ಬೆಂಗಳೂರು : ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ ಚುನಾವಣೆ ಸಂಬಂಧ, ರಾಜ್ಯ ಚುನಾವಣಾ ಆಯೋಗವು, ಸದಸ್ಯರ ಸ್ಥಾನಗಳ ಪಟ್ಟಿಯನ್ನು ಗೆಜೆಟ್ ನೋಟಿಫಿಕೇಷನ್ ಮೂಲಕ ಬಿಡುಗಡೆ ಮಾಡಿದೆ.
ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ.ರಂಜಿತಾ ಅವರು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ಎಲ್ಲಾ 31 ಜಿಲ್ಲಾ ಪಂಚಾಯಿತಿ ಮತ್ತು 239 ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸಂಖ್ಯೆಗಳ ಅಧಿಸೂಚನೆ ಪ್ರಕಟಿಸಲಾಗಿದೆ.
ಚುನಾವಣಾ ಆಯೋಗ ಪ್ರಕಟಿಸಿರುವಂತೆ ಈ ಬಾರಿ ಜಿಲ್ಲಾ ಪಂಚಾಯ್ತಿಗಳ ಒಟ್ಟು ಸ್ಥಾನಗಳ ಸಂಖ್ಯೆ 1.191 ಆಗಿದ್ದರೇ, ತಾಲೂಕು ಪಂಚಾಯ್ತಿಗಳ ಒಟ್ಟು ಸ್ಥಾನಗಳ ಸಂಖ್ಯೆ 3,285 ಆಗಿದೆ. ಇಂತಹ ಸ್ಥಾನಗಳಿಗೆ ಮುಂದಿನ ಮೇ ಅಥವಾ ಜೂನ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದೇ ಕಾರಣಕ್ಕಾಗಿ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ಪ್ರಕಟಿಸಿರುವುದಾಗಿ ತಿಳಿದು ಬಂದಿದೆ.
ಜಿಲ್ಲಾವಾರು ಜಿ.ಪಂ, ತಾ.ಪಂ ಚುನಾವಣೆ ಕ್ಷೇತ್ರದ ಸ್ಥಾನಗಳ ಸಂಖ್ಯೆಯ ವಿವರ ಈ ರೀತಿ ಇದೆ.