಬ್ಬಳು ವಿಚಿತ್ರವಾದ ಹವ್ಯಾಸವನ್ನು ರೂಢಿಸಿಕೊಂಡು ಅಪರೂಪದ ದಾಖಲೆ ನಿರ್ಮಿಸಿದ ತ್ರಿಪರ್ಣಾಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.