ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ 10.24 ಕೋಟಿ ಖಾತೆಗಳಲ್ಲಿ 2023ರ ಫೆಬ್ರುವರಿವರೆಗೆ ಇದ್ದ, ವಾರಸುದಾರರಿಲ್ಲದ ₹35,012 ಕೋಟಿ ಠೇವಣಿಯನ್ನು ಆರ್‌ಬಿಐಗೆ ವರ್ಗಾಯಿಸಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯಸಚಿವ ಭಾಗವತ್ ಕರಾಡ್ ಅವರು ಲೋಕಸಭೆಗೆ ತಿಳಿಸಿದ್ದಾರೆ.
10 ವರ್ಷದಿಂದ ಈ ಖಾತೆಗಳಲ್ಲಿ ಯಾವುದೇ ವಹಿವಾಟು ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ. ವಾರಸುದಾರರು ಇಲ್ಲದ ಠೇವಣಿಗಳನ್ನು ಹೊಂದಿರುವ ಬ್ಯಾಂಕ್‌ಗಳ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮೊದಲ ಸ್ಥಾನದಲ್ಲಿದೆ.
ಇದನ್ನೂ ಓದಿ : ಆನ್‌ಲೈನ್ ದೈನಂದಿನ ವಹಿವಾಟು ರೂ.36 ಕೋಟಿಗೆ ಏರಿಕೆ: ಆರ್‌ಬಿಐ ಗವರ್ನರ್
ಎಸ್‌ಬಿಐನಲ್ಲಿ ₹8,086 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ₹5,340 ಕೋಟಿ, ಕೆನರಾ ಬ್ಯಾಂಕ್‌ನಲ್ಲಿ ₹4,558 ಕೋಟಿ ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ ₹3,904 ಕೋಟಿ ವಾರಸುದಾರರಿಲ್ಲದ ಠೇವಣಿ ಇತ್ತು.