ಕಳ್ಳತನ ಆರೋಪ: ಗುಪ್ತಾಂಗಗಳಿಗೆ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ

ದಾವಣಗೆರೆ: ಶುಕ್ರುವಾರ ಏಪ್ರಿಲ್​ 4ರಂದು, ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರ ಬಳಿ ಇರುವ ಅಸ್ತಾಪನಹಳ್ಳಿಯಲ್ಲಿ ಕಳ್ಳತನ ಸೇರಿದಂತೆ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ಬಾಲಕರನ್ನು ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದು, ಜೊತೆಗೆ ಗುಪ್ತಾಂಗಗಳಿಗೆ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಚಿತ್ರಹಿಂಸೆ ನೀಡಿರುವ ವಿಡಿಯೋ ಕೂಡ ಎಲ್ಲೆಡೆ ಹರಿದಾಡುತ್ತಿದೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಪೊಲೀಸರು 9 ಜನರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಸುಭಾಷ್​ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಹಕ್ಕಿ- ಪಿಕ್ಕಿ ಜನಾಂಗದ ಬಾಲಕರ ಮೇಲೆ ಅದೇ ಜನಾಂಗದ ಹತ್ತು ಯುವಕರಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದ ಹತ್ತು ಜನರ ಪೈಕಿ ನಾಲ್ವರು ಅಪ್ರಾಪ್ತರು. ಸುಭಾಷ್ (23), ಲಕ್ಕಿ(21), ದರ್ಶನ್ (22), ಪರಶು (25), ಶಿವದರ್ಶನ್ (23), ಹರೀಶ್ (25), ಪಟ್ಟಿ ರಾಜು(20), ಭೂಣಿ (18), ಸುಧನ್ ಅಲಿಯಾಸ್ ಮಧುಸೂಧನ್ ವಿರುದ್ದ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಗಾಜಾದಲ್ಲಿ ನರಮೇಧ ತಕ್ಷಣ ನಿಲ್ಲಬೇಕು, ಇಸ್ರೇಲನ್ನು ಜನಾಂಗ ದ್ವೇಷ ನೀತಿಯ ರಾಷ್ಟ್ರವೆಂದು ಘೋಷಿಸಿ ಕ್ರಮ ಕೈಗೊಳ್ಳಬೇಕು-ಸಿಪಿಐ(ಎಂ) ಮಹಾಧಿವೇಶನದ ಕರೆ

ಗಿಡ ಮೂಲಿಕೆ ಮಾರಾಟ ಮಾಡಿ ಹಕ್ಕಿ ಪಿಕ್ಕಿ ಜನಾಂಗದ ಜನ ಜೀವನ ನಡೆಸುತ್ತಾರೆ. ಇದು ಕೆಲ ತಿಂಗಳ ಹಿಂದೆ ನಡೆದ ಘಟನೆ ಎನ್ನಲಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿರುವ ಸಾದ್ಯತೆ ಎಂಬುದು ಸ್ಥಳೀಯರ ಮಾತಾಗಿದೆ.

ಅಸ್ತಾಪನಹಳ್ಳಿ ಗ್ರಾಮದ ದರ್ಶನ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದ. ಬಳಿಕ ಬಾಲಕನನ್ನು ಹಿಡಿದು ಅಡಕೆ ತೋಟಕ್ಕೆ ಕರೆದೊಯ್ದು ಹಲ್ಲೆ‌ ಮಾಡಲಾಗಿದೆ. ಕಳ್ಳತನಕ್ಕೆ ಸಹಕರಿಸಿದ್ದ ಇನ್ನೊಬ್ಬ ಬಾಲಕನಿಗೂ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಹಲ್ಲೆಗೊಳಗಾದ ಬಾಲಕನ ತಾತನಿಂದ ಚನ್ನಗಿರಿ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ 9 ಯುವಕರ ವಿರುದ್ಧ FIR ದಾಖಲಾಗಿದೆ.

ಇದನ್ನೂ ನೋಡಿ: ವಕ್ಫ್‌ ತಿದ್ದುಪಡಿ ಮಸೂದೆಗೆ ವಿರೋಧ ಯಾಕೆ? ಯಾವುದು ವಕ್ಫ್‌ ಆಸ್ತಿ? ವಕ್ಫ್‌ ಬೋರ್ಡ್‌ ಯಾಕೆ ಬೇಕು?Janashakthi Media

Donate Janashakthi Media

Leave a Reply

Your email address will not be published. Required fields are marked *