ಒಬ್ಬ ಸರ್ಕಾರಿ ನೌಕರನ ವರ್ಗಾವಣೆಗೆ ಇಷ್ಟೊಂದು ಪ್ರಹಸನವೇ…ಇದರ ಹಿಂದಿರುವ ಹಿಕ್ಮತ್ ಏನು…?

– ಪಂಚಾಕ್ಷರಿ, ಶಿವಮೊಗ್ಗ

ಕರ್ತವ್ಯದ ಅವಧಿಯ ಮುಗಿದ ನಂತರ ತಮ್ಮ ಸಂಘಟನೆಯನ್ನು ಮಾಡಿಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿದೆ , ಆದರೆ ಷಡಕ್ಷರಿ ತನ್ನ ಕರ್ತವ್ಯ ಹಾಗೂ ಕಾನೂನಿಗಳನ್ನು ಗಾಳಿಗೆ ತೂರಿದ, ಷಡಕ್ಷರಿ ಸರ್ಕಾರಿ ನೌಕರಿಯ ಕರ್ತವ್ಯವನ್ನು ನಿರ್ವಹಿಸದೇ ದಿನದ 24 ಗಂಟೆಗಳ ಕಾಲ ರಾಜಕೀಯ, ವರ್ಗಾವಣೆ ದಂಧೆ, ಸಂಘಟನೆ ,ಎಂದು ಹೇಳಿ ತಿರುಗಾಡುತ್ತಾ ಸರ್ಕಾರಕ್ಕೆ ವಂಚನೆ ಮಾಡಿದ್ದು ಮೇಲುನೋಟಕ್ಕೆ ಸಾಬೀತಾಗುತ್ತದೆ.

ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ 25 ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ನೌಕರಿ ಮಾಡುತ್ತಿದ್ದಾರೆ ವಿಶೇಷವಾಗಿ ಈ ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಒಂದೇ ಜಿಲ್ಲೆಯಲ್ಲಿ ಇಷ್ಟು ದಿನ ನೌಕರಿ ಮಾಡಿದ ಉದಾಹರಣೆ ಬೇರೆ ಜಿಲ್ಲೆ ಬೇರೆ ನೌಕರರಿಂದ ಸಾಧ್ಯವಾಗಿಲ್ಲ.

ಪ್ರಸ್ತುತ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಶಿವಮೊಗ್ಗ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.. ಬಿಜೆಪಿ ಪಕ್ಷದ ಏಜೆಂಟನಂತೆ ಕಾರ್ಯನಿರ್ವಹಿಸುತ್ತಿರುವ ಷಡಕ್ಷರಿ ಯಡಿಯೂರಪ್ಪ ರಾಘವೇಂದ್ರ ಇವರ ಆಪ್ತ ಸಹಾಯಕನಾಗಿ ಕೆಲಸ ಮಾಡಿ ಪ್ರಸ್ತುತ ರಾಜಕೀಯವಾಗಿ ಅವರನ್ನು ದುರುಪಯೋಗಪಡಿಸಿಕೊಂಡು ಇವರ ಮೂಲಕ ತನ್ನ ವರ್ಗಾವಣೆಯನ್ನ ರದ್ದುಗೊಳಿಸುವಂತೆ ಹೇಳಿಕೆಗಳನ್ನು ಕೊಡಿಸುತ್ತಾ ಷಡಕ್ಷರಿಯ ವರ್ಗಾವಣೆಯನ್ನು,, ದ್ವೇಷದ ರಾಜಕಾರಣ ಎಂದು ಒಬ್ಬ ಸಂಸದ ಹೇಳುತ್ತಾರೆ ಎಂದರೆ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆ ಮಾಡಿದರೆ ಇದು ಹೇಗೆ ದ್ವೇಷದ ರಾಜಕಾರಣವಾಗುತ್ತದೆ?ಇದಕ್ಕೆ ಸಂಸದ ರಾಘವೇಂದ್ರ ಅವರು ಉತ್ತರಿಸಬೇಕು.

ಹಾಗಾದರೆ ಶಿವಮೊಗ್ಗ ಜಿಲ್ಲೆಯಲ್ಲಿ ವರ್ಗಾವಣೆಯಾದ ಬೇರೆ ನೌಕರರ ಪರವಾಗಿ ಸಂಸದ ರಾಘವೇಂದ್ರ ಅವರು ಈ ರೀತಿ ಮಾತನಾಡುತ್ತಾರೆಯೇ..?

ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾವಣೆಯಾದ ಷಡಕ್ಷರಿಯವರು ಹೇಳುತ್ತಾರೆ ಇತಿಹಾಸದಲ್ಲಿ ಯಾವ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಿಗೂ ಈ ರೀತಿಯಾಗಿ ವರ್ಗಾವಣೆ ಮಾಡಿಲ್ಲ ಎಂದು, ಅಂದರೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹುದ್ದೆ ಎಂಬುದು ಸಂವಿಧಾನಿಕ ಹುದ್ದೆಯೇ ಅಥವಾ ವಿಶೇಷ ಅಧಿಕಾರವನ್ನು ಹೊಂದಿದ ಜನಪ್ರತಿನಿಧಿಗಳೇ..,,? ಎಷ್ಟೊಂದು ಸಂಘ ಸಂಸ್ಥೆಗಳು ಈ ನಾಡಿನಲ್ಲಿ ಇವೆ,  ಅದಕ್ಕೆ ಹೊರತಾದ ಸಂಘಟನೆ ಏನು ನೌಕರರ ಸಂಘ ಅಲ್ಲ.

ಇದನ್ನೂ ಓದಿ: ಅನಿಶ್ಚಿತ ಉದ್ಯೋಗ ಮತ್ತು ಕಡಿಮೆ ಆದಾಯಗಳ ಸಮಸ್ಯೆಗೆ ವಾರಕ್ಕೆ 70 ಗಂಟೆಗಳ ದುಡಿಮೆಯ ಪರಿಹಾರ !

ಅಂದರೆ ಷಡಾಕ್ಷರಿಯವರ ಈ ಹೇಳಿಕೆಯ ಹಿಂದೆ ನೌಕರರನ್ನ ದಾರಿತಪ್ಪಿಸುವುದರ ಜೊತೆಗೆ ಸರ್ಕಾರವನ್ನ ಹಾಗೂ ಸಾರ್ವಜನಿಕರನ್ನು ದಾರಿ ತಪ್ಪಿಸುವ ತಂತ್ರಗಾರಿಕೆ ಷಡಕ್ಷರಿ ಅವರದ್ದು ಏಕೆಂದರೆ ಷಡಕ್ಷರಿ ಬಿಜೆಪಿಯ ಪಡಸಾಲೆಯಲ್ಲಿ ಪಾಠ ಕಲಿತ “ಪಾರ್ಟ್ ಟೈಮ್ ಸರ್ಕಾರಿ ನೌಕರರ ಫುಲ್ ಟೈಮ್ ಬಿಜೆಪಿ ಕಾರ್ಯಕರ್ತ” ಸರ್ಕಾರಿ ನೌಕರರ ಸಂಘ ಎನ್ನುವುದು ಸರ್ಕಾರಿ ನೌಕರರು ತಮ್ಮ ಕಲ್ಯಾಣಕ್ಕಾಗಿ ಕಟ್ಟಿಕೊಂಡಿರುವ ಸೇವಾ ಸಂಘ, ಆದರೆ ತಮ್ಮ ಕರ್ತವ್ಯದ ಅವಧಿಯ ಮುಗಿದ ನಂತರ ತಮ್ಮ ಸಂಘಟನೆಯನ್ನು ಮಾಡಿಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿದೆ , ಆದರೆ ಷಡಕ್ಷರಿ ತನ್ನ ಕರ್ತವ್ಯ ಹಾಗೂ ಕಾನೂನಿಗಳನ್ನು ಗಾಳಿಗೆ ತೂರಿದ, ಷಡಕ್ಷರಿ ಸರ್ಕಾರಿ ನೌಕರಿಯ ಕರ್ತವ್ಯವನ್ನು ನಿರ್ವಹಿಸದೇ ದಿನದ 24 ಗಂಟೆಗಳ ಕಾಲ ರಾಜಕೀಯ, ವರ್ಗಾವಣೆ ದಂಧೆ, ಸಂಘಟನೆ ,ಎಂದು ಹೇಳಿ ತಿರುಗಾಡುತ್ತಾ ಸರ್ಕಾರಕ್ಕೆ ವಂಚನೆ ಮಾಡಿದ್ದು ಮೇಲುನೋಟಕ್ಕೆ ಸಾಬೀತಾಗುತ್ತದೆ.

ಎಚ್ಚರಿಕೆ ಎಂಬ ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ಗಮನಿಸಿದರೆ. ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಸೊರಬದ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ಇವರ ವಿರುದ್ಧ ಇದ್ದರು, ಷಡಕ್ಷರಿ ಮಧು ಬಂಗಾರಪ್ಪ ಇವರ ಪರವಾಗಿ ಕೆಲಸ ಮಾಡಿದ್ದರಿಂದ ಮಧು ಬಂಗಾರಪ್ಪ ಇವರು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಸಾಧ್ಯ ಎಂದು ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ, ಇದನ್ನು ಗಮನಿಸಿದರೆ ಷಡಕ್ಷರಿ ಮೇಲುನೋಟಕ್ಕೆ ರಾಜಕಾರಣ ಮಾಡಿದ್ದು ಸಾಬೀತಾಗುತ್ತದೆ ಹಾಗಾಗಿ ಇವರನ್ನು ಸರ್ಕಾರಿ ನೌಕರಿಯಿಂದ ವಜಾ ಗೊಳಿಸಬೇಕು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹಣಬಲ ಜಾತಿ ಬಲಗಳ ಮೂಲಕ ಸರ್ಕಾರವನ್ನ ಬ್ಲಾಕ್ ಮೇಲ್ ಮಾಡಲು ಹವಣಿಸುತ್ತಿದ್ದಾರೆ ಸಾಮಾನ್ಯ ನೌಕರರಿಗೆ ಒಂದು ನ್ಯಾಯ ಪ್ರಬಲ ರಾಜಕಾರಣಿಗಳ ಬೆಂಬಲವಿರುವ ಷಡಕ್ಷರಿ ಅಂತಹ ನೌಕರರಿಗೆ ಒಂದು ನ್ಯಾಯವೇ.

ವಿಡಿಯೋ ನೋಡಿ: ಖಾಲಿ ಹುದ್ದೆಗಳಿಗೆ ನಿವೃತ್ತಿ ಹೊಂದಿದವರೇ ಮರು ನೇಮಕವಾದರೆ ಯುವಕರ ಗತಿ ಏನು? ಎಂ.ಎನ್‌ ವೇಣುಗೋಪಾಲ್‌ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *