ಕುಂದಾಪುರ: ಮಂಗಳೂರಿನಲ್ಲಿ ರಸ್ತೆ ಗುಂಡಿ ದುರಸ್ತಿಗೊಳಿಸಲು ಆಗ್ರಹಿಸಿ ಪ್ರತಿಭಟನೆ ಮಾಡಿದ ಸಿಪಿಎಂ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪೋಲಿಸ್ ಆಯುಕ್ತ ಅನುಪಮ್ ಅಗರವಾಲ್ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಇಂದು ಸಿಪಿಎಂ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಕುಂದಾಪುರ ಶಾಸ್ತ್ರೀ ವ್ರತ್ತದಲ್ಲಿ ನಡೆಯಿತು.
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರಿಗೆ ಆಗುತ್ತಿರುವ ಪ್ರಾಣ ಹಾನಿ ತಡೆಯಲು ಪ್ರತಿಭಟನೆ ಮಾಡಿ ಸರಕಾರದ ಗಮನ ಸೆಳೆಯುವ ಹೋರಾಟ ಮಾಡಿದರೆ ಅಕ್ರಮ ಕೂಟ ಸೇರಿದ್ದರು ಎಂದು ದೂರು ದಾಖಲಿಸಿರುವುದು ಸಂವಿಧಾನದ ಆರ್ಟಿಕಲ್ 19 ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕು ನಿರಾಕರಣೆ ಆಗಿದೆ ಪ್ರತಿಭಟನಕಾರರು ಯಾವುದೇ ಮಾರಕ ಆಯುಧ ಹಿಡಿದು ಪ್ರತಿಭಟನೆ ಮಾಡಲಿಲ್ಲ ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ ಎಂದು ಆರಕ್ಷಕ ಠಾಣೆಗೆ ಮುಂಚಿತವಾಗಿ ಲಿಖಿತ ಮನವಿ ನೀಡಿದ್ದರೂ ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಎಂದು ಹಿಂಬರಹ ನೀಡಿರುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ವರ್ತನೆಯಾಗಿದೆ ಎಂದು ಸಿಪಿಎಂ ಮುಖಂಡ ಸುರೇಶ್ ಕಲ್ಲಾಗರ ಆರೋಪಿದರು.
ಇದನ್ನೂ ಓದಿ : ಹೋರಾಟವನ್ನು ಜಿಲ್ಲೆಯ ಮೂಲೆಮೂಲೆಗೆ ವಿಸ್ತರಿಸುತ್ತೇವೆ – ಮುನೀರ್ ಕಾಟಿಪಳ್ಳ
ಸಿಪಿಎಂ ಮುಖಂಡ ಎಚ್ ನರಸಿಂಹ ಮಾತನಾಡಿ,ʼ ಕಾಂಗ್ರೆಸ್ ಸರಕಾರದ ಮಂತ್ರಿಗಳು ಜನಪರ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಆದರೆ ಜನಪರ ಹೋರಾಟ ಮಾಡುವವರನ್ನು ಜೈಲಿಗಟ್ಟುವ ನಿಮ್ಮ ಅಧಿಕಾರಿಯ ನಡೆ ಪ್ರಜಾಪ್ರಭುತ್ವ ಕ್ಕೆ ಮಾರಕವಾಗಿದೆ ಇದು ಖಂಡನೀಯ ಅಗರ್ ವಾಲ್ ಅವರನ್ನು ವರ್ಗಾವಣೆ ಮಾಡದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆʼ ಎಂದು ಹೇಳಿದರು.
ಸಿಪಿಎಂ ತಾಲೂಕು ಕಾರ್ಯದರ್ಶಿ ಚಂದ್ರಶೇಖರ ವಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕೆ.ಶಂಕರ್ ಮಹಾಬಲ ವಡೇರಹೋಬಳಿ,ಬಲ್ಕೀಸ್,ರಾಜ ಬಿಟಿಆರ್ ಅಣ್ಣಪ್ಪ ಅಬ್ಬಿಗುಡ್ಡಿ,ಲಕ್ಷ್ಮಣ ಡಿ ವಹಿಸಿದ್ದರು. ರಾಜು ದೇವಾಡಿಗ ವಂದಿಸಿದರು.
ಇದನ್ನೂ ನೋಡಿ : ಮಹಾರಾಷ್ಟ್ರ | ಸಿಎಂ’ ಸ್ಥಾನಕ್ಕಾಗಿ ಬಿಜೆಪಿ & ಶಿಂಧೆ ಬಣದ ನಡುವೆ ‘ಮಹಾ’ ಬಿಕ್ಕಟ್ಟು ! ಯಾರಾಗ್ತಾರೆ ಸಿಎಂ!?#mahayuti