ಕೊಲಾರ: ವಾತಾವರಣದಲ್ಲಿ ವ್ಯತ್ಯಯವಾಗಿದ್ದು ಬೆಳೆ ದಿಢೀರ್ ಕುಸಿದಿದೆ. ಟೊಮೆಟೊ ಬೆಳೆದ ವೇಮಗಲ್ ಹೋಬಳಿ ರೈತರು ಅಕ್ಷರಶಃ ಕಣ್ಣೀರಿಡುವಂತಾಗಿದೆ. ಬೆಳೆಗಾರರು ಕೆಂಪು ಸುಂದರಿಯನ್ನು ನಂಬಿಕೊಂಡು ನೆಲಕ್ಕೆ ಬೀಳುವಂತಾಗಿದೆ. ಕೊಲಾರ
ಕ್ಯಾಲನೂರು, ಸೀತಿ, ಮದ್ದೇರಿ, ಬೈರಂಡಹಳ್ಳಿ, ಚಲ್ಡಿಗಾನಹಳ್ಳಿ, ಕಡಗಟ್ಟೂರು, ಅಗ್ರಹಾರ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆಯಲಾಗಿದೆ. ವೇಮಗಲ್ ಹೋಬಳಿಯಾದ್ಯಂತ 130-160 ಹೆಕ್ಟೇರ್ ಟೊಮೆಟೊ ಬೆಳೆಯಲಾಗಿದೆ. ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾದ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ 10-15 ದಿನಗಳ ಹಿಂದೆ 15ಕೆ.ಜಿ ತೂಕದ ಒಂದು ಬಾಕ್ಸ್ ಬೆಲೆ ₹750ರಿಂದ 850ಕ್ಕೆ ಮಾರಾಟವಾಗುತ್ತಿತ್ತು. ಆದರೆ, ಎರಡು ಮೂರು ದಿನಗಳಿಂದ ₹100 ರಿಂದ ₹200ಗೆ ಬೆಲೆ ಕುಸಿಯುತ್ತಿದೆ. ಕೊಲಾರ
ಇದನ್ನೂ ಓದಿ: ಬೆಂಗಳೂರ | ಸೇವಾ ನಿರತ ಶಿಕ್ಷರಿಗೂ ಟಿಇಟಿ ಕಡ್ಡಾಯ ; ಶಿಕ್ಷಣ ತಜ್ಙರ ಅಸಮಾಧಾನ
ಈ ಹಿಂದೆ ಕೋಲಾರ ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್ ಟೊಮೆಟೊಗೆ ₹2,300 ರಿಂದ 2,600ವರೆಗೆ ಮಾರಾಟವಾಗಿ ದಾಖಲೆ ಬರೆದಿತ್ತು. ಈಗ ನೆರೆಯ ರಾಷ್ಟ್ರಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಟೊಮೆಟೊ ಅವಕ ಕಡಿಮೆ ಇದೆ ಎನುತ್ತಾರೆ ವರ್ತಕರು. ಕೊಲಾರ
ಕರ್ನಾಟಕದಲ್ಲಿ ಟೊಮೆಟೊಗೆ ಯಾವ ಕಾರಣಕ್ಕೆ ಬೆಲೆ ಸಿಗುತ್ತಿಲ್ಲವೋ ತಿಳಿಯುತ್ತಿಲ್ಲ. ಮೊದಲೆಲ್ಲ ಒಂದು ಬಾರಿ ಬೆಲೆ ಏರಿಕೆಯಾದರೆ ತಿಂಗಳುಗಟ್ಟಲೇ ಇರುತ್ತಿತ್ತು. ಆದರೆ, ಈಗ ಪ್ರತಿದಿನ ಬೆಲೆ ಕುಸಿಯುತ್ತಿದೆ. ಮಳೆ ಹಾಗೂ ವಿಪರೀತ ತಂಪು ವಾತಾವರಣ ಇರುವುದರಿಂದ ಟೊಮೆಟೊಗೆ ಬಿಳಿ ನೊಣ, ಅಂಗಮಾರಿ, ಸೊರಗು ರೋಗ ಹೀಗೆ ನಾನಾ ತರದ ರೋಗ
ಕಾಡಲಾರಂಭಿಸಿದೆ.
ಕಳದೊಂದು ವರ್ಷದಿಂದ ಟೊಮೆಟೊ ಬೆಳೆಗೆ ಉತ್ತಮವಾದ ಬೆಲೆಯೇ ಸಿಕ್ಕಿಲ್ಲ. ಮೂರು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದು ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದೆ. ಲಕ್ಷಾಂತರ ರೂಪಾಯಿ ಗೊಬ್ಬರ, ಔಷಧಿಗೆ ಖರ್ಚಾಗಿದೆ. ಹಾಕಿರುವ ಬಂಡವಾಳ ಸಿಗುವುದೇ ಅನುಮಾನ ಎನ್ನುತ್ತಾರೆ ಚಲ್ಡಿಗಾನಹಳ್ಳಿ ಪ್ರಗತಿಪರ ಯುವ ರೈತ ಆನಂದ್ ಗೌಡ.
ಟೊಮೆಟೊ ಬೆಳೆಯಿಂದ ತಯಾರಿಸಲಾಗುವ ವಿವಿಧ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸುವುದರಿಂದ ಬೆಳೆಗಾರರಿಗೆ ಹೆಚ್ಚಿನ ಸಹಾಯ ನೀಡಿದಂತಾಗುತ್ತದೆ. ಕೈಗಾರಿಕಾ ಸ್ಥಾಪನೆಗಳಿಗೆ ಒಲವು ತೋರಿಸುತ್ತಿರುವ ಜಿಲ್ಲಾಡಳಿತ ಕೃಷಿ ಸಂಬಂಧಿಸಿದ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮ ಶಿವಣ್ಣ ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: 40 ವರ್ಷ ನಡೆದ ಕ್ರೈಮ್ 20 ದಿನದಲ್ಲಿ ಹೇಗೆ ಸಿಗುತ್ತೆ? ಅದಕ್ಕಿನ್ನೂ ಸಮಯ ಬೇಕು Janashakthi Media
