ತಿಪಟೂರು | ಸರಿಯಾಗಿ ಕಾರ್ಯನಿರ್ವಹಿಸದ ಸಂಚಾರ ದೀಪಗಳು ; ಸಾರ್ವಜನಿಕರಿಗೆ ಅಪಘಾತದ ಭೀತಿ

ತಿಪಟೂರು: ಪ್ರತಿದಿನ ವಾಹನ ಸವಾರರು ನಗರದ ಅಂಬೇಡ್ಕರ್ ವೃತ್ತದ ಬಳಿ ಅಳವಡಿಸಲಾಗಿರುವ ಸಂಚಾರ ದೀಪಗಳು ಕಳೆದ ಕೆಲ ದಿನಗಳಿಂದ ಸರಿಯಾಗಿ ಕಾರ್ಯನಿರ್ವಹಿಸದೆ ಸಾರ್ವಜನಿಕರು, ಪಾದಚಾರಿಗಳಿಗೆ ಗೊಂದಲ ಸೃಷ್ಟಿಸುವ ಜತೆಗೆ ಅವ್ಯವಸ್ಥೆ ಮತ್ತು ಅಪಘಾತದ ಭೀತಿಗೆ ಕಾರಣವಾಗಿದೆ. ನಗರದ ಮಾರನಗೆರೆಯಿಂದ ಹಾಲ್ಕುರಿಕೆ ರಸ್ತೆ, ನಗರದಿಂದ ಒಳಗೆ ಹಾಗೂ ಹೊರಗೆ ಹೋಗುವ ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಸಂಚಾರ ದೀಪದ ವ್ಯವಸ್ಥೆಯೇ ಇಲ್ಲವಾಗಿದೆ.  ತಿಪಟೂರು

ಮತ್ತೊಮ್ಮೆ ಯಾವುದೇ ಸೂಚನೆ ನೀಡದೆ ಹಸಿರು ದೀಪ ಹೊಳೆಯುವುದರಿಂದ ಅಡ್ಡ ರಸ್ತೆಯಿಂದ ಬರುತ್ತಿರುವ ವಾಹನ ಸವಾರರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ‌ಕೆಲವೊಮ್ಮೆ ಕೆಂಪು ದೀಪ ಬಹಳ ಹೊತ್ತು ಹೊಳೆಯುತ್ತಿದ್ದು, ವಾಹನಗಳು ಅನಗತ್ಯವಾಗಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಅಪಘಾತ ಸಂಭವಿಸುತ್ತಿದ್ದು ಸವಾರರು ಒಬ್ಬರನ್ನು ಒಬ್ಬರು ನಿಂದಿಸಿಕೊಂಡು ಸಂಚಾರ ಮಾಡಬೇಕಾಗಿದೆ. ತಿಪಟೂರು

ಇದನ್ನೂ ಓದಿ: ಮಲಯಾಳಂ ಸಿನಿಮಾದಲ್ಲಿ ಬೆಂಗಳೂರು ಯುವತಿಯರಿಗೆ ಅವಹೀಳನ ಹೇಳಿಕೆ; ಆಕ್ರೋಶ

ಯಾವುದೇ ವೃತ್ತದಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡಲು ಹಾಗೂ ಸರಿಯಾದ ಸಂಚಾರ ದೀಪಗಳ ವ್ಯವಸ್ಥೆ ಸರಿಪಡಿಸಲು ಯಾವ ಪೊಲೀಸ್ ಸಿಬ್ಬಂದಿ‌ ನಿಯೋಜನೆ ಮಾಡದೆ ಇರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಸಾರ್ವಜನಿಕರು ಹಲವು ಬಾರಿ ನಗರಸಭೆಗೆ ದೂರು ಸಲ್ಲಿಸಿದರೂ ನಗರಸಭೆ ಅಧಿಕಾರಿಗಳು ‘ಈ ಕಾರ್ಯ ಪೊಲೀಸ್ ಇಲಾಖೆ ಹೊಣೆ ಎಂದು ಹೇಳಿಕೊಂಡರೆ, ಪೊಲೀಸ್ ಇಲಾಖೆ ಇದು ನಗರಸಭೆ ತಾಂತ್ರಿಕ ವಿಭಾಗದ ಕೆಲಸ ಎಂದು ಹೊಣೆ ತಪ್ಪಿಸಿಕೊಂಡಿದ್ದಾರೆ. ಈ ರೀತಿಯಾಗಿ ಒಬ್ಬರ ಮೇಲೊಬ್ಬರು ಜವಾಬ್ದಾರಿ ಹಾಕಿಕೊಳ್ಳುವ ಆಟದಲ್ಲಿ ಸಮಸ್ಯೆ ಬಗೆಹರಿಯದೆ ಜನರಿಗೆ ತೊಂದರೆ ಮಾತ್ರ ಹೆಚ್ಚಾಗಿದೆ’.

ಸಂಚಾರ ದೀಪಗಳ ಅವ್ಯವಸ್ಥೆಯಿಂದ ಎಲ್ಲ ಕಡೆಗಳಿಂದ ಏಕಾಏಕಿ ವಾಹನಗಳ ಸಂಚಾರ

ಸಂಚಾರ ದೀಪಗಳ ಅವ್ಯವಸ್ಥೆಯಿಂದ ಎಲ್ಲ ಕಡೆಗಳಿಂದ ಏಕಾಏಕಿ ವಾಹನಗಳ ಸಂಚಾರ

ಈಗಿನ ಪರಿಸ್ಥಿತಿ ಹಳೆಯದಕ್ಕಿಂತಲೂ ಗೊಂದಲ ಹೆಚ್ಚಿಸುವಂತಾಗಿದೆ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆ ಶಾಲಾ ಮಕ್ಕಳು, ಉದ್ಯೋಗಿಗಳು ಹಾಗೂ ವೃದ್ಧರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಅವ್ಯವಸ್ಥೆ ಅನುಭವಿಸುತ್ತಿರುವುದು ಕಂಡು ಬರುತ್ತಿದೆ. ‘ಸಂಚಾರ ದೀಪ ಅಳವಡಿಸಿದಾಗ ಸಂಚಾರಕ್ಕೆ ಸ್ವಲ್ಪ ನಿಯಂತ್ರಣ ಸಿಗುತ್ತದೆ ಎಂದು ಭಾವಿಸಿದ್ದೇವೆ.

ಸಾಮಾನ್ಯ ಜನರ ಸುರಕ್ಷತೆ ಹಾಗೂ ಸಂಚಾರದ ಶಿಸ್ತು ಕಾಯ್ದುಕೊಳ್ಳಲು ಸಂಚಾರ ದೀಪ ತುರ್ತಾಗಿ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ಯಾವುದೇ ಸಮಯದಲ್ಲಿದಾರೂ ತುಂಬಾ ಗಂಭೀರ ಅಪಘಾತ ಸಂಭವಿಸುವ ಸಾಧ್ಯತೆ ಇದೆ.

ಇದನ್ನೂ ನೋಡಿ: ಘನತೆಯ ಬದುಕು ನಮ್ಮ ಹಕ್ಕು | ಜನವಾದಿ ಮಹಿಳಾ ಸಂಘಟನೆ ; 12ನೇ ರಾಜ್ಯ ಸಮ್ಮೇಳನJanashakthi Media

Donate Janashakthi Media

Leave a Reply

Your email address will not be published. Required fields are marked *