ಡೀಸೆಲ್ ದರ; ಟೋಲ್ ದರಗಳ ಏರಿಕೆಗಳು ಜನಸಾಮಾನ್ಯರ ಮೇಲೆ ಹೊರೆ

ದರ ಏರಿಕೆ ಕೈ ಬಿಡಲು ಸಿಪಿಐ(ಎಂ) ಆಗ್ರಹ

ಬೆಂಗಳೂರು: ರಾಜ್ಯದ ಜನರು ಯುಗಾದಿ ಹಬ್ಬದದ ಮುನ್ನವೇ ಹಾಲಿನ ಬೆಲೆ, ವಿದ್ಯುತ್ ದರ ಮತ್ತು ಕಸ ಸಂಗ್ರಹಣೆ ದರ ಏರಿಕೆಯ‌ ಕಹಿಗಳನ್ನು ಅನುಭವಿಸುತ್ತಿರುವಾಗಲೇ ಏಪ್ರೀಲ್ 1 ರಾತ್ರಿಯಿಂದ ಅನ್ವಯವಾಗುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಡೀಸೆಲ್ ದರ ಪ್ರತಿ ಲೀಟ‌ರ್ ಗೆ ₹2ರಷ್ಟು ಏರಿಕೆಯಾಗಿ ಮಾಡಿರುವುದು ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಶೇ 4 ರಿಂದ 5 ರಷ್ಟು ಟೋಲ್ ದರಗಳನ್ನು ಏರಿಕೆ ಮಾಡಿರುವುದು ಅತ್ಯಂತ ಜನವಿರೋಧಿ‌ ಕ್ರಮಗಳಾಗಿವೆ. ಈ ಎರಡು ದರ ಏರಿಕೆಗಳನ್ನು ಕೂಡಲೇ ಕೈ ಬಿಡಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಪಡಿಸಿದೆ ಎಂದು ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್ ಹೇಳಿದ್ದಾರೆ.

ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 18.44ರಿಂದ ಶೇ 21.77ಕ್ಕೆ ಏರಿಕೆ ಮಾಡಿ, ಅದೇಶಿಸಿದೆ. ಬೆಂಗಳೂರಿ ನಲ್ಲಿ ₹89.02 ಇದ್ದ ಡೀಸೆಲ್ ಬೆಲೆ ₹91.02 ಆಗಲಿದೆ. ಉಳಿದ ಜಿಲ್ಲೆ ಗಳಲ್ಲಿ ಈಗಿರುವ ದರಕ್ಕೆ ಅನುಗುಣವಾಗಿ ಶೇಕಡಾ 2.73ರಷ್ಟು ಹೆಚ್ಚಳವಾಗಲಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಈಗ ತೆರಿಗೆ ದರ ಏರಿಕೆಯ ನಂತರ ಮಾರಾಟ ಬೆಲೆ ಹೆಚ್ಚಳವಾದರೂ, ನೆರೆಯ ರಾಜ್ಯಗಳಿಗಿಂತ ಕರ್ನಾಟಕ ದಲ್ಲಿಯೇ ಡೀಸೆಲ್ ಬೆಲೆ ಕಡಿಮ ಇರಲಿದೆ’ ಎಂದು ಸರ್ಕಾರದ ಆರ್ಥಿಕ ಇಲಾಖೆ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವುದು ಅರ್ಥಹೀನ ಎಂಬುದು ಸಿಪಿಐ(ಎಂ) ಅಭಿಪ್ರಾಯ ವಾಗಿದೆ.

ಗ್ಯಾರಂಟಿ ಯೋಜನೆಗೆ ಹಣ‌ನೀಡುವ ನೆಪದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಜನ ಸಾಮಾನ್ಯರ ಬದುಕಿ ಮೇಲೆ ಬೆಲೆ ಏರಿಕೆಯ ಗದಾ ಪ್ರಹಾರವನ್ನೇ ಹರಿಯಬಿಟ್ಟಿದೆ. ಶಾಸಕರ ಸಂಬಳ ಭತ್ಯೆಗಳನ್ನು ಯಾವ ನಾಚಿಕೆ ಇಲ್ಲದೆ ಹೆಚ್ಚಿಸಿಕೊಂಡ ಕಾಂಗ್ರೆಸ್ ಬಿಜೆಪಿ ಹಾಗೂ ಜನತಾದಳ ಶಾಸಕರು ಜನಸಾಮಾನ್ಯರ ಬದುಕಿಗೆ‌ಮಾತ್ರ ಯಾವುದೇ ರಿಯಾಯಿತಿ ನೀಡದಿರುವುದು ಖಂಡನಾರ್ಹವಾಗಿದೆ ಎಂದರು.

ಇದನ್ನೂ ಓದಿ: ಖಾಸಗಿ ಬಸ್ ಗೆ ಬೆಂಕಿ – ಸಂಪೂರ್ಣ ಸುಟ್ಟು ಭಸ್ಮ, ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

ರಜೆ ದಿನಗಳಲ್ಲಿ ಟೋಲ್ ದರ ಹೆಚ್ಚಳದಿಂದ ಜನರ ಬದುಕು ಮತ್ತಷ್ಟು ದುಸ್ಥರ;

ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ದರವನ್ನು ಶೇ 4ರಿಂದ ಶೇ 5ರಷ್ಟು ಹೆಚ್ಚಳ ಮಾಡಿದ್ದು, ಮಂಗಳವಾರದಿಂದಲೇ ಜಾರಿಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ನೀತಿಯು ಜನಸಾಮಾನ್ಯರ ಬದುಕನ್ನು ಮತ್ತಷ್ಟು ದುಸ್ಥರಗೊಳಿಸಿದೆ ಎಂಬುದು ಸಿಪಿಐ(ಎಂ) ಅಭಿಪ್ರಾಯ ವಾಗಿದೆ.

ಏಪ್ರಿಲ್ 03 ರಂದು ಸಿಪಿಐ(ಎಂ) ಪ್ರತಿಭಟನೆ

ದೇಶದ ಕೋಟ್ಯಂತರ ಜನರ ರಜಾಕಾಲದ ಈ ದಿನಗಳಲ್ಲಿ ಪ್ರವಾಸ,ಮದುವೆ ಹಬ್ಬ ಇತ್ಯಾದಿಗಳಲ್ಲಿ ಕುಟುಂಬದ ಸದಸ್ಯರು ಬಂಧು‌ಬಳಗಗಳ ಜತೆ ದೂರ ದೂರ ಪ್ರದೇಶಗಳಿಗೆ ವಾಹನಗಳಲ್ಲಿ‌ ಸಂಚರಿಸುವ ಅನಿವಾರ್ಯತೆಯಲ್ಲಿ ಇದ್ದಾರೆ.ಇಂತಹ ಅವಕಾಶವನ್ನೇ ಬಳಸಿ ಕೇಂದ್ರ ಸರ್ಕಾರ ಜನರ ಬದುಕಿನ ಮೇಲೆ ಮತ್ತಷ್ಟು ಹೊರೆ ಹೊರಿಸಲು ಹೊರಟಿರುವುದು ಅನ್ಯಾಯದ ಪರಮಾವಧಿಯಾಗಿದೆ ಎಂದು ಹೇಳಿದರು.

ಈಗಾಗಲೇ ನಿರಂತರವಾಗಿ ಏರುತ್ತಿರುವ ಬೆಲೆಗಳಿಂದಾಗಿ ಮತ್ತು ಮೋದಿ ಸರ್ಕಾರದ ಶ್ರೀಮಂತ ಪರ ನೀತಿಗಳಿಂದಾಗಿ ಈಗಾಗಲೇ ಜನಸಾಮಾನ್ಯರ ಬದುಕು‌ ಸಂಕಷ್ಟಕ್ಕೆ ಸಿಲುಕಿದೆ.

ಜನರ ಬದುಕಿನ ಪ್ರಶ್ನೆ ಬಂದಾಗಲೆಲ್ಲ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸದಾ ಒಂದೇ ನಾಣ್ಯದ ಎರಡು ಮುಖಗಳು ಎನ್ನುವ‌ ಮಾತುಗಳು ಈ ಡೀಸೆಲ್ ಹಾಗೂ ಟೋಲ್ ದರ ಏರಿಕೆ ವಿಷಯದಲ್ಲಿ ಸಾಭೀತಾಗಿವೆ. ಒಟ್ಟಾರೆ ಎರಡು ಸರ್ಕಾರಗಳ ಈ ನೀತಿಗಳು ಕಾರ್ಪೊರೇಟ್ ವಲಯದವನ್ನು ತುಷ್ಟೀಕರಣಗೊಳಿಸುವ ಹಂಬಲ ಹೊಂದಿವೆ ಎಂದರು.

ಇಂತಹ ನೀತಿಗಳ ವಿರುದ್ದ ಸಿಪಿಐ(ಎಂ) ತನ್ನ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ ಎಂದರು.

ಇದನ್ನೂ ನೋಡಿ: ಶತಮಾನದ ಸೇಡಿನ ಕಿಡಿಜಗದೊಲವಿನ ಜ್ಯೋತಿಯೆ |ಪಿಚ್ಚಳ್ಳಿ ಶ್ರೀನಿವಾಸ್ Janashakthi Media

Donate Janashakthi Media

Leave a Reply

Your email address will not be published. Required fields are marked *