ವರದಿ – ದೇವರಾಜ್ ದೊಡ್ಡಮನಿ
ಯಲಬುರ್ಗಾ : ನಿಗದಿಗಿಂತ ಹೆಚ್ಚು ಭಾರದ ಗ್ರಾನೈಟ್ ಬ್ಲಾಕ್‌ಗಳನ್ನು ಸಾಗಿಸುತ್ತಿರುವ ಪರಿಣಾಮ ತಾಲೂಕಿನ ನಾನಾ ರಸ್ತೆಗಳು ಹಾಳಾಗಿದ್ದು, ಕ್ರಮಕ್ಕೆ ಆರ್‌ಟಿಒ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಯಲಬುರ್ಗಾ ತಾಲೂಕಿನ ಸಂಗನಾಳ ರಾಷ್ಟ್ರೀಯ ದಾರಿ , ಹಾಗೂ ಲೋಕೋಪೋಗಿ ಇಲಾಖೆಯ ಡಾಂಬರ್ ರಸ್ತೆಗಳನ್ನು ಹೊಸದಾಗಿ ಮಾಡಿಲಾಗಿದೆ. ಅಧಿಕ ಬಾರದ ಕಲ್ಲುಗಳ ಸಾಗಣೆಯಿಂದ ಆ ರಸ್ತೆ ಹಾಳಾಗಿ ಹೋಗುತ್ತಿವೆ. ನಿಗದಿಗಿಂತ ಹೆಚ್ಚು ಭಾರದ ಗ್ರಾನೈಟ್‌ನ್ನು ಲಾರಿಗಳಲ್ಲಿ ತುಂಬಿ ಸಾಗಿಸಲಾಗುತ್ತಿದೆ. ಹಗಲು ವೇಳೆ ಗ್ರಾನೈಟ್ ಸಾಗಣೆ ಇರುವುದಿಲ್ಲ. ಆದರೂ ಕೂಡ ಅಧಿಕಾರಿಗಳಿಗೆ ರಾಜಕೀಯ ಪ್ರಭಾವ ಬಳಸಿ. ಗ್ರಾನೈಟ್ ಮಾಲಕರು ರಾತ್ರಿ.6 ರಿಂದ ಬೆಳಗ್ಗೆ 7 ಗಂಟೆಯವರೆಗೆ ಒಂದೊಂದಾಗಿ ಲಾರಿಗಳು ರಸ್ತೆಗೆ ಬರಲಾರಂಭಿಸುತ್ತವೆ. ರಾತ್ರಿಯಿಡೀ ಸಾಗಣೆ ನಿರಂತರ ನಡೆದಿರುತ್ತದೆ. ಈ ವೇಳೆಯಲ್ಲಿ ಲಾರಿಗಳನ್ನು ತಪಾಸಣೆ ಮಾಡಿಸಬೇಕಾದ ಆರ್‌ಟಿಒ. ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು. ನಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವ ಹಾಗೆ ಮೌನವಾಗಿದ್ದಾರೆ. ಪಕ್ಕದ ಕುಕನೂರು ಪ್ರದೇಶದಿಂದಲೂ ರಾತ್ರಿ ವೇಳೆ ನಿರಂತರವಾಗಿ ಗ್ರಾನೈಟ್ ಇಲ್ಲಿಗೆ ಸರಬರಾಜಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಕಂಟೇನರ್ಗೆ ಹಿಂಬದಿಯಿಂದ ಕಾರು ಡಿಕ್ಕಿ; ಸ್ಥಳದಲ್ಲೇ ಮೂವರು ಸಾವು
ಕುಕನೂರು ತಾಲೂಕಿನ ಮಸಾ ಹಂಚಿನಾಳ ಗ್ರಾಮದಲ್ಲಿ ನಿರ್ಮಾಣ ಆದ ಗ್ರಾನೈಟ್ ಪಾಲಿಶ್ ಘಟಕಗಳಿಗೆ ಬರುವ ಗ್ರಾನೈಟ್ ಬ್ಲಾಕ್ ಸಾಗಣೆಗೆ ಯಾವುದೇ ಪರವಾನಗಿ ಪಡೆದಿರುವುದಿಲ್ಲ ಎಂಬುದ ಯಲಬುರ್ಗಾ ತಾಲೂಕಿನ ಪ್ರಜ್ಞಾವಂತರ ಮಾತಾಗಿದೆ. ಭಾರದ ಗ್ರಾನೈಟ್‌ನ್ನು ನಿರಂತರ ಸಾಗಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ನಾನ ರಸ್ತೆಗಳು ಹಾಳಾಗಿವೆ. ಈ ರಸ್ತೆಗಳೆಲ್ಲ ಇತ್ತೀಚೆಗಷ್ಟೇ ಕೋಟ್ಯಂತರ ರೂ.ಗಳಲ್ಲಿ ನಿರ್ಯಮಾಣ ಮಾಡಲಾಗಿದೆ. ಯಲಬುರ್ಗಾ – ಬಂಡಿ -ಕುಷ್ಟಗಿ ರಸ್ತೆಯೂ ಹಾಳಾಗಿದೆ. ಪ್ರತಿ ವರ್ಷ ರಸ್ತೆ ದುರಸ್ತಿ ಮಾಡುವುದೂ ಪಿಡಬ್ಲ್ಯುಡಿ ಇಲಾಖೆಗೆ ಸವಾಲಾಗಿದೆ. ಆರ್‌ಟಿಒ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಿಂದ ಕೇಳಿ ಬಂದಿವೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾನೆಟ್ ಲಾರಿಗಳು ಅಧಿಕ ಭಾರಕ್ಕಿಂತ, ಹೆಚ್ಚಿನ ಬಾರದಲ್ಲಿ ಗ್ರಾನೆಟ್ ಗ್ರಾನೈಟ್ ಕಲ್ಲುಗಳನ್ನು ಸರಬರಾಜು ಮಾಡುತ್ತಿದ್ದಾರೆ. ಆದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಲಾರಿಗಳು ತಾಲೂಕಿನಲ್ಲಿ ರಾತ್ರಿ ಹಗಲು ಎನ್ನದೆ ನಿತ್ಯ ಓಡಾಡುತ್ತಿವೆ. ಇದಕ್ಕೆ ಕಡಿವಾಣ ಹಾಕೋದಕ್ಕೆ ಅಧಿಕಾರಿಗಳು ಮುಂದಾಗಬೇಕೆಂದು ಸ್ಥಳೀಯ ಮುಖಂಡ ಮಲ್ಲನಗೌಡ ಕೋಣನಗೌಡ್ರು ಹೇಳಿದ್ದಾರೆ.